Home
Deal of the day

itel Color Pro 5G ಬೆಲೆ ಇಳಿಕೆ: ಜೊತೆಗೆ ಬಂಪರ್ ಆಫರ್.. ಹೊಸ ಬೆಲೆ ಎಷ್ಟು?

ಐಟೆಲ್ ಕಂಪನಿಯ ಮೊಬೈಲ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಸ್ಮಾರ್ಟ್‌ಫೋನ್ ಪ್ರಿಯರು ಸಹ ಈ ಫೋನ್‌ಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ. ಅದರಂತೆ, ಕಂಪನಿಯು ಆಗಾಗ್ಗೆ ತನ್ನ ಗ್ರಾಹಕರಿಗೆ ಸಖತ್ ಆಫರ್‌ಗಳನ್ನು ನೀಡುತ್ತದೆ. ಇದೀಗ, ಐಟೆಲ್‌ ಕಲರ್‌ ಪ್ರೊ 5G (itel Color Pro 5G) ಫೋನ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಇದು ಹಿಂಬದಿ ಫಲಕದ ಬಣ್ಣವನ್ನು ಬದಲಾಯಿಸುವ IVCO ತಂತ್ರಜ್ಞಾನವನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದೆ. ಈ ಫೋನಿನ ಹೊಸ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.

ಐಟೆಲ್ ತನ್ನ ಬಣ್ಣವನ್ನು ಬದಲಾಯಿಸುವ ಅಗ್ಗದ ಐಟೆಲ್‌ ಕಲರ್‌ ಪ್ರೊ 5G ಫೋನನ್ನು ಜುಲೈನಲ್ಲಿ ಬಿಡುಗಡೆ ಮಾಡಿತು. ಇದು ಡೈಮೆನ್ಸಿಟಿ 6080 ಚಿಪ್‌ಸೆಟ್ ಹೊಂದಿದೆ. 12GB ವರೆಗಿನ RAM, 90Hz ರಿಫ್ರೆಶ್ ದರದೊಂದಿಗೆ 6.6 ಇಂಚಿನ ಡಿಸ್ಪ್ಲೇ, 50 ಮೆಗಾಪಿಕ್ಸೆಲ್ ಎಐ ಕ್ಯಾಮೆರಾ ಮುಂತಾದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನ್ ಕಡಿಮೆ ಬೆಲೆಯಲ್ಲಿ ಉತ್ತಮ 5G ಆಯ್ಕೆಯಾಗಿದೆ. ಪ್ರಸ್ತುತ ಇದರ ಮೇಲೆ 1,500 ರೂ.ಗಳ ವರೆಗೆ ರಿಯಾಯಿತಿ ಲಭ್ಯವಿದೆ.

itel Color Pro 5G ಬೆಲೆ ಇಳಿಕೆ: ಜೊತೆಗೆ ಬಂಪರ್ ಆಫರ್.. ಹೊಸ ಬೆಲೆ ಎಷ್ಟು?

ಐಟೆಲ್‌ ಕಲರ್‌ ಪ್ರೊ 5G ಹೊಸ ಬೆಲೆ ಮತ್ತು ಆಫರ್‌ಗಳು

ಬಿಡುಗಡೆ ಬೆಲೆ = 9,999 ರೂ.
ಆಫರ್ ಬೆಲೆ = 8,399 ರೂ.

ಐಟೆಲ್‌ ಕಲರ್‌ ಪ್ರೊ 5G ಸ್ಮಾರ್ಟ್‌ಫೋನ್ 6GB RAM + 128GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಬರುತ್ತದೆ. ಈ ಫೋನ್ 9,999 ರೂ.ಗೆ ಬಿಡುಗಡೆಯಾಗಿತ್ತು. ಪ್ರಸ್ತುತ, 1,500 ರೂ.ಗಳ ವರೆಗಿನ ಬ್ಯಾಂಕ್ ಆಫರ್‌ನೊಂದಿಗೆ ಕೇವಲ 8,399 ರೂ.ಗಳಿಗೆ ಇದನ್ನು ಖರೀದಿಸಬಹುದು. ಇದು ಲ್ಯಾವೆಂಡರ್ ಫ್ಯಾಂಟಸಿ ಮತ್ತು ರಿವರ್ ಬ್ಲೂ ಬಣ್ಣಗಳಲ್ಲಿ ಮಾರಾಟವಾಗುತ್ತಿದೆ.

