ಖುಷಿ ಸುದ್ದಿ: Lava Blaze Curve 5G ಬೆಲೆ ಕುಸಿತ: 2,500 ಡಿಸ್ಕೌಂಟ್.. ಜೊತೆಗೆ ಆಫರ್ ಕೂಡ ಸಿಗುತ್ತೆ
ಲಾವಾ ಸ್ಮಾರ್ಟ್‌ಫೋನ್ ಪ್ರಿಯರಿಗೆ ಒಳ್ಳೆಯ ಸುದ್ದಿ ಇದೆ. ಈ 5G ಫೋನನ್ನು ಸಖತ್ ರಿಯಾಯಿತಿಯೊಂದಿಗೆ ಖರೀದಿಸಬಹುದು. ಹೌದು, ಲಾವಾ ಕಂಪನಿಯು ಮಾರ್ಚ್ ತಿಂಗಳಲ್ಲಿ ಲಾವಾ ಬ್ಲೇಜ್ ಕರ್ವ್ 5G (Lava Blaze Curve 5G) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತು. ಇದು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಪ್ರಸ್ತುತ, ಅಮೇಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ಈ ಫೋನ್ ಖರೀದಿ ಭಾರೀ ಡಿಸ್ಕೌಂಟ್ ಲಭ್ಯವಿದೆ. ಬನ್ನಿ ಈ ಫೋನಿನ ಹೊಸ ಬೆಲೆ ಮತ್ತು ಆಫರ್‌ಗಳನ್ನು ತಿಳಿಯೋಣ.
ಲಾವಾ ಬ್ಲೇಜ್ ಕರ್ವ್ 5G ಖರೀದಿ ಮೇಲೆ 1,000 ರೂ. ರಿಯಾಯಿತಿ ಮತ್ತು 1,500 ರೂ.ಗಳ ವರೆಗೆ ಬ್ಯಾಂಕ್ ಆಫರ್ ಘೋಷಿಸಲಾಗಿದೆ. ಜೊತೆಗೆ, ಕಂಪನಿಯು 16,000 ರೂ.ಗಳ ವರೆಗೆ ಎಕ್ಸ್‌ಚೇಂಜ್ ಆಫರ್ ಸಹ ನೀಡುತ್ತಿದೆ. ನೀವು ಹೊಸ 5G ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ಲಾವಾ ಬ್ಲೇಜ್ ಕರ್ವ್ 5G ಉತ್ತಮ ಆಯ್ಕೆಯಾಗಿದೆ. ಈ ಫೋನ್ ಕರ್ವ್ಡ್ ಡಿಸ್ಪ್ಲೇ, ಡೈಮೆನ್ಸಿಟಿ 7050 6 ನ್ಯಾನೋಮೀಟರ್ ಪ್ರೊಸೆಸರ್, 64 ಮೆಗಾಪಿಕ್ಸೆಲ್ ಕ್ಯಾಮೆರಾ, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಲಾವಾ ಬ್ಲೇಜ್ ಕರ್ವ್ 5G ಹೊಸ ಬೆಲೆ ಮತ್ತು ಡಿಸ್ಕೌಂಟ್
8GB RAM + 128GB ಸ್ಟೋರೇಜ್ ಬೆಲೆ = 16,999 ರೂ.
8GB RAM + 256GB ಸ್ಟೋರೇಜ್ ಬೆಲೆ = 17,999 ರೂ.
ಲಾವಾ ಬ್ಲೇಜ್ ಕರ್ವ್ 5G ಭಾರತದಲ್ಲಿ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಎರಡರ ಮೇಲೂ 1,000 ರೂ. ರಿಯಾಯಿತಿ ಲಭ್ಯವಿದೆ. ನೀವು ಈ ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರವನ್ನು 16,999 ರೂ.ಗಳಿಗೆ ಖರೀದಿಸಬಹುದು. 8GB RAM + 256GB ಸ್ಟೋರೇಜ್ ಆಯ್ಕೆಯ ಬೆಲೆ 17,999 ರೂ. ಇದೆ.
