Home
Deal of the day

ಜಸ್ಟ್ 6,999 ಸಾಕು! 5200mAh ಬ್ಯಾಟರಿ, 50MP ಕ್ಯಾಮೆರಾ.. ಈ ಅಗ್ಗದ ಫೋನಿಗೆ ಸಖತ್ ಆಫರ್

ಮೊಟೊ ಕಂಪನಿಯು ಇತ್ತೀಚೆಗೆ ಹೊಸ ಅಗ್ಗದ ಫೋನನ್ನು ಬಿಡುಗಡೆ ಮಾಡಿತ್ತು. ಕೇವಲ ಎರಡು ತಿಂಗಳಲ್ಲೇ ಈ ಫೋನಿನ ಬೆಲೆಯನ್ನು ಇಳಿಕೆ ಮಾಡಿದೆ. ಹೌದು, ಈ ವರ್ಷದ ಜನವರಿಯಲ್ಲಿ ಮೊಟೊ G05 (Moto G05) ಸ್ಮಾರ್ಟ್‌ಫೋನ್ ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತ್ತು. ಪ್ರಸ್ತುತ, ಫ್ಲಿಪ್‌ಕಾರ್ಟ್ ಈ ಫೋನಿಗೆ ಸಖತ್ ಆಫರ್ ಘೋಷಿಸಿದೆ. ನೀವು ಕೇವಲ 6999 ರೂ.ಗೆ ಖರೀದಿಸಬಹುದು. ಇದು ಅಗ್ಗದ ಬೆಲೆಗೆ ಬಿಡುಗಡೆಯಾದರೂ, ಪ್ರೀಮಿಯಂ ನೋಟವನ್ನು ಹೊಂದಿದೆ. ಇದರೊಂದಿಗೆ ಉತ್ತಮ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಕಂಪನಿಯು Moto G04 ಉತ್ತರಾಧಿಕಾರಿಯಾಗಿ ಮೊಟೊ G05 ಅನ್ನು ಪರಿಚಯಿಸಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ . ಇದು ಮೀಡಿಯಾಟೆಕ್ ಹೆಲಿಯೊ G81 ಅಲ್ಟ್ರಾ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ 4GB RAM + 64GB ಸ್ಟೋರೇಜ್, 5200mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಹೊಸ ಬೆಲೆ, ಆಫರ್ ಮತ್ತು ಇನ್ನಿತರ ಫೀಚರ್ ತಿಳಿಯಲು ಮುಂದೆ ಓದಿ.

ಕೇವಲ 6,999 ಸಾಕು! 5200mAh ಬ್ಯಾಟರಿ, 50MP ಕ್ಯಾಮೆರಾ.. ಈ ಫೋನಿಗೆ ಸಖತ್ ಆಫರ್

ಡಿಸ್ಪ್ಲೇ ಹೇಗಿದೆ

ಮೊಟೊ G05 ಸ್ಮಾರ್ಟ್‌ಫೋನ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 1604 × 720 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಇದರೊಂದಿಗೆ 90Hz ರಿಫ್ರೆಶ್ ದರ ಮತ್ತು 1,000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಸಹ ಪಡೆದಿದೆ. ಈ ಫೋನ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಹೊಂದಿದೆ.

ಮೀಡಿಯಾಟೆಕ್‌ ಪ್ರೊಸೆಸರ್

ಮೊಟೊ G05 ಮೊಬೈಲ್ ಮೀಡಿಯಾಟೆಕ್‌ ಹೆಲಿಯೊ G81 ಅಲ್ಟ್ರಾ ಪ್ರೊಸೆಸರ್ ಹೊಂದಿದೆ. ಈ ಫೋನ್ ಇತ್ತೀಚಿನ ಹೊಸ ಆಂಡ್ರಾಯ್ಡ್‌ 15 ಓಎಸ್‌ ಜೊತೆಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ ಇದು, ಆರ್ಮ್ ಮಾಲಿ G52 MC2 ಜಿಪಿಯು ಸಹ ಹೊಂದಿದೆ. ಈ ಮೊಬೈಲ್ 4GB RAM ನೊಂದಿಗೆ ಬರುತ್ತದೆ.ಇದು 8GB ವರ್ಚುವಲ್ RAM ಹೊಂದಿದೆ. ಈ ಫೋನ್ 64GB ಸ್ಟೋರೇಜ್‌ ಆಯ್ಕೆಯಲ್ಲಿ ಬರಲಿದೆ. ಮೈಕ್ರೊ ಎಸ್‌ಡಿ ಮೂಲಕ 1TB ವರೆಗೆ ಸ್ಟೋರೇಜ್‌ ಹೆಚ್ಚಿಸಬಹುದು.

Take a Poll

ಡ್ಯುಯಲ್ ಕ್ಯಾಮೆರಾ ಸೆಟಪ್

ಮೊಟೊ G05 ಫೋನ್‌ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. ಈ ಸ್ಮಾರ್ಟ್‌ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಬ್ಯಾಕಪ್ ಹೇಗಿದೆ?

ಮೊಟೊ G05 ಸ್ಮಾರ್ಟ್‌ಫೋನ್ 5,200mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, ಈ ಫೋನ್ 18W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಬ್ಯಾಟರಿ ಸಂಪೂರ್ಣ ಚಾರ್ಜ್ ಬಳಿಕ ಎರಡು ದಿನ ಬಾಳಿಕೆ ಬರುತ್ತದೆ. ಈ ಮೊಟೊ ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP52 ರೇಟಿಂಗ್‌ ಪಡೆದಿದೆ. ಡ್ಯುಯಲ್ ಡಾಲ್ಬಿ ಅಟ್ಮಾಸ್, ಸ್ಟೀರಿಯೋ ಸ್ಪೀಕರ್‌ಗಳು, 3.5 ಎಂಎಂ ಆಡಿಯೋ ಜಾಕ್ ಮತ್ತು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸಹ ಹೊಂದಿದೆ. ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಡ್ಯುಯಲ್ ಸಿಮ್, ಬ್ಲೂಟೂತ್ 5.4, ವೈ-ಫೈ, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮೊಟೊ G05 ಹೊಸ ಬೆಲೆ ಮತ್ತು ಆಫರ್

ಮೊಟೊ G05 ಮೊಬೈಲ್ ಕೇವಲ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆಯಾಗಿದೆ. ಈ ಫೋನಿನ 4GB RAM + 64GB ಸ್ಟೋರೇಜ್ ಬೆಲೆ ಕೇವಲ 6,999 ರೂ. ಆಗಿದೆ. ಪ್ರಸ್ತುತ, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ ಫ್ಲಿಪ್‌ಕಾರ್ಟ್ ಈ ಫೋನಿನ ಖರೀದಿ ಮೇಲೆ ರಿಯಾಯಿತಿ ನೀಡುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವ ಗ್ರಾಹಕರು ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಮೊಟೊ ಸ್ಮಾರ್ಟ್‌ಫೋನ್ ಪ್ಲಮ್ ರೆಡ್ ಮತ್ತು ಫಾರೆಸ್ಟ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ.

Best Mobiles in India

English summary
Moto G05 with 5200mah battery and 50mp camera available just Rs 6999 on flipkart: check offers, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+