9,000 ಉಳಿತಾಯ! 32MP ಸೆಲ್ಫಿ ಕ್ಯಾಮೆರಾ.. 512GB ಸ್ಟೋರೇಜ್.. 30% ಡಿಸ್ಕೌಂಟ್; ಯಾವ ಫೋನ್?
ಮೊಬೈಲ್ ಪ್ರಿಯರ ನೆಚ್ಚಿನ ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಒಂದಿಲ್ಲೊಂದು ಆಫರ್‌ಗಳನ್ನು ನೀಡುತ್ತಲೇ ಇರುತ್ತದೆ. ಈ ಮೂಲಕ ತನ್ನ ಗ್ರಾಹಕರನ್ನು ಸೆಳೆಯುತ್ತದೆ. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ ಮೊಟೊರೊಲಾ ಎಡ್ಜ್ 50 ನಿಯೋ (Motorola Edge 50 Neo) ಫೋನ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ. ನೀವು, ಬರೋಬ್ಬರಿ 9,000 ರೂ. ಉಳಿತಾಯ ಮಾಡಬಹುದು. ಜೊತೆಗೆ ಬ್ಯಾಂಕ್ ಆಫರ್ ಮತ್ತು ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಮೊಟೊರೊಲಾ ಎಡ್ಜ್ 50 ನಿಯೋ ಮೊಬೈಲ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಇದು ನಾಲ್ಕು ಬಣ್ಣಗಳಲ್ಲಿ ಬರುತ್ತದೆ. ನೀವು ನಾಟಿಕಲ್ ಬ್ಲೂ, ಲ್ಯಾಟೆ, ಗ್ರಿಸೈಲ್ ಮತ್ತು ಪೊಯಿನ್ಸಿಯಾನಾ ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನ್ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಹಾಗೆಯೇ, 6.4 ಇಂಚಿನ ಡಿಸ್ಪ್ಲೇ, 512GB ಸ್ಟೋರೇಜ್ ಮತ್ತು 4310mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮೊಟೊರೊಲಾ ಎಡ್ಜ್ 50 ನಿಯೋ ಬೆಲೆ ಮತ್ತು ಆಫರ್‌ಗಳು
ಮೊಟೊರೊಲಾ ಎಡ್ಜ್ 50 ನಿಯೋ ಫೋನಿನ ಖರೀದಿ ಮೇಲೆ 3,000 ರೂ. ಫ್ಲಾಟ್ ಡಿಸ್ಕೌಂಟ್ ಮತ್ತು 1,000 ರೂ. ಬ್ಯಾಂಕ್ ಆಫರ್ ನೀಡಲಾಗುತ್ತಿದೆ. 4,000 ರೂ.ಗಳ ರಿಯಾಯಿತಿಯೊಂದಿಗೆ ಕೇವಲ 19,999 ರೂ.ಗೆ ಈ ಮೊಬೈಲ್ ಲಭ್ಯವಿದೆ. ಇದನ್ನು 23,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ, ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಸಿಗುತ್ತದೆ. ಜೊತೆಗೆ 13,900 ರೂ. ವರೆಗೆ ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಬಹುದು.
ಮೊಟೊರೊಲಾ ಎಡ್ಜ್ 50 ನಿಯೋ ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ಮೊಟೊರೊಲಾ ಎಡ್ಜ್ 50 ನಿಯೋ ಮೊಬೈಲ್ 6.4 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು 2670 x 1220 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ ಪೋಲೆಡ್ ಡಿಸ್ಪ್ಲೇ ಆಗಿದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 3000 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಬೆಂಬಲ ಹೊಂದಿದೆ. ಇದು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ.
ಪವರ್ ಫುಲ್ ಪ್ರೊಸೆಸರ್
ಮೊಟೊರೊಲಾ ಎಡ್ಜ್ 50 ನಿಯೋ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಆಧಾರಿತ ಹೆಲ್ಲೋ ಯುಐ ಓಎಸ್ ಜೊತೆಗೆ ಕೆಲಸ ನಿರ್ವಹಿಸುತ್ತದೆ. ಇದು 12GB RAM ಮತ್ತು 512GB ಸ್ಟೋರೇಜ್ ಆಯ್ಕೆ ಹೊಂದಿದೆ.
32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ
ಮೊಟೊರೊಲಾ ಎಡ್ಜ್ 50 ನಿಯೋ ಸ್ಮಾರ್ಟ್‌ಫೋನ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಹಾಗೆಯೇ, 13 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 10 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಅದ್ಭುತ ಬ್ಯಾಟರಿ ಬ್ಯಾಕಪ್
ಮೊಟೊರೊಲಾ ಎಡ್ಜ್ 50 ನಿಯೋ ಮೊಬೈಲ್ 4310mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 68W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಮೊಟೊರೊಲಾ ಎಡ್ಜ್ 50 ನಿಯೋ ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಪಡೆದಿದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ, ಡಾಲ್ಬಿ ಅಟ್ಮಾಸ್ ಮತ್ತು ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಎನ್‌ಎಫ್‌ಸಿ, ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








