ಕೇವಲ 7,249 ಸಾಕು! Itel P55T ಬೆಲೆ ಇಳಿಕೆ.. 28% ಡಿಸ್ಕೌಂಟ್.. ಈಗ ಬಿಟ್ಟರೆ ಮತ್ತೆ ಸಿಗಲ್ಲ!
ದೀಪಾವಳಿ ಪ್ರಯುಕ್ತ ಆನ್‌ಲೈನ್ ಶಾಪಿಂಗ್ ಸೈಟ್‌ಗಳಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ನೀಡಲಾಗುತ್ತಿದೆ. ಈಗಾಗಲೇ, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಸೇಲ್ ನಡೆಯುತ್ತಿದೆ. ಹಲವು ಕಂಪನಿಗಳ ಸ್ಮಾರ್ಟ್‌ಫೋನ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ, ಐಟೆಲ್ P55T (itel P55T) ಫೋನ್ ಖರೀದಿ ಮೇಲೆಯೂ ದೊಡ್ಡ ರಿಯಾಯಿತಿ ಘೋಷಿಸಲಾಗಿದೆ. 8,000 ರೂ.ಗಳ ಬಜೆಟ್‌ನಲ್ಲಿ ಹೊಸ ಮೊಬೈಲ್ ಖರೀದಿಸುವವರಿಗೆ ಐಟೆಲ್ P55T ಉತ್ತಮ ಆಯ್ಕೆಯಾಗಲಿದೆ. ಈ ಫೋನಿನ ವಿಶೇಷತೆಗಳೇನು? ಫ್ಲಿಪ್‌ಕಾರ್ಟ್‌ನಲ್ಲಿ ಎಷ್ಟು ರಿಯಾಯಿತಿ ಲಭ್ಯವಿದೆ? ತಿಳಿಯೋಣ ಬನ್ನಿ.
ದೀಪಾವಳಿ ಅಂಗವಾಗಿ ಮೊಬೈಲ್ ಮಾರಾಟ ಜೋರಾಗಿದೆ. ಈ ಮಾರಾಟದಲ್ಲಿ ಐಟೆಲ್ P55T ಫೋನನ್ನು ಅಗ್ಗದೆ ಬೆಲೆಯಲ್ಲಿ ಖರೀದಿಸಬಹುದು. ಈ ಫೋನ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದು ಆಕ್ಟಾ ಕೋರ್ ಯುನಿಸೊಕ್ T616 ಪ್ರೊಸೆಸರ್ ಹೊಂದಿದೆ. ಜೊತೆಗೆ, 50 ಮೆಗಾಪಿಕ್ಸೆಲ್ ಕ್ಯಾಮೆರಾ, 18W ಚಾರ್ಜಿಂಗ್, 6.6 ಇಂಚಿನ ಡಿಸ್ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನನ್ನು ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಕೇವಲ 7,249 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಐಟೆಲ್ P55T ಫೋನಿನ ಬೆಲೆ ಮತ್ತು ಆಫರ್‌ಗಳು
ಕಂಪನಿಯು ಐಟೆಲ್ P55T ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರವನ್ನು 8,199 ಬೆಲೆ ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 7,999 ರೂ. ಬಜೆಟ್‌ನಲ್ಲಿ ಲಭ್ಯವಿದೆ. ಇದರ ಜೊತೆಗೆ, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೇಲೆ 750 ರೂ.ಗಳ ತ್ವರಿತ ರಿಯಾಯಿತಿ ಪಡೆಯಬಹುದು. ಡಿಸ್ಕೌಂಟ್ ಬಳಿಕ ಈ ಫೋನಿನ ಬೆಲೆ 7,249 ರೂ.ಗೆ ಇಳಿಕೆಯಾಗಲಿದೆ. ನೀವು, ಆಸ್ಟ್ರಲ್ ಗೋಲ್ಡ್ ಮತ್ತು ಅರೋರಾ ಬ್ಲಾಕ್ ಬಣ್ಣಗಳಲ್ಲಿ ಫೋನನ್ನು ಖರೀದಿಸಬಹುದು.
ಐಟೆಲ್ P55T ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಐಟೆಲ್ P55T ಫೋನ್ 6.6 ಇಂಚಿನ ಎಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು ಡೈನಾಮಿಕ್ ಬಾರ್ ಡಿಸ್ಪ್ಲೇ ಆಗಿದೆ. ಡಿಸ್ಪ್ಲೇಯು 720 x 1612 ಪಿಕ್ಸೆಲ್‌ಗಳ ರೆಸಲ್ಯೂಶನ್, 90Hz ರಿಫ್ರೆಶ್ ರೇಟ್ ಮತ್ತು 267 ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಜೊತೆಗೆ 180Hz ಟಚ್ ಸ್ಯಾಂಪ್ಲಿಂಗ್ ದರದ ಬೆಂಬಲ ಪಡೆದಿದೆ. ಇದು ಪಂಚ್ ಹೋಲ್ ಡಿಸ್ಪ್ಲೇ ವಿನ್ಯಾಸವನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಐಟೆಲ್ P55T ಫೋನನ್ನು ಆಕ್ಟಾ ಕೋರ್ ಯುನಿಸೊಕ್ T616 12nm ಪ್ರೊಸೆಸರ್‌ನೊಂದಿಗೆ ಪರಿಚಯಿಸಿದೆ. ಇದು ಮಧ್ಯಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಫೋನನಲ್ಲಿ ಆಂಡ್ರಾಯ್ಡ್ 14 ಗೋ ಆವೃತ್ತಿ ಮತ್ತು ಮಾಲಿ G57 ಜಿಪಿಯು ಗ್ರಾಫಿಕ್ಸ್ ಲಭ್ಯವಿದೆ.
ಸ್ಟೋರೇಜ್ ಆಯ್ಕೆ
ಐಟೆಲ್ P55T ಮೊಬೈಲ್ 8GB RAM (4GB RAM + 4GB ವರ್ಚುವಲ್ RAM) ಮತ್ತು 128GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ. ಈ 128GB ಸ್ಟೋರೇಜ್ ಹೊರತುಪಡಿಸಿ, ಇದು 1TB ಮೈಕ್ರೊ SD ಕಾರ್ಡ್ ಬೆಂಬಲದೊಂದಿಗೆ ಬರುತ್ತದೆ.
ಕ್ಯಾಮೆರಾ ಸೆಟಪ್
ಈ ಬಜೆಟ್ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಇದು ಎಐ ಸೆಕೆಂಡರಿ ಕ್ಯಾಮೆರಾ ಮತ್ತು ಔರಾ ಎಲ್ಇಡಿಯನ್ನು ಹೊಂದಿದೆ. ಈ ಕ್ಯಾಮೆರಾ ಎಐ (AI) ಕ್ಲಿಯರ್ ಪೋರ್ಟ್ರೇಟ್, ಪ್ರೊ ಮೋಡ್, ಸೂಪರ್ ನೈಟ್ ಮೋಡ್ ಮತ್ತು ಪನೋರಮಾ ಮೋಡ್‌ನೊಂದಿಗೆ ಬರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಐಟೆಲ್ P55T ಫೋನಿನ ವಿಶೇಷತೆಯೆಂದರೆ, ಇದು 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 18W ವೇಗದ ಚಾರ್ಜಿಂಗ್ ಮತ್ತು ಟೈಪ್ ಸಿ ಪೋರ್ಟ್ ಸೌಲಭ್ಯ ನೀಡಲಾಗಿದೆ.


Click it and Unblock the Notifications








