ಜಸ್ಟ್ 5,699 ರೂ.! itel A70 ಫೋನಿನ ಬೆಲೆ ಇಳಿಕೆ.. 35% ಡಿಸ್ಕೌಂಟ್.. ಎಲ್ಲಿ ಖರೀದಿ?
ಹಬ್ಬದ ಆಫರ್‌ಗಳು ಮುಗಿಯಿತು. ಹೊಸ ಮೊಬೈಲ್ ಖರೀದಿಸಲು ಸಾಧ್ಯವಾಗಲಿಲ್ಲ ಅಂತ ಬೇಸರಿಸಿಕೊಳ್ಳಬೇಡಿ. ನಿಮಗೆ, ಬಂಪರ್ ಆಫರ್ ಇಲ್ಲಿದೆ. ಕೇವಲ 5,699 ರೂ.ಗೆ ಈ ಸ್ಟೈಲಿಶ್ ಸ್ಮಾರ್ಟ್‌ಫೋನ್ ಕೊಳ್ಳಬಹುದು. ಹೌದು, ಐಟೆಲ್ (itel) ಕಂಪನಿಯು ತನ್ನ ಐಟೆಲ್ A70 (itel A70) ಫೋನಿನ ಮೇಲೆ ಭಾರೀ ಡಿಸ್ಕೌಂಟ್ ಘೋಷಿಸಿದೆ. ಜೊತೆಗೆ, 629 ರೂ.ಗಳ ತ್ವರಿತ ರಿಯಾಯಿತಿ ಮತ್ತು ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಕಂಪನಿಯು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟ ಮಾಡುತ್ತಿದೆ. ನೀವು ಬ್ರಿಲಿಯಂಟ್ ಗೋಲ್ಡ್, ಅಜೂರ್ ಬ್ಲೂ, ಸ್ಟೈಲಿಶ್ ಬ್ಲ್ಯಾಕ್ ಮತ್ತು ಫೀಲ್ಡ್ ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನ್ ಆಕ್ಟಾ ಕೋರ್ ಯುನಿಸಾಕ್ T603 ಪ್ರೊಸೆಸರ್ ಹೊಂದಿದೆ. ಇದರಲ್ಲಿ 6.6 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಲಭ್ಯವಿದೆ. ಇದರೊಂದಿಗೆ 4GB + 256GB ಸ್ಟೋರೇಜ್, 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 5000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಐಟೆಲ್ A70 ಫೋನಿನ ಬೆಲೆ ಮತ್ತು ಆಫರ್‌ಗಳು
ಅಮೆಜಾನ್‌ನಲ್ಲಿ ಫೋನಿನ 4GB RAM+64GB ಸ್ಟೋರೇಜ್ ಮೇಲೆ 14% ಡಿಸ್ಕೌಂಟ್ ಮತ್ತು 4GB+256GB ಸ್ಟೋರೇಜ್ ಮೇಲೆ 35% ಡಿಸ್ಕೌಂಟ್ ಲಭ್ಯವಿದೆ. ಕಂಪನಿಯು ಮೂಲ ಮಾದರಿಯನ್ನು 6,299 ರೂ.ಗೆ ಬಿಡುಗಡೆ ಮಾಡಿತ್ತು. ಪ್ರಸ್ತುತ 5,699 ರೂ.ಗೆ ಲಭ್ಯವಿದೆ. 629 ರೂ. ಡಿಸ್ಕೌಂಟ್ ನೀಡುತ್ತಿದೆ. ಜೊತೆಗೆ 5,950 ರೂ. ಎಕ್ಸ್‌ಚೇಂಜ್ ಆಪರ್ ಸಹ ಲಭ್ಯವಿದೆ. 4GB + 256GB ಸ್ಟೋರೇಜ್ ಅನ್ನು 10,999 ರೂ.ಗೆ ಪರಿಚಯಿಸಲಾಗಿತ್ತು. ನೀವು 7,099 ರೂ.ಗೆ ಕೊಳ್ಳಬಹುದು.
ಐಟೆಲ್ A70 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಐಟೆಲ್ A70 ಫೋನ್ 6.6 ಇಂಚಿನ ಎಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 720 x 1612 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಜೊತೆಗೆ, ಡೈನಾಮಿಕ್ ಬಾರ್ ಮತ್ತು ಪಂಚ್ ಹೋಲ್ ವಿನ್ಯಾಸ ಹೊಂದಿದೆ. ಸೈಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಇದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಐಟೆಲ್ A70 ಮೊಬೈಲ್‌ನಲ್ಲಿ ಆಕ್ಟಾಕೋರ್ ಯುನಿಸಾಕ್ T603 ಪ್ರೊಸೆಸರ್ ಅನ್ನು ಅಳವಡಿಸಿದೆ. ಗ್ರಾಫಿಕ್ಸ್‌ಗಾಗಿ ಮಾಲಿ G57 MP1 ಜಿಪಿಯು ಹೊಂದಿದೆ. ಈ ಸ್ಮಾರ್ಟ್‌ಫೋನ್ ಐಟೆಲ್ ಓಎಸ್ 13 ಆಧಾರಿತ ಆಂಡ್ರಾಯ್ಡ್ 13 ಓಎಸ್ ಗೋ ಆವೃತ್ತಿಯಲ್ಲಿ ಕೆಲಸ ನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆ
ಈ ಐಟೆಲ್ ಫೋನಿನಲ್ಲಿ ಮೆಮೊರಿ ಫ್ಯೂಷನ್ ತಂತ್ರಜ್ಞಾನ ಲಭ್ಯವಿದೆ. ಇದು 4GB RAM + 8GB ವರ್ಚುವಲ್ RAM ನೊಂದಿಗೆ ಬರುತ್ತದೆ. ಫೋನ್ 64GB ಸ್ಟೋರೇಜ್ ಹೊಂದಿದೆ. 2 TB ಸ್ಟೋರೇಜ್‌ಗಾಗಿ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಲಭ್ಯವಿದೆ.
ಕ್ಯಾಮೆರಾ ಸೆಟಪ್
ಐಟೆಲ್ A70 ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ಎಚ್‌ಡಿಆರ್ ಕ್ಯಾಮೆರಾ ಮತ್ತು ಎಐ (AI) ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಕ್ಯಾಮೆರಾದಲ್ಲಿ ಫೇಸ್ ಅನ್‌ಲಾಕ್ ಲಭ್ಯವಿದೆ.
ಬ್ಯಾಟರಿ ಮತ್ತು ಚಾರ್ಜರ್
ಕಂಪನಿಯು ಐಟೆಲ್ A70 ಫೋನನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಈ ಬ್ಯಾಟರಿಯು ಟೈಪ್ ಸಿ ಪೋರ್ಟ್‌ನೊಂದಿಗೆ ಬರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VoLTE, ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್ 5.0, ಜಿಪಿಎಸ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.


Click it and Unblock the Notifications








