Home
Deal of the day

ಖುಷಿ ಸುದ್ದಿ! ಹೊಸ Lava Agni 3 5G ಬೆಲೆ ಇಳಿಕೆ; 2250 ಡಿಸ್ಕೌಂಟ್.. ಹೊಸ ಬೆಲೆ ನೋಡಿ

ಲಾವಾ (Lava) ತನ್ನ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. ಕಳೆದ ತಿಂಗಳು ಬಿಡುಗಡೆ ಮಾಡಿದ್ದ ಹೊಸ ಫೋನಿನ ಬೆಲೆಯನ್ನು ಇಳಿಕೆ ಮಾಡಿದೆ. ಹೌದು, ಕಂಪನಿಯು ಲಾವಾ ಅಗ್ನಿ 3 5G (Lava Agni 3 5G) ಖರೀದಿ ಮೇಲೆ 2,250 ರೂ. ರಿಯಾಯಿತಿ ಘೋಷಿಸಿದೆ. ಇದಲ್ಲದೆ ಬ್ಯಾಂಕ್‌ ಡಿಸ್ಕೌಂಟ್ ಮತ್ತು ಎಕ್ಸ್‌ಚೇಂಜ್‌ ಆಫರ್‌ ಸಹ ಲಭ್ಯವಿದೆ. ವಿಶೇಷವೆಂದರೆ, ಈ ಮೊಬೈಲ್ ಡ್ಯುಯಲ್ ಡಿಸ್ಪ್ಲೇಯನ್ನು ಹೊಂದಿದೆ. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಕಂಪನಿಯು ಲಾವಾ ಅಗ್ನಿ 3 5G ಫೋನನ್ನು ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟ ಮಾಡುತ್ತಿದೆ. ನೀವು ಹೀದರ್ ಗ್ಲಾಸ್ ಮತ್ತು ಪ್ರಿಸ್ಟಿನ್ ಗ್ಲಾಸ್ ಬಣ್ಣಗಳಲ್ಲಿ ಖರೀದಿಸಬಹುದು. ಈ ಮೊಬೈಲ್ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎಕ್ಸ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಫೋನಿನಲ್ಲಿ 6.78 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಇದರೊಂದಿಗೆ 256GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 66W ವೇಗದ ಚಾರ್ಜಿಂಗ್ ಸೇರರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Lava Agni 3 5G ಬೆಲೆ ಇಳಿಕೆ; 2250 ಡಿಸ್ಕೌಂಟ್.. ಹೊಸ ಬೆಲೆ ಎಷ್ಟು?

ಲಾವಾ ಅಗ್ನಿ 3 ಫೋನಿನ ಬೆಲೆ ಮತ್ತು ಆಫರ್‌ಗಳು

ಲಾವಾ ಅಗ್ನಿ 3 ಫೋನಿನ 8GB RAM + 128GB ಸ್ಟೋರೇಜ್‌ ರೂಪಾಂತರವು 22,999 ರೂ.ಗೆ ಬಿಡುಗಡೆಯಾಗಿತ್ತು. 8GB RAM + 256GB ಸ್ಟೋರೇಜ್‌ ಆಯ್ಕೆಯನ್ನು 24,998 ರೂ.ಗೆ ಪರಿಚಯಿಸಲಾಗಿತ್ತು. ಪ್ರಸ್ತುತ ಕಂಪನಿಯು, ಎರಡೂ ರೂಪಾಂತರಗಳ ಖರೀದಿ ಮೇಲೆ 500 ರೂ. ರಿಯಾಯಿತಿ ನೀಡುತ್ತಿದೆ. ನೀವು, ಹೆಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದೆ, 1750 ರೂ.ಗಳ ಹೆಚ್ಚುವರಿ ಡಿಸ್ಕೌಂಟ್ ಲಭ್ಯವಿದೆ.