ಆಫರ್‌ಗಳನ್ನು ನೋಡುವುದಾದರೆ, ಒನ್ ಕಾರ್ಡ್ ಕ್ರೆಡಿಟ್ ಕಾರ್ಡ್ ಮತ್ತು ಎಯು ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ ನಿಮಗೆ 1,500 ರೂ.ಗಳ ವರೆಗಿನ ತ್ವರಿತ ರಿಯಾಯಿತಿ ಸಿಗುತ್ತದೆ. ನೀವು ಅಮೇಜಾನ್ ಪೇ (Amazon Pay) ನಲ್ಲಿ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಜೊತೆಗೆ, ಈ ಫೋನನ್ನು 3 ರಿಂದ 6 ತಿಂಗಳ ನೋ ಕಾಸ್ಟ್ ಇಎಂಐನಲ್ಲಿ ಖರೀದಿಸಬಹುದು. 9,350 ರೂ.ಗಳ ವರೆಗೆ ಎಕ್ಸ್‌ಚೇಂಜ್ ಆಫರ್ ಇದೆ.

ಐಟೆಲ್‌ ಕಲರ್‌ ಪ್ರೊ 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ಐಟೆಲ್‌ ಕಲರ್‌ ಪ್ರೊ 5G ಫೋನ್ 6.6 ಇಂಚಿನ ಹೆಚ್‌ಡಿ ಪ್ಲಸ್ ಐಪಿಎಸ್ (IPS) ಡಿಸ್ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ದರ ಹೊಂದಿದೆ. ಡಿಸ್ಪ್ಲೇಯ ಮೇಲೆ ವಾಟರ್‌ಡ್ರಾಪ್ ನಾಚ್ ವಿನ್ಯಾಸವೂ ಇದೆ.

ಪ್ರೊಸೆಸರ್: ಐಟೆಲ್‌ ಕಲರ್‌ ಪ್ರೊ 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಚಿಪ್ 420,000 AnTuTu ಸ್ಕೋರ್ ಪಡೆದಿದೆ ಎಂದು ಕಂಪನಿ ಹೇಳಿದೆ. ಇನ್ನೂ, ಮೆಮೊರಿ ಫ್ಯೂಷನ್ ತಂತ್ರಜ್ಞಾನದೊಂದಿಗೆ ಈ ಫೋನ್ 12GB RAM ಅನ್ನು ಬಳಸಬಹುದು. ಜೊತೆಗೆ, 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್‌ ಲಭ್ಯವಿದೆ.

ಕ್ಯಾಮೆರಾ: ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಎಲ್‌ಇಡಿ ಫ್ಲ್ಯಾಷ್ ಅನ್ನು ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಎಐ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಎಐ ಕ್ಯಾಮೆರಾ ಇದೆ. ಫೋನಿನ ಹಿಂಭಾಗದ ಕ್ಯಾಮೆರಾದಲ್ಲಿ ಪನೋರಮಾ ಮೋಡ್, ಪ್ರೊ ಮೋಡ್, ಎಆರ್ ಶಾಟ್ ಮತ್ತು ಟೈಮ್ ಲ್ಯಾಪ್ಸ್‌ನಂತಹ ಆಯ್ಕೆಗಳು ಲಭ್ಯವಿದೆ.

ಬ್ಯಾಟರಿ: ಐಟೆಲ್‌ ಕಲರ್‌ ಪ್ರೊ 5G ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು 18W ಸೌಲಭ್ಯ ಇದೆ.

ಇತರೆ ವೈಶಿಷ್ಟ್ಯಗಳು: ಈ ಫೋನ್ 10 5G ಬ್ಯಾಂಡ್‌ಗಳಿಗೆ ಬೆಂಬಲವನ್ನು ಪಡೆಯುತ್ತದೆ. ಇದರಲ್ಲಿ ಡ್ಯುಯಲ್ ಸಿಮ್, 5ಜಿ, 4ಜಿ, ವೈಫೈ, ಬ್ಲೂಟೂತ್ ಸೇರಿದಂತೆ ಹಲವು ಫೀಚರ್‌ಗನ್ನು ಹೊಂದಿದೆ.

Best Mobiles in India

English summary
itel Color Pro 5G Received Massive discount in amazon: Check availability, offers, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+