Lava: ಫುಲ್ ಡಿಮ್ಯಾಂಡ್! ಡ್ಯುಯಲ್ ಡಿಸ್ಪ್ಲೇ.. ಸೋನಿ ಕ್ಯಾಮೆರಾ.. 3000 ರಿಯಾಯಿತಿ! ಯಾವ ಫೋನ್?
ಅಮೆಜಾನ್ ತನ್ನ ಗ್ರಾಹಕರಿಗೆ ಸ್ಪೆಷಲ್ ಆಫರ್ ಘೋಷಿಸಿದೆ. ಡ್ಯುಯಲ್ ಡಿಸ್ಪ್ಲೇ ಹೊಂದಿರುವ ಲಾವಾ 5G ಫೋನನ್ನು ಭಾರೀ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಹೌದು, ಅಮೆಜಾನ್‌ನ ಲಾವಾ ಡೇಸ್ ಸೇಲ್‌ನಲ್ಲಿ ಲಾವಾ ಅಗ್ನಿ 3 5G (Lava Agni 3 5G) ಫೋನಿನ ಬೆಲೆಯನ್ನು ದಿಢೀರನೆ ಇಳಿಕೆ ಮಾಡಲಾಗಿದೆ. ನೀವು ಈ ಮೊಬೈಲ್ ಖರೀದಿ ಮೇಲೆ 3000 ರೂ. ಉಳಿತಾಯ ಮಾಡಬಹುದು. ಇದಕ್ಕೆ ಯಾವುದೇ ಬ್ಯಾಂಕ್ ಕಾರ್ಡ್ ಅಗತ್ಯವಿಲ್ಲ. ಜೊತೆಗೆ ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ. ಈ ಫೋನಿನ ಮೂಲ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ಇಲ್ಲಿದ ಮಾಹಿತಿ.
ಲಾವಾ ಅಗ್ನಿ 3 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎಕ್ಸ್ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ 6.78 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಹಾಗೆಯೇ 5000mAh ಬ್ಯಾಟರಿ ಮತ್ತು 66W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಮೊಬೈಲ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಇದು ಹೀದರ್ ಗ್ಲಾಸ್ ಮತ್ತು ಪ್ರಿಸ್ಟಿನ್ ಗ್ಲಾಸ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನಿನ ಆಫರ್ ತಿಳಿಯಲು ಮುಂದೆ ಓದಿ.

ಲಾವಾ ಅಗ್ನಿ 3 5G ವೈಶಿಷ್ಟ್ಯಗಳು
ಲಾವಾ ಅಗ್ನಿ 3 5G ಸ್ಮಾರ್ಟ್‌ಫೋನ್ ಡ್ಯುಯಲ್ ಡಿಸ್ಪ್ಲೇಯನ್ನು ಹೊಂದಿದೆ. ಇದು 6.78 ಇಂಚಿನ 1.5K 3D ಕರ್ವ್ಡ್ ಮುಖ್ಯ ಡಿಸ್ಪ್ಲೇ ಲಭ್ಯವಿದೆ. ಇದು 120Hz ರಿಫ್ರೆಶ್ ದರ, 2652 x 1220 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಇದರೊಂದಿಗೆ 1.74 ಇಂಚಿನ ಎರಡನೇ ಡಿಸ್ಪ್ಲೇ ಇದೆ. ಈ ಲಾವಾ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7300 ಎಕ್ಸ್ ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಓಎಸ್‌ನಲ್ಲಿ ಕೆಲಸ ಮಾಡುತ್ತದೆ.
ಲಾವಾ ಅಗ್ನಿ 3 5G ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಮತ್ತು EIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 3X ಆಪ್ಟಿಕಲ್ ಜೂಮ್ ಮತ್ತು EIS ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಮೂರನೇ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, EIS ಬೆಂಬಲದೊಂದಿಗೆ ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.
ಲಾವಾ ಅಗ್ನಿ 3 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 66W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಲಾವಾ 5G ಮೊಬೈಲ್ 8GB RAM ನೊಂದಿಗೆ ಬರುತ್ತದೆ. ಇದಕ್ಕೆ ಪೂರಕವಾಗಿ 256GB ಸ್ಟೋರೇಜ್ ಆಯ್ಕೆ ಲಭ್ಯವಿದೆ. ಇದು 8GB ವರ್ಚುವಲ್ RAM ಸಹ ಹೊಂದಿದೆ. ಈ ಫೋನ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿದೆ. ಇದರೊಂದಿಗೆ 14 5G ಬ್ಯಾಂಡ್ ಮತ್ತು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ವೈ-ಫೈ 6e, ಬ್ಲೂಟೂತ್ 5.4, ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳೊಂದಿಗೆ ಹೊಂದಿದೆ.

ಲಾವಾ ಅಗ್ನಿ 3 5G ಹೊಸ ಬೆಲೆ
ಲಾವಾ ಅಗ್ನಿ 3 ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರವನ್ನು 22,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. 8GB RAM + 256GB ಸ್ಟೋರೇಜ್ ಮಾದರಿಯ ಬೆಲೆ 24,998 ರೂ. ಆಗಿದೆ. ಅಮೆಜಾನ್‌ನಲ್ಲಿ ಲಾವಾ ಡೇಸ್ ಮಾರಾಟದಲ್ಲಿ ಪ್ರಸ್ತುತ, 8GB RAM + 128GB ಸ್ಟೋರೇಜ್ ಆಯ್ಕೆಯು 20,998 ರೂ.ಗೆ ಲಭ್ಯವಿದೆ. ಜೊತೆಗೆ, 3000 ರೂ.ಗಳ ಕೂಪನ್ ರಿಯಾಯಿತಿ ನೀಡಲಾಗುತ್ತಿದೆ. ನೀವು ಕೇವಲ 17,998 ರೂ.ಗೆ ಖರೀದಿಸಬಹುದು. ಈ ಆಫರ್ ಪಡೆಯಲು ಯಾವುದೇ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅಗತ್ಯವಿಲ್ಲ.


Click it and Unblock the Notifications