ಬ್ಯಾಂಕ್ ಆಫ್ ಬರೋಡಾ ಕಾರ್ಡ್‌ಗಳ ಮೇಲೆ 1,500 ರೂ. ಮತ್ತು ಆಕ್ಸಿಸ್, ಐಡಿಎಫ್‌ಸಿ ಫಸ್ಟ್‌ ಮತ್ತು ಆರ್‌ಬಿಎಲ್ ಬ್ಯಾಂಕ್ ಕಾರ್ಡ್‌ಗಳ ಮೇಲೆ 1,000 ಡಿಸ್ಕೌಂಟ್ ಸಿಗುತ್ತದೆ. ರಿಯಾಯಿತಿ ಬಳಿಕ ನೀವು, ಫೋನಿನ 128GB ಸ್ಟೋರೇಜ್‌ ರೂಪಾಂತರವನ್ನು 20,749 ರೂ.ಗೆ ಮತ್ತು 256GB ಸ್ಟೋರೇಜ್‌ ಆಯ್ಕೆಯನ್ನು 22,749 ರೂ.ಗೆ ಕೊಳ್ಳಬಹುದು. ಅಮೆಜಾನ್‌ನಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಬಹುದು.

ಲಾವಾ ಅಗ್ನಿ 3 ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಲಾವಾ ಅಗ್ನಿ 3 5G ಮೊಬೈಲ್ 6.78 ಇಂಚಿನ 1.5K 3D ಕರ್ವ್ಡ್ ಪ್ರಾಥಮಿಕ ಡಿಸ್ಪ್ಲೇಯನ್ನು ಹೊಂದಿದೆ. ಇದು 120 Hz ರಿಫ್ರೆಶ್ ದರ, ‎2652 x 1220 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 1200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ದರದ ಬೆಂಬಲ ಪಡೆದಿದೆ. ಹಿಂಭಾಗದಲ್ಲಿ 1.74 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಲಭ್ಯವಿದೆ.

ಪ್ರೊಸೆಸರ್ ಸಾಮರ್ಥ್ಯ

ಲಾವಾ ಅಗ್ನಿ 3 5G ಫೋನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎಕ್ಸ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಇದನ್ನು 4ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಲಾವಾ ಫೋನ್ ಆಂಡ್ರಾಯ್ಡ್ 14 ಓಎಸ್‌ನಲ್ಲಿ ಕೆಲಸ ಮಾಡುತ್ತದೆ.

ಸ್ಟೋರೇಜ್ ಆಯ್ಕೆ

ಲಾವಾ ಅಗ್ನಿ 3 5G ಸ್ಮಾರ್ಟ್‌ಫೋನ್ 8GB RAM ಮತ್ತು 256GB ಸ್ಟೋರೇಜ್‌ ಒಳಗೊಂಡಿದೆ. ಇದು 8GB ವರ್ಚುವಲ್ RAM ಸಹ ಹೊಂದಿದೆ. ನೀವು 16GB RAM ಅನ್ನು ಬಳಸಬಹುದು.

Lava Agni 3 5G ಬೆಲೆ ಇಳಿಕೆ; 2250 ಡಿಸ್ಕೌಂಟ್.. ಹೊಸ ಬೆಲೆ ಎಷ್ಟು?

ಕ್ಯಾಮೆರಾ ಸೆಟಪ್

ಲಾವಾ ಅಗ್ನಿ 3 5G ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ OIS ಮತ್ತು EIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದಲ್ಲದೆ, 3X ಆಪ್ಟಿಕಲ್ ಜೂಮ್ ಮತ್ತು EIS ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ EIS ಜೊತೆಗೆ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಲಾವಾ ಅಗ್ನಿ 3 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 66W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಈ ಲಾವಾ ಫೋನ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿದೆ. ಜೊತೆಗೆ 14 5G ಬ್ಯಾಂಡ್‌ ಮತ್ತು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ ವೈ-ಫೈ 6e, ಬ್ಲೂಟೂತ್ 5.4, ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು ಓಟಿಜಿ ಸೇರಿದಂತೆ ಹಲವು ಆಯ್ಕೆಗಳನ್ನು ಹೊಂದಿದೆ.

Best Mobiles in India

English summary
Lava Agni 3 5G available with 13 percent discount on amazon: check new price, offers, availability specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+