Home
Deal of the day

ಭರ್ಜರಿ ಆಫರ್: ಕೇವಲ 21 ರೂಪಾಯಿಗೆ 'Probuds Aria 911' ಖರೀದಿಸಿ!

ಈ ದೀಪಾವಳಿ ಹಬ್ಬದ ಸಂಭ್ರಮದಲ್ಲಿ, ಭಾರತೀಯ ಮೊಬೈಲ್ ಬ್ರ್ಯಾಂಡ್ ಲಾವಾದ ಆಡಿಯೊ ಬ್ರ್ಯಾಂಡ್ 'ಪ್ರೊಬಡ್ಸ್' (Probuds) ತನ್ನ ಗ್ರಾಹಕರಿಗೆ ಕೇವಲ 21 ರೂಪಾಯಿಗೆ 'Probuds Aria 911' ಇಯರ್‌ಬಡ್ ಸಾಧನವನ್ನು ಖರೀದಿಸಲು ಅವಕಾಶ ಕಲ್ಪಿಸಿದೆ.! ಹೌದು, ಇದೇ ಅಕ್ಟೋಬರ್ 21 ರಂದು ಹಬ್ಬದ ಪ್ರಯುಕ್ತ ಮಧ್ಯಾಹ್ನ 1:15 IST ಕ್ಕೆ Probuds Aria 911 ಇಯರ್‌ಬಡ್‌ಗಳಿಗಾಗಿ ಒಂದು Mega Flash Sale ಅನ್ನು ಆಯೋಜಿಸಲಾಗಿದೆ.

ಈ ಮಾರಾಟದಲ್ಲಿ ಮೊದಲ 100 ಅದೃಷ್ಟಶಾಲಿ ಗ್ರಾಹಕರು ಈ ಇಯರ್‌ಬಡ್‌ಗಳನ್ನು ಕೇವಲ ₹21 ರ ವಿಶೇಷ ಬೆಲೆಯಲ್ಲಿ ಖರೀದಿಸಬಹುದು. ಇಷ್ಟೇ ಅಲ್ಲದೆ, ಸಾಂಪ್ರದಾಯಿಕ ಮಾರಾಟದ ವಿಧಾನಗಳಿಗೆ ತಿಲಾಂಜಲಿ ನೀಡಿರುವ Probuds, ತನ್ನ 'Diwali Zero-Risk Muhurat Sale' ಮೂಲಕ 30 ದಿನಗಳ ಪೂರ್ಣ ಮನಿ ಬ್ಯಾಕ್ ಗ್ಯಾರಂಟಿ ನೀಡುತ್ತಿದೆ. ಜೊತೆಗೆ ಮುಹೂರ್ತ ಟ್ರೇಡಿಂಗ್ ಕೊಡುಗೆ ಸಹ ಇದೆ.! ಈ ಕುರಿತ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

30 ದಿನಗಳ ಪೂರ್ಣ ಮನಿ ಬ್ಯಾಕ್ ಗ್ಯಾರಂಟಿ
ದೀಪಾವಳಿ ಹಬ್ಬದ ಉಡುಗೊರೆಯಾಗಿ, ಗ್ರಾಹಕರು Probuds‌ ನ ಯಾವುದೇ Truly Wireless Audio Device ಅನ್ನು ಖರೀದಿಸಿ ಒಂದು ತಿಂಗಳ ಕಾಲ ಬಳಸಬಹುದು. ಖರೀದಿಸಿದ ನಂತರ, ಒಂದು ವೇಳೆ ಗ್ರಾಹಕರಿಗೆ ಉತ್ಪನ್ನದ ಗುಣಮಟ್ಟ ಅಥವಾ ಕಾರ್ಯಕ್ಷಮತೆಯ ಬಗ್ಗೆ ಅವರಿಗೆ ತೃಪ್ತಿ ಇಲ್ಲದಿದ್ದರೆ, ಯಾವುದೇ ಪ್ರಶ್ನೆಗಳಿಲ್ಲದೆ ಉತ್ಪನ್ನವನ್ನು ಹಿಂತಿರುಗಿಸಿ ಸಂಪೂರ್ಣ ಹಣವನ್ನು ಮರಳಿ ಪಡೆಯಬಹುದು. ಇದನ್ನು ಕಂಪನಿಯು 'Money Back Challenge' ಎಂದು ಕರೆದಿದೆ.

ಭರ್ಜರಿ ಆಫರ್: ಕೇವಲ 21 ರೂಪಾಯಿಗೆ 'Probuds Aria 911' ಖರೀದಿಸಿ!

