ಮತ್ತೊಮ್ಮೆ ಅವಕಾಶ: MacBook Air M4 ಈಗ ಅತ್ಯಂತ ಕಡಿಮೆ ದರದಲ್ಲಿ!
ಈ ವರ್ಷದ ಆರಂಭದಲ್ಲಿ ಆಪಲ್ ಪರಿಚಯಿಸಿರುವ ಬಹುಬೇಡಿಕೆಯ 13-ಇಂಚಿನ MacBook Air M4 ಇದೀಗ ಅಮೆಜಾನ್‌ನಲ್ಲಿ ಅದರ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಇತ್ತೀಚಿಗೆ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಮುಗಿದರೂ, ಅಮೆಜಾನ್‌ನಲ್ಲಿ ತನ್ನ ಅತ್ಯಂತ ಕಡಿಮೆ ಬೆಲೆಗೆ MacBook Air M4 ಸಾಧನವು ಮರಳಿದೆ. ಈ ಹೊಸ ರಿಯಾಯಿತಿಯ ಆಫರ್ ಖರೀದಿದಾರರಿಗೆ ಮತ್ತೊಂದು ಉತ್ತಮ ಅವಕಾಶವನ್ನು ಒದಗಿಸಿದ್ದು, ಪ್ರೀಮಿಯಂ ಲ್ಯಾಪ್‌ಟಾಪ್ ಹುಡುಕುತ್ತಿರುವವರಿಗೆ ಇದು ಅತ್ಯುತ್ತಮ ಸಮಯವಾಗಬಹುದು. ಹಾಗಾದರೆ, ಇದೀಗ ಆಫರ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.
MacBook Air M4 : ಬೆಲೆ ಮತ್ತು ಆಫರ್ ವಿವರಗಳು
ಆಪಲ್‌ನ MacBook Air M4 (16GB RAM + 256GB Storage) ಮಾದರಿ ಮೂಲತಃ ₹99,900 ಕ್ಕೆ ಲಭ್ಯವಿತ್ತು. ಈಗ ಅಮೆಜಾನ್‌ನಲ್ಲಿ ಇದು ಕೇವಲ ₹90,990 ಕ್ಕೆ ದೊರೆಯುತ್ತಿದೆ. ಜೊತೆಗೆ ಅಮೆಜಾನ್‌ನ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ನಿರ್ದಿಷ್ಟ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಖರೀದಿಸಿದರೆ ಹೆಚ್ಚುವರಿ ₹5,000 ರಿಯಾಯಿತಿ ದೊರೆಯುತ್ತದೆ. ಅಂದರೆ, ಖರೀದಿದಾರರು ಈ ಲ್ಯಾಪ್‌ಟಾಪ್ ಅನ್ನು ಕೇವಲ ₹85,000 ರೊಳಗೆ ಪಡೆಯಬಹುದು. ಇದು ಹಬ್ಬದ ಮಾರಾಟದ ನಂತರವೂ ಅತ್ಯುತ್ತಮ ಡೀಲ್ ಆಗಿದೆ.
MacBook Air M4: ಪ್ರಮುಖ ವೈಶಿಷ್ಟ್ಯಗಳು
MacBook Air M4 ಸಾಧನವು ನಯವಾದ ವಿನ್ಯಾಸ, ದೃಢವಾದ M4 ಚಿಪ್ ಮತ್ತು ಬಾಳಿಕೆ ಬರುವ ಬ್ಯಾಟರಿ ಬಾಳಿಕೆಗಾಗಿ ಪ್ರಸಿದ್ಧವಾಗಿದೆ. ಆಪಲ್‌ನ ಪ್ರಸಿದ್ಧ ಅಲ್ಯೂಮಿನಿಯಂ ಯುನಿಬಾಡಿ ವಿನ್ಯಾಸದಿಂದ ನಿರ್ಮಿತವಾಗಿರುವ ಈ ಲ್ಯಾಪ್‌ಟಾಪ್, ಕೇವಲ ಹಗುರವಾಗಿಯೇ ಅಲ್ಲ, ಆಕರ್ಷಕವೂ ಆಗಿದೆ. 13 ಇಂಚು ಮತ್ತು 15 ಇಂಚು ಎರಡು ಗಾತ್ರಗಳಲ್ಲಿ ಲಭ್ಯವಿರುವ ಈ ಪ್ರೀಮಿಯಂ ಲ್ಯಾಪ್‌ಟಾಪ್ ಸಾಧನವು ಲಿಕ್ವಿಡ್ ರೆಟಿನಾ ಡಿಸ್ಪ್ಲೇ 500 ನಿಟ್ಸ್ ಬ್ರೈಟ್ನೆಸ್ ಅನ್ನು ನೀಡುತ್ತದೆ, ಇದು ಸ್ಪಷ್ಟ ಚಿತ್ರಣ ಮತ್ತು ಅತ್ಯುತ್ತಮ ಬಣ್ಣಗಳನ್ನು ಒದಗಿಸುತ್ತದೆ.