8GB RAM + 128GB ಆಫರ್ ಬೆಲೆ = 15,499 ರೂ.
8GB RAM + 256GB ಡಿಸ್ಕೌಂಟ್ ಬೆಲೆ = 16,499 ರೂ.
ಕಂಪನಿಯು ಕೆಲವು ಬ್ಯಾಂಕ್ ಆಫರ್ ನೀಡುತ್ತಿದೆ. ಈ ಫೋನ್ ಕೊಂಡರೆ 1,500 ರೂ. ವರೆಗೆ ರಿಯಾಯಿತಿ ಸಿಗುತ್ತದೆ. ಡಿಸ್ಕೌಂಟ್ ಬಳಿಕ ಮೂಲ ಮಾದರಿಯು 15,499 ರೂ.ಗೆ ಲಭ್ಯವಿದೆ. ಮತ್ತು ಟಾಪ್ ಮಾಡೆಲ್ 16,499 ರೂ.ಗೆ ಲಭ್ಯವಿದೆ. ಬ್ಯಾಂಕ್ ಆಫರ್ ಜೊತೆಗೆ, ನೀವು 16,000 ರೂ. ವರೆಗಿನ ಎಕ್ಸ್‌ಚೇಂಜ್ ಆಫರ್ ಸಹ ಪಡೆಯಬಹುದು. ಇದಲ್ಲದೆ, ನೋ ಕಾಸ್ಟ್ ಇಎಂಐ ಆಯ್ಕೆಯೂ ಲಭ್ಯವಿದೆ. ಈ ಫೋನನ್ನು 3 ರಿಂದ 6 ತಿಂಗಳ ಸುಲಭ ಕಂತುಗಳಲ್ಲಿ ಖರೀದಿಸಬಹುದು.
ಲಾವಾ ಬ್ಲೇಜ್ ಕರ್ವ್ 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಲಾವಾ ಬ್ಲೇಜ್ ಕರ್ವ್ 5G ಫೋನ್ 6.67 ಇಂಚಿನ FHD+ AMOLED 3D ಕರ್ವ್ಡ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 800 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಬೆಂಬಲಿಸುತ್ತದೆ.
ಪ್ರೊಸೆಸರ್: ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಚಿಪ್‌ಸೆಟ್ ಅನ್ನು ಹೊಂದಿದೆ. ಇದು 8GB RAM + 256GB ವರೆಗಿನ ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಬರುತ್ತದೆ. ಇದರೊಂದಿಗೆ, 8GB ವರ್ಚುವಲ್ RAM ತಂತ್ರಜ್ಞಾನವನ್ನು ಒದಗಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 13 ನೊಂದಿಗೆ ಬಂದಿದೆ. ಇದು ಎರಡು ವರ್ಷಗಳ OS ಮತ್ತು ಮೂರು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ.
ಕ್ಯಾಮೆರಾ: ಲಾವಾ ಬ್ಲೇಜ್ ಕರ್ವ್ 5G ಮೊಬೈಲ್ 64 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಹಿಂದಿನ ಪ್ಯಾನೆಲ್‌ನಲ್ಲಿ 20X ಆಪ್ಟಿಕಲ್ ಜೂಮ್, 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಲೆನ್ಸ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ: ಲಾವಾ ಬ್ಲೇಜ್ ಕರ್ವ್ 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.
ಇತರೆ ವೈಶಿಷ್ಟ್ಯಗಳು: ಈ ಫೋನ್ ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಉತ್ತಮ ಆಡಿಯೋಗಾಗಿ ಡಾಲ್ಬಿ ಅಟ್ಮಾಸ್ ಸ್ಪೀಕರ್‌ಗಳನ್ನು ಸಹ ಹೊಂದಿದೆ.


Click it and Unblock the Notifications








