ಕೇವಲ 8,999 ರೂ.! 1TB ಸ್ಟೋರೇಜ್.. 50MP ಕ್ಯಾಮೆರಾ.. ಯಾವ ಫೋನ್?
ಮೊಟೊರೊಲಾ ಭಾರತದಲ್ಲಿ ಹೊಸ ಮೊಟೊ G35 5G (Moto G35 5G) ಫೋನ್ ಬಿಡುಗಡೆಗೆ ಸಜ್ಜಾಗಿದೆ. ಈ ನೂತನ ಮೊಬೈಲ್ ಡಿಸೆಂಬರ್ 10 ರಂದು ಭಾರತದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇದಕ್ಕೂ ಮುಂಚೆಯೇ ಕಂಪನಿಯು, ಮೊಟೊ G45 5G (Moto G45 5G) ಬೆಲೆಯನ್ನು ಇಳಿಕೆ ಮಾಡಿದೆ. ಹೌದು, ಫ್ಲಿಪ್‌ಕಾರ್ಟ್‌ನಲ್ಲಿ ಮೊಟೊ G45 5G ಖರೀದಿ ಮೇಲೆ ಶೇ.15 ರಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ. ಜೊತೆಗೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಲಭ್ಯವಿದೆ. ಬನ್ನಿ, ಈ ಫೋನಿನ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.
ಮೊಟೊ G45 5G ಮೊಬೈಲ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ. ನೀವು, ಮೂಲ ರೂಪಾಂತರವನ್ನು ಕೇವಲ 8,999 ರೂ.ಗೆ ಖರೀದಿಸಬಹುದು. ಈ ಫೋನ್ ಮೂರು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ನೀವು ವಿವಾ ಮೆಜೆಂಟಾ, ಬ್ರಿಲಿಯಂಟ್ ಬ್ಲೂ ಮತ್ತು ಬ್ರಿಲಿಯಂಟ್ ಗ್ರೀನ್ ಬಣ್ಣಗಳಲ್ಲಿ ಕೊಳ್ಳಬಹುದು. ಇದು 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಫೋನಿನಲ್ಲಿ 6.5 ಇಂಚಿನ ಡಿಸ್ಲ್ಪೇ ಲಭ್ಯವಿದೆ. ಜೊತೆಗೆ 5000mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಮೊಟೊ G45 5G ಫೋನಿನ ಬೆಲೆ ಮತ್ತು ಆಫರ್‌ಗಳು
ಮೊಟೊ G45 5G ಫೋನಿನ 4GB + 128GB ಸ್ಟೋರೇಜ್ ಬೆಲೆ 10,999 ರೂ. ಆಗಿದೆ. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ 2,000 ರೂ. ಡಿಸ್ಕೌಂಟ್ ಲಭ್ಯವಿದೆ. ನೀವು, ಕೇವಲ 8,999 ರೂ.ಗೆ ಈ ಫೋನ್ ಖರೀದಿಸಬಹುದು. ಫೋನಿನ 8GB + 128GB ಸ್ಟೋರೇಜ್ ಬೆಲೆ 12,999 ರೂ. ಇದೆ. ಈ ಫೋನ್ ಖರೀದಿ ಮೇಲೆ ಶೇ.13 ರಷ್ಟು ರಿಯಾಯಿತಿ ಲಭ್ಯವಿದೆ. ಡಿಸ್ಕೌಂಟ್ ಬಳಿಕ ಇದನ್ನು ಕೇವಲ 10,999 ರೂ.ಗೆ ಕೊಳ್ಳಬಹುದು. ಜೊತೆಗೆ, 5% ಕ್ಯಾಶ್‌ಬ್ಯಾಕ್ ಮತ್ತು ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ 1,000 ರೂ. ಡಿಸ್ಕೌಂಟ್ ಸಿಗುತ್ತದೆ.
ಮೊಟೊ G45 5G ಫೋನಿನ ವೈಶಿಷ್ಟ್ಯಗಳು
ಡಿಸ್ಲ್ಪೇ ಹೇಗಿದೆ?
ಮೊಟೊ G45 5G ಮೊಬೈಲ್ 6.5 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಲ್ಪೇಯನ್ನು ಹೊಂದಿದೆ. ಇದು 1600 x 720 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಡಿಸ್ಲ್ಪೇಯು 120Hz ರಿಫ್ರೆಶ್ ದರ, 500 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಹೊಂದಿದೆ.
ಪ್ರೊಸೆಸರ್ ಯಾವುದು?
ಮೊಟೊ G45 5G ಫೋನ್ ಸ್ನಾಪ್‌ಡ್ರಾಗನ್ 6s ಜೆನ್ 3 ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಇದು 4GB, 8GB RAM ಮತ್ತು 128GB ಸ್ಟೋರೇಜ್ ಹೊಂದಿದೆ. ನೀವು, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ಹೆಚ್ಚಿಸಬಹುದು.

ಅದ್ಭುತ ಕ್ಯಾಮೆರಾ
ಮೊಟೊ G45 5G ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.
ಸೂಪರ್ ಬ್ಯಾಟರಿ ಬ್ಯಾಕಪ್
ಮೊಟೊ G45 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 18W ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಮೊಟೊ G45 5G ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP52 ರೇಟಿಂಗ್ ಪಡೆದಿದೆ. ಇದು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದ ಹೊಂದಿದೆ. ಜೊತೆಗೆ ಡ್ಯುಯಲ್ ಸಿಮ್ 5G, ಬ್ಲೂಟೂತ್ 5.2, ವೈ ಫೈ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಿದೆ.


Click it and Unblock the Notifications








