Home
Deal of the day

ಕೇವಲ 7299 ರೂ.! 256GB ಸ್ಟೋರೇಜ್.. 50MP ಕ್ಯಾಮೆರಾ.. ಯಾವ ಫೋನ್?

ದೀಪಾವಳಿ ಸಂಭ್ರಮಕ್ಕೆ ಕೌಂಟ್‌ಡೌನ್ ಶುರು ಆಗಿದೆ. ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳು ತನ್ನ ಗ್ರಾಹಕರ ಸಂಭ್ರಮವನ್ನು ಡಬಲ್ ಮಾಡಿವೆ. ಹೌದು, ದೀಪಾವಳಿ ಹಬ್ಬದ ಪ್ರಯುಕ್ತ ಅಮೆಜಾನ್ ಹಲವು ಫೋನ್‌ಗಳು ಭರ್ಜರಿ ರಿಯಾಯತಿಯೊಂದಿಗೆ ಮಾರಾಟವಾಗುತ್ತಿವೆ. ಅದರಂತೆ, ಐಟೆಲ್ P55 ಪ್ಲಸ್ 4G (itel P55+ 4G) ಕಡಿಮೆ ಬೆಲೆಗೆ ಲಭ್ಯವಿದೆ. ನೀವು, ಅಗ್ಗದ ಬೆಲೆಯಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ಇದು ಉತ್ತಮ ಆಯ್ಕೆಯಾಗಿದೆ. ಬನ್ನಿ, ಕಂಪನಿಯು ಯಾವೆಲ್ಲಾ ಆಫರ್‌ಗಳನ್ನು ನೀಡುತ್ತಿದೆ ಮತ್ತು ಫೋನಿನ ವಿಶೇಷತೆಗಳೇನು ತಿಳಿಯೋಣ.

ಅಮೆಜಾನ್ ಸೇಲ್‌ನಲ್ಲಿ ಐಟೆಲ್ P55 + 4G ಫೋನನ್ನು ಭಾರೀ ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ನೀವು, 16GB RAM + 256GB ಇಂಟರ್ನಲ್ ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಸಬಹುದು. ಇದು ಯುನಿಸೊಕ್ T606 ಪ್ರೊಸೆಸರ್ ಹೊಂದಿದೆ. ಫೋನಿನಲ್ಲಿ 6.6 ಇಂಚಿನ ಡಿಸ್ಪ್ಲೇಯನ್ನು ಲಭ್ಯವಿದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ ಕ್ಯಾಮೆರಾ, 45W ವೇಗದ ಚಾರ್ಜಿಂಗ್ ಜೊತೆಗೆ 5000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ರಾಯಲ್ ಗ್ರೀನ್ ಮತ್ತು ವೆಗಾನ್ ಲೆದರ್ ಬಣ್ಣಗಳಲ್ಲಿ ಲಭ್ಯವಿದೆ.

ಕೇವಲ 7299 ರೂ.! 256GB ಸ್ಟೋರೇಜ್.. 50MP ಕ್ಯಾಮೆರಾ.. ಯಾವ ಫೋನ್?

ಐಟೆಲ್ P55 ಪ್ಲಸ್ 4G ಬೆಲೆ ಮತ್ತು ಆಫರ್‌ಗಳು

ಕಂಪನಿಯು ಐಟೆಲ್ P55 ಪ್ಲಸ್ 4G ಫೋನಿನ 256GB ಇಂಟರ್ನಲ್ ಸ್ಟೋರೇಜ್ ರೂಪಾಂತರವನ್ನು 7,299 ರೂ.ಗೆ ಮಾರಾಟ ಮಾಡುತ್ತಿದೆ. ನೀವು, 729.90 ರೂ. ಬ್ಯಾಂಕ್‌ ಆಫರ್‌ನೊಂದಿಗೆ ಫೋನನ್ನು ಕೊಳ್ಳಬಹುದು. ಜೊತೆಗೆ ಕಂಪನಿಯು ಈ ಫೋನ್‌ನಲ್ಲಿ ಕ್ಯಾಶ್‌ಬ್ಯಾಕ್ ಸಹ ನೀಡುತ್ತಿದೆ. ನೀವು 328.66 ರೂ. ವರೆಗೆ ಲಾಭ ಪಡೆಯಬಹುದು. ಎಕ್ಸ್‌ಚೇಂಜ್‌ ಆಫರ್‌ ಅಡಿಯಲ್ಲಿ, ನಿಮಗೆ 6900 ರೂ. ವರೆಗೆ ಆಫರ್‌ ಸಿಗುತ್ತದೆ. ಅಮೆಜಾನ್‌ನಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಬಹುದು.

ಐಟೆಲ್ P55 + 4G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಐಟೆಲ್ P55 ಪ್ಲಸ್ 4G ಫೋನ್ 6.6 ಇಂಚಿನ ಎಚ್‌ಡಿ ಪ್ಲಸ್ ಐಪಿಎಸ್‌ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 720 x 1612 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 90Hz ರಿಫ್ರೆಶ್ ದರದ ಬೆಂಬಲ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಈ ಫೋನನ್ನು ಯುನಿಸೊಕ್ T606 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು 16GB RAM ಅನ್ನು ಹೊಂದಿದೆ. ಮತ್ತು 256GB ಇಂಟರ್ನಲ್ ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ಈ ಫೋನ್ ಆಂಡ್ರಾಯ್ಡ್‌ 13 ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ.

ಈ ಸುದ್ದಿ ಓದಿದ್ದಿರಾ?: 50,000 ಬೆಲೆ ಇಳಿಕೆ! 200MP ಕ್ಯಾಮೆರಾ.. 256GB ಸ್ಟೋರೇಜ್‌.. ಅದೂ Samsung ಫೋನ್!

ಕ್ಯಾಮೆರಾ ಸೆಟಪ್

ಈ ಐಟೆಲ್ ಫೋನ್ ಎಲ್ಇಡಿ ಫ್ಲ್ಯಾಶ್ ಜೊತೆಗೆ ಡುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ.ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದು ಎಐ (AI) ಲೆನ್ಸ್ ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಐಟೆಲ್ P55 ಪ್ಲಸ್ 4G ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ.

ಇತರೆ ವೈಶಿಷ್ಟ್ಯಗಳು

ಐಟೆಲ್ P55 ಪ್ಲಸ್ 4G ಮೊಬೈಲ್ ಡ್ಯುಯಲ್ ಸಿಮ್, 4G VoLTE, ವೈ-ಫೈ, ಬ್ಲೂಟೂತ್, ಜಿಪಿಎಸ್‌, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್, ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು 3.4 ಎಂಎಂ ಹೆಡ್‌ಫೋನ್ ಜ್ಯಾಕ್‌ ಸೇರಿದಂತೆ ಹಲವು ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದೆ.

Best Mobiles in India

English summary
Best deals on itel P55+ 4G in Amazon Great Indian Festival sale, know price and offers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+