Home
Deal of the day

ಸಿಹಿ ಸುದ್ದಿ! ದೀಪಾವಳಿಗೂ ಮೊದಲೇ Moto G85 5G ಬೆಲೆ ಇಳಿಕೆ; ಡಿಸ್ಕೌಂಟ್ ಎಷ್ಟು?

ಹೊಸ ಮೊಬೈಲ್ ಖರೀದಿಸುವ ಬಯಕೆ ಹೋದಿರುವಿರಾ? ಅದರಲ್ಲೂ ಮೊಟೊರೊಲಾ ಫೋನ್ ಕೊಳ್ಳುವ ಯೋಚನೆಯಲ್ಲಿದ್ದರೆ, ನಿಮಗಿದೆ ಸಿಹಿ ಸುದ್ದಿ. ಹೌದು, ಮೊಟೊರೊಲಾ (Motorola) ಕಂಪನಿಯು ಜುಲೈ ತಿಂಗಳಲ್ಲಿ ಮೊಟೊ G85 5G (Moto G85 5G) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಪ್ರಸ್ತುತ, ಕಂಪನಿಯು ದೀಪಾವಳಿಗೂ ಮೊದಲೇ ಈ ಫೋನಿನ ಬೆಲೆಯನ್ನು ಇಳಿಕೆ ಮಾಡಿದೆ. ಜೊತೆಗೆ, ಬ್ಯಾಂಕ್ ಆಫರ್, ಎಕ್ಸ್‌ಚೇಂಜ್ ಆಫರ್ ಮತ್ತು ನೋ ಕಾಸ್ಟ್ ಇಎಂಐ ಆಯ್ಕೆಗಳನ್ನು ನೀಡುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೊಟೊ G85 5G ಮೊಬೈಲ್ ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಕಂಪನಿಯು ಎರಡು ರೂಪಾಂತರಗಳಲ್ಲೂ ರಿಯಾಯಿತಿ ನೀಡುತ್ತಿದೆ. ಈ ಫೋನ್ 6.67 ಇಂಚಿನ 3D ಕರ್ವ್ ಡಿಸ್ಪ್ಲೇಯನ್ನು ಹೊಂದಿದೆ. ಇದರೊಂದಿಗೆ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6s ಜೆನ್ 3 ಆಕ್ಟಾ ಕೋರ್ ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಇದು ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ, 5000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಸಿಹಿ ಸುದ್ದಿ! ದೀಪಾವಳಿಗೂ ಮೊದಲೇ Moto G85 5G ಬೆಲೆ ಇಳಿಕೆ; ಆಫರ್‌ ಏನಿದೆ?

ಮೊಟೊ G85 5G ಹೊಸ ಬೆಲೆ ಮತ್ತು ಆಫರ್‌

ಕಂಪನಿಯು ಮೊಟೊ G85 5G ಫೋನನ್ನು 8GB RAM + 128GB ಮತ್ತು 12GB RAM + 256GB ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಮೂಲ ರೂಪಾಂತರದ ಬೆಲೆ 17,999 ರೂ. ಇದೆ. ಟಾಪ್ ವೇರಿಯಂಟ್ 19,999 ರೂ.ಗೆ ಬಿಡುಗಡೆಯಾಗಿದೆ. ಪ್ರಸ್ತುತ, ಕಂಪನಿಯು ಎರಡೂ ರೂಪಾಂತರಗಳ ಮೇಲೆ 1,000 ರೂ. ಫ್ಲಾಟ್ ರಿಯಾಯಿತಿ ನೀಡುತ್ತಿದೆ. ನೀವು, ಡಿಸ್ಕೌಂಟ್‌ನೊಂದಿಗೆ ಕ್ರಮವಾಗಿ 16,999 ರೂ. ಮತ್ತು 18,999 ರೂ.ಗಳಿಗೆ ಫೋನನ್ನು ಕೊಳ್ಳಬಹುದು.

