Home
Deal of the day

5000 ಕುಸಿತ! 31% ಡಿಸ್ಕೌಂಟ್.. ಕಡಿಮೆ ಬೆಲೆಗೆ Lava Storm 5G ಸೇಲ್; ಹೊಸ ಬೆಲೆ ಎಷ್ಟು?

ಹಬ್ಬದ ವಿಶೇಷ ಆಫರ್‌ಗಳು ಮುಗಿದಿವೆ. ಹೊಸ ಮೊಬೈಲ್ ಕೊಳ್ಳುವುದು ಹೇಗೆ? ಎಂದು ಬೇಜಾರು ಮಾಡಿಕೊಳ್ಳಬೇಡಿ. ಲಾವಾ (Lava) ನಿಮಗಾಗಿ ಸಿಹಿಸುದ್ದಿಯೊಂದನ್ನು ನೀಡಿದೆ. ಕೇವಲ 10,000 ರೂ.ಗೆ 5G ಫೋನನ್ನು ಮಾರಾಟ ಮಾಡುತ್ತಿದೆ. ಹೌದು, ಕಂಪನಿಯು ಲಾವಾ ಸ್ಟಾರ್ಮ್ 5G (Lava Storm 5G) ಬೆಲೆಯನ್ನು ಇಳಿಕೆ ಮಾಡಿದೆ. ನೀವು, ಬರೋಬ್ಬರಿ ಶೇ.31 ರಷ್ಟು ರಿಯಾಯಿತಿಯ ಲಾಭ ಪಡೆಯಬಹುದು. ಜೊತೆಗೆ, ಬ್ಯಾಂಕ್‌ ಡಿಸ್ಕೌಂಟ್‌ ಮತ್ತು ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ. ಬನ್ನಿ, ಈ ಪೋನಿನ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಕಂಪನಿಯು ಲಾವಾ ಸ್ಟಾರ್ಮ್ 5G ಫೋನನ್ನು 8GB RAM + 128GB ಸ್ಟೋರೇಜ್‌ ಆಯ್ಕೆಯಲ್ಲಿ ಮಾರಾಟ ಮಾಡುತ್ತಿದೆ. ನೀವು, ಗೇಲ್ ಗ್ರೀನ್ ಮತ್ತು ಥಂಡರ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು. ಈ ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಇದರೊಂದಿಗೆ 6.78 ಇಂಚಿನ ಡಿಸ್ಪ್ಲೇ, 5000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

5000 ಅಗ್ಗ! ಕಮ್ಮಿ ಬೆಲೆಗೆ Lava Storm 5G ಸೇಲ್.. 31% ಡಿಸ್ಕೌಂಟ್.. ಬೆಲೆ ನೋಡಿ

ಲಾವಾ ಸ್ಟಾರ್ಮ್ 5G ಫೋನಿನ ಹೊಸ ಬೆಲೆ

ಲಾವಾ ಸ್ಟಾರ್ಮ್ 5G ಫೋನನ್ನು 14,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಕಂಪನಿಯು ಅಮೆಜಾನ್‌ನಲ್ಲಿ ಶೇ.31 ರಷ್ಟು ರಿಯಾಯಿತಿ ನೀಡುತ್ತಿದೆ. ಪ್ರಸ್ತುತ, ಕೇವಲ 10,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ, ಈ ಫೋನ್ ಖರೀದಿಸಿದರೆ, ಹೆಚ್ಚುವರಿಯಾಗಿ 500 ರೂ. ರಿಯಾಯಿತಿ ಪಡೆಯಬಹುದು. ನೀವು, ಲಾವಾದ ಅಧಿಕೃತ ಸ್ಟೋರ್ ಮತ್ತು ಅಮೆಜಾನ್‌ನಲ್ಲಿ ಲಾವಾ ಸ್ಟಾರ್ಮ್ 5G ಫೋನನ್ನು ಖರೀದಿಸಬಹುದು .

ಲಾವಾ ಸ್ಟಾರ್ಮ್ 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಲಾವಾ ಸ್ಟಾರ್ಮ್ 5G ಮೊಬೈಲ್ 6.78 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಐಪಿಎಸ್ ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಲಾವಾ ಸ್ಟಾರ್ಮ್ 5G ಅನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಈ ಫೋನ್ ಆಂಡ್ರಾಯ್ಡ್‌ 13 ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಇದು ಎರಡು ವರ್ಷಗಳ ಭದ್ರತಾ ನವೀಕರಣಗಳೊಂದಿಗೆ ಆಂಡ್ರಾಯ್ಡ್‌ 14ಗೆ ಅಪ್‌ಗ್ರೇಡ್ ಹೊಂದಿದೆ.

ಸ್ಟೋರೇಜ್ ಆಯ್ಕೆ

ಲಾವಾ ಸ್ಟಾರ್ಮ್ 5G ಫೋನ್ 8GB RAM ಮತ್ತು 128GB ಸ್ಟೋರೇಜ್‌ ಆಯ್ಕೆಯನ್ನು ಒಳಗೊಂಡಿದೆ. ಫೋನಿನಲ್ಲಿ ಹೆಚ್ಚುವರಿಯಾಗಿ, 8GB ವರ್ಚುವಲ್ RAM ಸೌಲಭ್ಯ ಇದೆ.

ಕ್ಯಾಮೆರಾ ಸೆಟಪ್

ಲಾವಾ ಸ್ಟಾರ್ಮ್ 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಮದಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ (ಅಲ್ಟ್ರಾ ವೈಡ್) ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಲಾವಾ ಸ್ಟಾರ್ಮ್ 5G ಫೋನಿನಲ್ಲಿ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 33W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಲಾವಾ ಸ್ಟಾರ್ಮ್ 5G ಸೈಡ್ ಮೌಂಟೆಡ್ ಅಲ್ಟ್ರಾ ಫಾಸ್ಟ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಹೊಂದಿದೆ. ಡ್ಯುಯಲ್ ಸಿಮ್, 3.5mm ಆಡಿಯೋ ಜಾಕ್, ಎಫ್‌ಎಂ ರೇಡಿಯೋ, 5G, ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್ 5.1, ಜಿಪಿಎಸ್‌, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+