Home
Deal of the day

ಸೂಪರ್ ಆಫರ್! ಕಮ್ಮಿ ಬೆಲೆಗೆ iQOO Neo 10R ಲಭ್ಯ.. 4000ಕ್ಕಿಂತ ಹೆಚ್ಚು ರಿಯಾಯಿತಿ.. ಫೀಚರ್ಸ್ ಹೀಗಿವೆ!

ಅಮೆಜಾನ್‌ನಲ್ಲಿ ಐಕ್ಯೂ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಅದ್ಭುತ ಆಫರ್ ಲಭ್ಯವಿದೆ. ಹೊಸ ಗೇಮಿಂಗ್ ಫೋನ್ ಬಿಡುಗಡೆ ಬೆಲೆಗಿಂತ ಕಡಿಮೆಗೆ ಮಾರಾಟವಾಗುತ್ತಿದೆ. ಹೌದು, ಅಮೆಜಾನ್‌ನಲ್ಲಿ ಪ್ರಾರಂಭವಾಗಿರುವ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ (Amazon Great Summer Sale 2025) ಐಕ್ಯೂ ನಿಯೋ 10R (iQOO Neo 10R) ಖರೀದಿ ಮೇಲೆ ಭಾರೀ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಎಕ್ಸ್‌ಚೇಂಜ್ ಆಫರ್ ಮತ್ತು ಬ್ಯಾಂಕ್ ಕಾರ್ಡ್‌ ರಿಯಾಯಾತಿ ಪಡೆಯಬಹುದು. ಪ್ರಸ್ತುತ, ನೀವು ಈ ಮೊಬೈಲ್ ಬುಕ್ ಮಾಡಿದರೆ, ಹೆಚ್ಚು ಹಣ ಉಳಿತಾಯ ಮಾಡಬಹುದು.

ಐಕ್ಯೂ ನಿಯೋ 10R ಫೋನಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದು ಗೇಮಿಂಗ್ ಪ್ರಿಯರ ಮೆಚ್ಚುಗೆ ಪಡೆದಿದೆ. ಈ ಮೊಬೈಲ್ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್ 6000mm2 ವೇಪರ್ ಕೂಲಿಂಗ್ ಚೇಂಬರ್ ಹೊಂದಿದೆ. ಈ ಫೋನ್ 6.78 ಇಂಚಿನ ಡಿಸ್ಪ್ಲೇ ಮತ್ತು 256GB ಸ್ಟೋರೇಜ್ ಆಯ್ಕೆ ಹೊಂದಿದೆ. ಈ ಫೋನಿನಲ್ಲಿ 6400mAh ದೊಡ್ಡ ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳಿವೆ.

ಕಮ್ಮಿ ಬೆಲೆಗೆ iQOO Neo 10R ಲಭ್ಯ! 4000 ರಿಯಾಯಿತಿ.. ಫೀಚರ್ಸ್ ನೋಡಿ

ಐಕ್ಯೂ ನಿಯೋ 10R ಹೊಸ ಬೆಲೆ

8GB RAM + 128GB ಸ್ಟೋರೇಜ್ = 26,999 ರೂ.
8GB RAM + 256GB ಸ್ಟೋರೇಜ್ = 28,999 ರೂ.
12GB RAM + 256GB ಸ್ಟೋರೇಜ್ = 30,999 ರೂ.

ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್‌ ಮೂನ್‌ನೈಟ್ ಟೈಟಾನಿಯಂ ಮತ್ತು ರೇಜಿಂಗ್ ಬ್ಲೂ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನಿನ ಆರಂಭಿಕ ಬೆಲೆ 26,999 ರೂ. ಆಗಿದೆ. ಅಮೆಜಾನ್‌ನಲ್ಲಿ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ ಪ್ರಸ್ತುತ, ಈ ಫೋನಿನ ಬೆಲೆ 2001 ರೂ. ಇಳಿಕೆಯಾಗಿದೆ. ಹೆಚ್ಚುವರಿಯಾಗಿ 2000 ರೂ. ತಕ್ಷಣದ ಬ್ಯಾಂಕ್ ರಿಯಾಯಿತಿ ಲಭ್ಯವಿದೆ. ಇದರೊಂದಿಗೆ, ನೀವು 24,998 ರೂ. ಬಜೆಟ್ ಒಳಗೆ ಈ ಮೊಬೈಲ್ ಅನ್ನು ಆರ್ಡರ್ ಮಾಡಬಹುದು.

ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್‌ ಒಟ್ಟು 4,001 ರೂ.ಗಳ ರಿಯಾಯಿತಿಯಲ್ಲಿ ಖರೀದಿಗೆ ಲಭ್ಯವಿದೆ. ವಿಶೇಷವೆಂದರೆ, ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ತ್ವರಿತ ಬ್ಯಾಂಕ್ ರಿಯಾಯಿತಿ ನೀಡಲಾಗುತ್ತದೆ. ನೀವು ಅದೇ ಕಾರ್ಡ್ ಬಳಸಿ ಇಎಂಐ ಆಯ್ಕೆಯ ಮೂಲಕ ಖರೀದಿಸಿದರೆ 2,500 ರೂ.ಗಳ ರಿಯಾಯಿತಿ ಸಿಗುತ್ತದೆ. ಈ ಮೂಲಕ, ನೀವು ಇದನ್ನು ಮತ್ತಷ್ಟು ಅಗ್ಗದ ಬೆಲೆಗೆ ಖರೀದಿಸಬಹುದು.

ಐಕ್ಯೂ ನಿಯೋ 10R ವೈಶಿಷ್ಟ್ಯಗಳು

ಐಕ್ಯೂ ನಿಯೋ 10R ಸ್ಮಾರ್ಟ್‌ಫೋನ್‌ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2800 × 1260 ಪಿಕ್ಸೆಲ್‌ಗಳ ರೆಸಲ್ಯೂಶನ್‌, 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 144Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ. ಈ ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಹೊಂದಿದೆ. ಈ ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8S ಜೆನ್ 3 ಪ್ರೊಸೆಸರ್‌ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ Funtouch ಓಎಸ್‌ 15 ಜೊತೆಗೆ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ಫೋನ್, ಗ್ರಾಫಿಕ್ಸ್‌ಗಾಗಿ ಅಡ್ರಿನೊ 735 ಜಿಪಿಯು ಸಹ ಹೊಂದಿದೆ.

ಐಕ್ಯೂ ನಿಯೋ 10R ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಒದಗಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ 6400mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇಷ್ಟು ದೊಡ್ಡ ಬ್ಯಾಟರಿಯನ್ನು ಹೊಂದಿರುವ ಭಾರತದ ಅತ್ಯಂತ ತೆಳ್ಳಗಿನ ಮೊಬೈಲ್ ಇದಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.

Best Mobiles in India

English summary
iQOO Neo 10R is now available at Rs 24,999 in Amazon Great Summer Sale 2025: Check offers, Specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+