₹21ಕ್ಕೆ Probuds Aria 911: Flash Sale
ಈ 30 ದಿನಗಳ ಪ್ರಯೋಗದ ಜೊತೆಗೆ, ಕಂಪನಿಯು ಅಕ್ಟೋಬರ್ 21 ರಂದು ಮಧ್ಯಾಹ್ನ 1:15 IST ಕ್ಕೆ Probuds Aria 911 ಇಯರ್‌ಬಡ್‌ಗಳಿಗಾಗಿ ಒಂದು Mega Flash Sale ಅನ್ನು ಆಯೋಜಿಸಿದೆ. ಈ ಮಾರಾಟದ ಮುಖ್ಯ ಆಕರ್ಷಣೆ ಏನೆಂದರೆ, ಮೊದಲ 100 ಅದೃಷ್ಟಶಾಲಿ ಗ್ರಾಹಕರು ಈ ಇಯರ್‌ಬಡ್‌ಗಳನ್ನು ಕೇವಲ ₹21 ರ ವಿಶೇಷ ಬೆಲೆಯಲ್ಲಿ ಖರೀದಿಸಬಹುದು. ಈ Flash Sale ಅಮೆಜಾನ್ಮತ್ತು lavamobiles.com ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

ಮೆಗಾ ದೀಪಾವಳಿ ಸ್ಪರ್ಧೆ ಮತ್ತು ಬಹುಮಾನಗಳು
ಈ ಖರೀದಿಯ ಜೊತೆಗೆ, Probuds ಒಂದು Mega Diwali Contest ಯನ್ನು ಸಹ ಪ್ರಕಟಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು, ಗ್ರಾಹಕರು ಮುಹೂರ್ತ ಟ್ರೇಡಿಂಗ್ ಬ್ಯಾನರ್‌ನ ಸ್ಕ್ರೀನ್‌ಶಾಟ್ ತೆಗೆದುಕೊಂಡು, #ReturnWaliDiwali ಹ್ಯಾಶ್‌ಟ್ಯಾಗ್ ಬಳಸಿ, ಅಧಿಕೃತ Probuds ಇನ್‌ಸ್ಟಾಗ್ರಾಮ್ ಖಾತೆಗೆ (@prozone_in) ಟ್ಯಾಗ್ ಮಾಡಿ ಪೋಸ್ಟ್ ಮಾಡಬೇಕು.

ಅಕ್ಟೋಬರ್ 16 ರಿಂದ 20 ರವರೆಗೆ ನಡೆಯುವ ಈ ಸ್ಪರ್ಧೆಯ ಫಲಿತಾಂಶವನ್ನು ಅಕ್ಟೋಬರ್ 22 ರಂದು ಘೋಷಿಸಲಾಗುವುದು. ಒಟ್ಟು 110 ವಿಜೇತರನ್ನು ಆಯ್ಕೆ ಮಾಡಲಾಗುತ್ತಿದ್ದು, 100 ಮಂದಿಗೆ Probuds E1 ಇಯರ್‌ಬಡ್‌ಗಳು, ತಲಾ ಐದು ಮಂದಿಗೆ Probuds Aria 911 ಮತ್ತು Probuds Wave 921 ಇಯರ್‌ಬಡ್‌ಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ಕಂಪೆನಿ ತಿಳಿಸಿದೆ.

ಈ ಹಬ್ಬದ ಋತುವಿನಲ್ಲಿ, ತನ್ನ ಗ್ರಾಹಕರಿಗಾಗಿ ಕೇವಲ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಒದಗಿಸುವುದಕ್ಕಿಂತ ಹೆಚ್ಚಾಗಿ, ಉತ್ತಮ ಅನುಭವಕ್ಕೆ ಹೆಚ್ಚಿನ ಒತ್ತು ನೀಡುವ ಗುರಿಯನ್ನು Probuds ಹೊಂದಿದೆ. ಸಾಮಾನ್ಯವಾಗಿ, ಹೊಸ ಎಲೆಕ್ಟ್ರಾನಿಕ್ ಸಾಧನಗಳನ್ನು ಖರೀದಿಸುವಾಗ ಅದು ನಿಜಕ್ಕೂ ನಮ್ಮ ನಿರೀಕ್ಷೆಗಳನ್ನು ಪೂರೈಸುತ್ತದೆಯೇ ಎಂಬ ಗೊಂದಲ ಗ್ರಾಹಕರಲ್ಲಿ ಇರುತ್ತದೆ. ಈ ಗೊಂದಲವನ್ನು ನಿವಾರಿಸಲು, Probuds ಒಂದು ಧೈರ್ಯಶಾಲಿ ಹೆಜ್ಜೆ ಇಟ್ಟಿದೆ ಎಂದು ಹೇಳಬಹುದು. ಇದು ಗ್ರಾಹಕರಿಗೆ ಯಾವುದೇ ಆರ್ಥಿಕ ಅಪಾಯವಿಲ್ಲದೆ, ಉತ್ಪನ್ನವನ್ನು ಪರೀಕ್ಷಿಸಿ ಖರೀದಿಸುವ ವಿಶ್ವಾಸವನ್ನು ನೀಡುತ್ತದೆ ಎಂಬುದು ನನ್ನ ಅಭಿಪ್ರಾಯ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು?, ನಿಮ್ಮ ದೀಪಾವಳಿ ಶಾಪಿಂಗ್‌ನಲ್ಲಿ ಈ 'Zero-Risk' ಅವಕಾಶವನ್ನು ಬಳಸಿಕೊಳ್ಳಲು ನೀವು ಸಿದ್ಧರಿದ್ದೀರಾ? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Lava is offering its latest Probuds Aria 911 earbuds at a jaw-dropping ₹21 for a limited time sale. Date and Details Inside
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+