ನೀವು, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ ಶೇ.5 ರಷ್ಟು ಕ್ಯಾಶ್ ಬ್ಯಾಕ್ ಪಡೆಯಬಹುದು. ಜೊತೆಗೆ, ನೋ ಕಾಸ್ಟ್ ಇಎಂಐ ಆಯ್ಕೆಯೂ ಲಭ್ಯವಿದೆ. ನೀವು, 3 ರಿಂದ 6 ತಿಂಗಳ ಸುಲಭ ಕಂತುಗಳಲ್ಲಿ ಈ ಫೋನನ್ನು ಖರೀದಿಸಬಹುದು. ಇದರೊಂದಿಗೆ 10,450 ರೂ.ಗಳ ವರೆಗೆ ಎಕ್ಸ್‌ಚೇಂಜ್‌ ಆಫರ್‌ ಲಭ್ಯವಿದೆ. ಈ ಮೊಬೈಲ್‌ ಕೋಬಾಲ್ಟ್ ಬ್ಲೂ, ಆಲಿವ್ ಗ್ರೀನ್, ಅರ್ಬನ್ ಗ್ರೇ ಮತ್ತು ವಿವಾ ಮೆಜೆಂಟಾ ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ.

ಮೊಟೊ G85 5G ಖರೀದಿ ಎಲ್ಲಿ?

ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ ಮೂಲಕ ಮೊಟೊ G85 5G ಅನ್ನು ಖರೀದಿಸಬಹುದು. ಇದರೊಂದಿಗೆ, ಮೇಲೆ ತಿಳಿಸಿರುವ ಎಲ್ಲಾ ಆಫರ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ನೀವು, ಕಂಪನಿಯ ವೆಬ್‌ಸೈಟ್ ಮತ್ತು ಇತರ ಚಿಲ್ಲರೆ ಮಳಿಗೆಗಳಲ್ಲಿ ಸಹ ಈ ಫೋನ್ ಕೊಳ್ಳಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್‌ಗಳನ್ನು ಪಡೆಯಿರಿ.

ಮೊಟೊ G85 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಮೊಟೊ G85 5G ಮೊಬೈಲ್ 6.67 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಪೋಲ್ಡ್ 3D ಕರ್ವ್ ಡಿಸ್ಪ್ಲೇಯನ್ನು ಹೊಂದಿದೆ. ಇದು 2400 x 1080 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ, 1600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ. ಡಿಸ್ಲ್ಪೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಮೊಟೊ G85 5G ಅನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6s ಜೆನ್ 3 ಆಕ್ಟಾ-ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಇದನ್ನು 6 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಇದು Adreno 619 GPU, 12GB RAM ಮತ್ತು 256GB UFS 2.2 ಸ್ಟೋರೇಜ್‌ನೊಂದಿಗೆ ಬರುತ್ತದೆ. ನೀವು RAM ಅನ್ನು 24GB ವರೆಗೆ ವಿಸ್ತರಿಸಬಹುದು.

ಕ್ಯಾಮೆರಾ ಸೆಟಪ್

ಮೊಟೊ G85 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ Sony Lytia 600 ಪ್ರಾಥಮಿಕ ಕ್ಯಾಮೆರಾ ಹೊಂದಿದೆ. 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಕ್ಯಾಮೆರಾ ಜೊತೆಗೆ ಸಿಂಗಲ್ ಎಲ್‌ಇಡಿ ಫ್ಲ್ಯಾಷ್ ಕೂಡ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಬ್ಯಾಕಪ್

ಕಂಪನಿಯು ಮೊಟೊ G85 5G ಅನ್ನು 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದೆ. ಈ ಬ್ಯಾಟರಿಯನ್ನು ಸ್ಪೀಡ್‌ ಆಗಿ ಚಾರ್ಜ್ ಮಾಡಲು, 33W ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ.

ಇತರೆ ವೈಶಿಷ್ಟ್ಯಗಳು

ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಓಎಸ್‌, ಡ್ಯುಯಲ್ ಸಿಮ್ 5G, 4G, ಬ್ಲೂಟೂತ್ 5.1, 5GHZ ವೈ ಫೈ ಸೇರಿದಂತೆ 13 5G ಬ್ಯಾಂಡ್‌ಗಳನ್ನು ಹೊಂದಿದೆ. ಭದ್ರತೆಗಾಗಿ, ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಒಳಗೊಂಡಿದೆ.

Best Mobiles in India

English summary
Moto G85 5G Available With huge discount on flipkart: know offers, price, specs and more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+