ಕೇವಲ 11,999 ರೂ.! 6000mAh ಬ್ಯಾಟರಿ.. 50MP ಕ್ಯಾಮೆರಾ.. ಅದೂ iQOO 5G ಫೋನ್
ಐಕ್ಯೂ ತನ್ನ ಅಭಿಮಾನಿಗಳಿಗೆ ಹೊಸ ವರ್ಷದ ಉಡುಗೊರೆ ನೀಡಿದೆ. ಕೆಲವು ತಿಂಗಳ ಹಿಂದೆ ಬಿಡುಗಡೆಯಾದ 5G ಫೋನಿನ ಬೆಲೆಯನ್ನು ದಿಢೀರ್ ಇಳಿಕೆ ಮಾಡಿದೆ. ಹೌದು, ಐಕ್ಯೂ Z9x 5G (iQOO Z9x 5G) ಮೊಬೈಲ್ ಖರೀದಿ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಲಾಗಿದೆ. ಜೊತೆಗೆ ಬ್ಯಾಂಕ್ ಡಿಸ್ಕೌಂಟ್ ಮತ್ತು ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ. ನೀವು, ಡಿಸ್ಕೌಂಟ್‌ನೊಂದಿಗೆ 12 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಈ ಫೋನನ್ನು ಖರೀದಿಸಬಹುದು. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಐಕ್ಯೂ Z9x 5G ಫೋನನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಫೋನ್ 6.72 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 1 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಹಾಗೆಯೇ 6000mAh ಬ್ಯಾಟರಿ, 44W ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಇದು 12 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿದೆ.

ಐಕ್ಯೂ Z9x 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ಐಕ್ಯೂ Z9x 5G ಸ್ಮಾರ್ಟ್‌ಫೋನ್ 6.72 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಎಲ್‌ಸಿಡಿ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2408 × 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.
ಸ್ನಾಪ್‌ಡ್ರಾಗನ್ ಪ್ರೊಸೆಸರ್
ಐಕ್ಯೂ Z9x 5G ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 6 ಜೆನ್ 1 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಗ್ರಾಫಿಕ್ಸ್‌ಗಾಗಿ, ಈ ಫೋನ್ ಅಡ್ರಿನೊ 710 ಜಿಪಿಯು ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ Funtouch OS 14 ನಲ್ಲಿ ಕೆಲಸ ನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆ
ಐಕ್ಯೂ Z9x 5G ಫೋನ್ 8GB ವರೆಗೆ ವಿಸ್ತೃತ RAM ಹೊಂದಿದೆ. ಜೊತೆಗೆ, 1TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು. ನೀವು, 4GB RAM + 128GB, 6GB RAM + 128GB ಮತ್ತು 8GB RAM + 128GB ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಸಬಹುದು.
ಎರಡು ಅದ್ಭುತ ಕ್ಯಾಮೆರಾಗಳು
ಐಕ್ಯೂ Z9x 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ದೊಡ್ಡ ಬ್ಯಾಟರಿ
ಐಕ್ಯೂ Z9x 5G ಮೊಬೈಲ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು, 44W ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಐಕ್ಯೂ Z9x 5G ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗೆ IP64 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G, 300% ಆಡಿಯೋ ಬೂಸ್ಟರ್ ತಂತ್ರಜ್ಞಾನ, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಡ್ಯುಯಲ್ ಸ್ಟಿರಿಯೊ ಸ್ಪೀಕರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಐಕ್ಯೂ Z9x 5G ಬೆಲೆ
4GB RAM + 128GB ಸ್ಟೋರೇಜ್ = 12,999 ರೂ.
ಆಫರ್ ಬೆಲೆ = 11,999 ರೂ.
6GB RAM + 128GB ಸ್ಟೋರೇಜ್ = 14,499 ರೂ.
ಆಫರ್ ಬೆಲೆ = 13,499 ರೂ.
8GB RAM + 128GB ಸ್ಟೋರೇಜ್ = 15,999 ರೂ.
ಆಫರ್ ಬೆಲೆ = 14,999 ರೂ.
ಐಕ್ಯೂ Z9x 5G ಫೋನ್ ಮೂರು RAM ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಈ ಮೂರರ ಬೆಲೆಯನ್ನು 1,000 ರೂ.ಗಳಷ್ಟು ಇಳಿಕೆ ಮಾಡಲಾಗಿದೆ. ಬೆಲೆ ಇಳಿಕೆಯ ನಂತರ, 4GB RAM ಫೋನನ್ನು 11,999 ರೂ.ಗೆ ಖರೀದಿಸಬಹುದು. ಹಾಗೆಯೇ ಫೋನಿನ 6GB ರೂಪಾಂತರವನ್ನು 13,499 ರೂ.ಗೆ ಮತ್ತು 8GB RAM ವೇರಿಯಂಟ್ ಅನ್ನು 14,999 ರೂ.ಗೆ ಕೊಳ್ಳಬಹುದು. ಈ ಫೋನ್ ಟೊರ್ನಾಡೋ ಗ್ರೀನ್ ಮತ್ತು ಸ್ಟಾರ್ಮ್ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ.


Click it and Unblock the Notifications








