Home
Deal of the day

3000 ಡಿಸ್ಕೌಂಟ್.. iQOO 12 ಬೆಲೆ ದಿಢೀರ್‌ ಕುಸಿತ! 64MP ಕ್ಯಾಮೆರಾ.. 512GB ಸ್ಟೋರೇಜ್.. ಹೊಸ ಬೆಲೆ ನೋಡಿ

ಐಕ್ಯೂ ಪ್ರಿಯರಿಗೆ ಡಬಲ್ ಸಿಹಿಸುದ್ದಿ ಇಲ್ಲಿದೆ. ಒಂದು.. ಡಿಸೆಂಬರ್ 3 ರಂದು ಹೊಸ ಐಕ್ಯೂ 13 (iQOO 13) ಮೊಬೈಲ್ ಬಿಡುಗಡೆಯಾಗಲಿದೆ. ಮತ್ತೊಂದು.. ಐಕ್ಯೂ 13 ಬಿಡುಗಡೆಗೂ ಮೊದಲೇ, ಐಕ್ಯೂ 12 (iQOO 12) ಫೋನಿನ ಬೆಲೆಯನ್ನು ಇಳಿಕೆ ಮಾಡಿದೆ. ಹೌದು, ಕಂಪನಿಯು ಅಮೆಜಾನ್‌ನಲ್ಲಿ 3000 ರೂ. ಡಿಸ್ಕೌಂಟ್ ನೀಡುತ್ತಿದೆ. ಈ ಮೂಲಕ ತನ್ನ ಗ್ರಾಹಕರ ಗಮನ ಸೆಳೆದಿದೆ. ಬನ್ನಿ, ಈ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಕಂಪನಿಯು ಐಕ್ಯೂ 12 ಫೋನನ್ನು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟ ಮಾಡುತ್ತಿದೆ. ಈ ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ. ಫೋನಿನಲ್ಲಿ 64 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಈ ಮೊಬೈಲ್ 6.78 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದರೊಂದಿಗೆ 16GB RAM + 512GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 120W ಫ್ಲಾಶ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

3000 ಅಗ್ಗ! iQOO 12 ಬೆಲೆ ಇಳಿಕೆ; 64MP ಕ್ಯಾಮೆರಾ, 512GB ಸ್ಟೋರೇಜ್.. ಹೇಗಿದೆ?

ಐಕ್ಯೂ 12 ಫೋನಿನ ಹೊಸ ಬೆಲೆ ಮತ್ತು ಆಫರ್‌ಗಳು

ನೀವು ಐಕ್ಯೂ 12 ಫೋನನ್ನು 12GB RAM + 256GB ಸ್ಟೋರೇಜ್ ಮತ್ತು 16GB RAM + 512GB ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಸಬಹುದು. ಐಕ್ಯೂ ಅಧಿಕೃತ ವೆಬ್‌ಸೈಟ್ ಮತ್ತು ಅಮೆಜಾನ್‌ನಲ್ಲಿ ಫೋನಿನ ಮೇಲೆ ಡಿಸ್ಕೌಂಟ್ ನೀಡಲಾಗುತ್ತಿದೆ. ಈ ಆಫರ್‌ ನವೆಂಬರ್ 31ರ ವರೆಗೆ ಮಾತ್ರ ಲಭ್ಯವಿರುತ್ತದೆ.

ಪ್ರಸ್ತುತ, ಐಕ್ಯೂ 12 ಫೋನಿನ 12GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 52,999 ರೂ. ಮತ್ತು 16GB RAM + 512GB ಸ್ಟೋರೇಜ್ ಬೆಲೆ 57,999 ರೂ.ಗೆ ಲಭ್ಯವಿದೆ. ನೀವು ಐಸಿಐಸಿಐ, ಎಚ್‌ಡಿಡಫ್‌ಸಿ ಬ್ಯಾಂಕ್ ಕಾರ್ಡ್‌ಗಳ ಪಾವತಿ ಮೇಲೆ 3,000 ರೂ. ರಿಯಾಯಿತಿಯನ್ನು ಪಡೆಯಬಹುದು. ಡಿಸ್ಕೌಂಟ್‌ ಬಳಿಕ ನೀವು, ಈ ಫೋನನ್ನು 49,999 ರೂ.ಗೆ ಕೊಳ್ಳಬಹುದು. ಅಮೆಜಾನ್‌ನಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಬಹುದು.

ಐಕ್ಯೂ 12 ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಐಕ್ಯೂ 12 ಮೊಬೈಲ್ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 3000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಡಿಸ್ಪ್ಲೇಯು 144 Hz ರಿಫ್ರೆಶ್ ದರ,1200Hz ಟಚ್ ಸ್ಯಾಂಪ್ಲಿಂಗ್ ದರದ ಬೆಂಬಲ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಐಕ್ಯೂ 12 ಫೋನಿನಲ್ಲಿ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ ಅಳವಡಿಸಿದೆ. ಗ್ರಾಫಿಕ್ಸ್‌ಗಾಗಿ, ಅಡ್ರಿನೊ 750 ಜಿಪಿಯು ಹೊಂದಿದೆ. ಇದು ಆಂಡ್ರಾಯ್ಡ್‌ 14 ಆಧಾರಿತ Funtouch OS 14 ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ 16GB RAM ಮತ್ತು 512GB ಸ್ಟೋರೇಜ್ ಹೊಂದಿದೆ.

ಕ್ಯಾಮೆರಾ ಸೆಟಪ್

ಐಕ್ಯೂ 12 ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. 3X ಆಪ್ಟಿಕಲ್ ಜೂಮ್ ಸಾಮರ್ಥ್ಯದೊಂದಿಗೆ 64 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಐಕ್ಯೂ 12 ಫೋನಿನಲ್ಲಿ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು, 120W ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ

ಇತರೆ ವೈಶಿಷ್ಟ್ಯಗಳು

ಐಕ್ಯೂ 12 ಮೊಬೈಲ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP64 ರೇಟಿಂಗ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈ-ಫೈ 7, ಬ್ಲೂಟೂತ್ 5.4, ಜಿಪಿಎಸ್‌, ಎನ್‌ಎಫ್‌ಸಿ ಮತ್ತು ಯುಎಸ್‌ಬಿ 2.0 ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
iQOO 12 Price drop On Amazon Ahead Of iQOO 13 Launch In India: know price, offers, availability specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+