ಈ MacBook Air M4 ಸಾಧನದರಲ್ಲಿನ MagSafe ಚಾರ್ಜಿಂಗ್ ಪೋರ್ಟ್, ಎರಡು Thunderbolt ಪೋರ್ಟ್‌ಗಳು ಮತ್ತು ಶಕ್ತಿ ಕಾರ್ಯಕ್ಷಮತೆಯ M4 ಚಿಪ್ ಇದರ ಪ್ರಮುಖ ಹೈಲೈಟ್‌ಗಳಾಗಿವೆ. ವೀಡಿಯೊ ಕಾಲ್‌ಗಾಗಿ 12MP Centre Stage ಕ್ಯಾಮೆರಾ ನೀಡಲ್ಪಟ್ಟಿದ್ದು, ನಿಮ್ಮ ಚಲನೆಯ ಪ್ರಕಾರ ಫ್ರೇಮಿಂಗ್‌ನ್ನು ಸ್ವಯಂಚಾಲಿತವಾಗಿ ಹೊಂದಿಸುತ್ತದೆ. ಜೊತೆಗೆ, AI ಆಧಾರಿತ ChatGPT ಇಂಟಿಗ್ರೇಶನ್ ಕೂಡ ಸೇರಿಸಲಾಗಿದೆ. ಬಳಕೆದಾರರು ನೇರವಾಗಿ ಸಿರಿ ಮೂಲಕ AI ಸಹಾಯವನ್ನು ಪಡೆಯಬಹುದು.
ಇಷ್ಟೇ ಅಲ್ಲದೆ, ಹೊಸ Siri ಅಪ್‌ಡೇಟ್ ಮೂಲಕ ಧ್ವನಿ ಮತ್ತು ಪಠ್ಯ ಆಧಾರಿತ ಕಮಾಂಡ್‌ಗಳ ನಡುವಿನ ಬದಲಾವಣೆ ಸುಲಭವಾಗಿದೆ. ಇದು ಆಪಲ್‌ನ ಸ್ಮಾರ್ಟ್ ಮ್ಯಾಕ್ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ. ಆಪಲ್‌ನ M4 ಚಿಪ್‌ನಿಂದ ಚಾಲಿತವಾಗಿರುವ ಈ ಲ್ಯಾಪ್‌ಟಾಪ್ 18 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ಒದಗಿಸುತ್ತದೆ. ಹಾಗಾಗಿ, ಇದು ಇದು ದಿನಪೂರ್ತಿ ಕೆಲಸ, ವೀಡಿಯೊ ಎಡಿಟಿಂಗ್, ಕಂಟೆಂಟ್ ಕ್ರಿಯೇಶನ್ ಅಥವಾ ಸ್ಟ್ರೀಮಿಂಗ್ ಎಲ್ಲದರಿಗೂ ಇದು ಪರಿಪೂರ್ಣ ಸಾಧನವಾಗಿದೆ.
ಹಬ್ಬದ ಆಫರ್‌ಗಳು ಮುಗಿದಿದರೂ ಸಹ, ಈ ಹೊಸ ಬೆಲೆಯಲ್ಲಿ MacBook Air M4 ಖರೀದಿಸುವುದು ಖಂಡಿತವಾಗಿಯೂ ಲಾಭದಾಯಕ ಎಂಬುದನ್ನು ನನ್ನ ಅನಿಸಿಕೆ. ಉತ್ತಮ ಕಾರ್ಯಕ್ಷಮತೆ, ಬ್ಯಾಟರಿ ಶಕ್ತಿ ಮತ್ತು ಆಕರ್ಷಕ ವಿನ್ಯಾಸದೊಂದಿಗೆ, ಇದು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಕ್ರಿಯೇಟರ್‌ಗಳಿಗೆ ಅತ್ಯುತ್ತಮ ಆಯ್ಕೆಯಾಗಬಹುದು. ಈ ವರ್ಷ ಪ್ರೀಮಿಯಂ ಆಪಲ್ ಅನುಭವವನ್ನು ₹85,000 ಕ್ಕೆ ಪಡೆಯಲು ಇದು ಕೊನೆಯ ಅವಕಾಶ ಕೂಡ ಆಗಿರಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ.


Click it and Unblock the Notifications








