ಹೊಸ ವರ್ಷದ ಆಫರ್! ಬರೋಬ್ಬರಿ 5000 ಬೆಲೆ ಇಳಿಕೆ.. ಶೇ.27 ಡಿಸ್ಕೌಂಟ್.. ಸಸ್ತಾ ಬೆಲೆಗೆ Lava 5G ಫೋನ್
ಲಾವಾ ತನ್ನ ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಹೊಸ ವರ್ಷದ ಪ್ರಯುಕ್ತ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಈ 5G ಫೋನಿನ ಬೆಲೆಯನ್ನು ಇಳಿಕೆ ಮಾಡಿದೆ. ಹೌದು, ಕಂಪನಿಯು ಲಾವಾ ಸ್ಟಾರ್ಮ್ 5G (Lava Storm 5G) ಫೋನನ್ನು 5000 ರೂ. ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಹಾಗೆಯೇ ಫ್ಲಾಟ್ ಡಿಸ್ಕೌಂಟ್, ಬ್ಯಾಂಕ್ ಆಫರ್ ಮತ್ತು ಎಕ್ಸ್‌ಚೇಂಜ್ ಆಫರ್ ಸಹ ನೀಡಲಾಗುತ್ತಿದೆ. ಬನ್ನಿ, ಈ ಪೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.
ಲಾವಾ ಸ್ಟಾರ್ಮ್ 5G ಮೊಬೈಲ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಫೋನಿನಲ್ಲಿ 6.78 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಜೊತೆಗೆ 5000mAh ಬ್ಯಾಟರಿ ಮತ್ತು 33W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನನ್ನು 8GB RAM + 128GB ಸ್ಟೋರೇಜ್ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಕಂಪನಿಯು ಶೇ.27 ರಷ್ಟು ರಿಯಾಯಿತಿ ನೀಡುತ್ತಿದೆ. ಈ ಫೋನಿನ ಹೊಸ ಬೆಲೆ ತಿಳಿಯಲು ಮುಂದೆ ಓದಿ.

ಲಾವಾ ಸ್ಟಾರ್ಮ್ 5G ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ಲಾವಾ ಸ್ಟಾರ್ಮ್ 5G ಸ್ಮಾರ್ಟ್‌ಫೋನ್ 6.78 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಐಪಿಎಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ.
ಮೀಡಿಯಾಟೆಕ್ ಪ್ರೊಸೆಸರ್
ಲಾವಾ ಸ್ಟಾರ್ಮ್ 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಈ ಫೋನ್ ಆಂಡ್ರಾಯ್ಡ್ 13 ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ 8GB RAM ಮತ್ತು 128GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ಈ ಫೋನಿನಲ್ಲಿ ಹೆಚ್ಚುವರಿಯಾಗಿ 8GB ವರ್ಚುವಲ್ RAM ಸೌಲಭ್ಯ ಸಹ ಇದೆ. ನೀವು, ಒಟ್ಟು 16GB RAM ಅನ್ನು ಬಳಸಬಹುದು.
ಡ್ಯುಯಲ್ ಕ್ಯಾಮೆರಾ ಸೆಟಪ್
ಲಾವಾ ಸ್ಟಾರ್ಮ್ 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಈ ಮೊಬೈಲ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಸಹ ಒಳಗೊಂಡಿದೆ.

ಶಕ್ತಿಯುತ ಬ್ಯಾಟರಿ
ಲಾವಾ ಸ್ಟಾರ್ಮ್ 5G ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 33W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಲಾವಾ ಸ್ಟಾರ್ಮ್ 5G ಮೊಬೈಲ್ ಸೈಡ್ ಮೌಂಟೆಡ್ ಅಲ್ಟ್ರಾ ಫಾಸ್ಟ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್‌ಲಾಕ್ ಫೀಚರ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 3.5 ಎಂಎಂ ಆಡಿಯೋ ಜಾಕ್, ಎಫ್‌ಎಂ ರೇಡಿಯೋ, 5G, ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್ 5.1, ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಒಳಗೊಂಡಿದೆ.
ಲಾವಾ ಸ್ಟಾರ್ಮ್ 5G ಫೋನಿನ ಹೊಸ ಬೆಲೆ
ಲಾವಾ ಸ್ಟಾರ್ಮ್ 5G ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರವನ್ನು 14,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, ಅಮೆಜಾನ್‌ನಲ್ಲಿ 5000 ರೂ. ಡಿಸ್ಕೌಂಟ್ ಲಭ್ಯವಿದೆ. ಇದು 4,000 ರೂ. ಫ್ಲಾಟ್ ಡಿಸ್ಕೌಂಟ್ ಮತ್ತು 1,000 ರೂ. ಬ್ಯಾಂಕ್ ಆಫರ್ ಒಳಗೊಂಡಿದೆ. ನೀವು, ಕೇವಲ 10,999 ರೂ.ಗೆ ಖರೀದಿಸಬಹುದು.
ಹಾಗೆಯೇ 10,400 ರೂ. ಎಕ್ಸ್‌ಚೇಂಜ್ ಆಫರ್ ಸಹ ನೀಡಲಾಗುತ್ತಿದೆ. ಇದರೊಂದಿಗೆ 3 ರಿಂದ 6 ತಿಂಗಳ ನೋ ಕಾಸ್ಟ್ ಇಎಂಐ ಸೌಲಭ್ಯ ಸಹ ಲಭ್ಯವಿದೆ. ಈ ಮೊಬೈಲ್ ಗೇಲ್ ಗ್ರೀನ್ ಮತ್ತು ಥಂಡರ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಮಾರಾಟವಾಗುತ್ತಿದೆ. ನೀವು, ಅಮೆಜಾನ್‌ನಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಬಹುದು.


Click it and Unblock the Notifications








