4000 ಕುಸಿತ! 50MP ಸೆಲ್ಫಿ ಕ್ಯಾಮೆರಾ.. 125W ಚಾರ್ಜಿಂಗ್.. ಕಡಿಮೆ ಬೆಲೆಗೆ Motorola 5G ಫೋನ್ ಸೇಲ್
ಮೊಟೊರೊಲಾ ಕಂಪನಿಯ ಮೊಬೈಲ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಸ್ಮಾರ್ಟ್‌ಫೋನ್ ಪ್ರಿಯರು ಸಹ ಈ ಫೋನ್‌ಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ. ಅದರಂತೆ, ಕಂಪನಿಯು ಆಗಾಗ್ಗೆ ತನ್ನ ಅಭಿಮಾನಿಗಳಿಗೆ ಬೊಂಬಾಟ್ ಆಫರ್‌ಗಳನ್ನು ನೀಡುತ್ತದೆ. ಇದೀಗ, ಮೊಟೊರೊಲಾ ಎಡ್ಜ್ 50 ಪ್ರೊ 5G (Motorola Edge 50 Pro 5G) ಫೋನಿನ ಬೆಲೆ ಇಳಿಕೆ ಮಾಡಿದೆ. ನೀವು, 4 ಸಾವಿರ ರೂ. ರಿಯಾಯಿತಿಯೊಂದಿಗೆ ಕಡಿಮೆ ಬೆಲೆಯಲ್ಲಿ ಈ ಫೋನ್ ಖರೀದಿಸಬಹುದು. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.
ಕಂಪನಿಯು ಮೊಟೊರೊಲಾ ಎಡ್ಜ್ 50 ಪ್ರೊ 5G ಫೋನನ್ನು ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಿತ್ತು. ಇದು 'ಎಡ್ಜ್' ಸರಣಿಯ ಪ್ರಮುಖ ಸ್ಮಾರ್ಟ್‌ಫೋನ್ ಆಗಿದೆ. ಈ ಮೊಬೈಲ್‌ನಲ್ಲಿ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಇದರೊಂದಿಗೆ 6.7 ಇಂಚಿನ ಡಿಸ್ಪ್ಲೇ, 5500mAh ಬ್ಯಾಟರಿ ಮತ್ತು 125W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮೊಟೊರೊಲಾ ಎಡ್ಜ್ 50 ಪ್ರೊ 5G ಬೆಲೆ
8GB RAM + 256GB ಸ್ಟೋರೇಜ್ ಬೆಲೆ = 31,999 ರೂ.
ಡಿಸ್ಕೌಂಟ್ ಬೆಲೆ = 27,999 ರೂ.
12GB RAM + 256GB ಸ್ಟೋರೇಜ್ ಬೆಲೆ = 35,999 ರೂ.
ಡಿಸ್ಕೌಂಟ್ ಬೆಲೆ = 31,999 ರೂ.
ಕಂಪನಿಯು ಫೋನಿನ ಎರಡು ಸ್ಟೋರೇಜ್ ರೂಪಾಂತರಗಳ ಬೆಲೆಯನ್ನು 4,000 ರೂ. ಕಡಿಮೆ ಮಾಡಿದೆ. ಈ ಬೆಲೆ ಇಳಿಕೆ ನಂತರ, ಫೋನನ್ನು ಕ್ರಮವಾಗಿ 27,999 ರೂ. ಮತ್ತು 31,999 ರೂ.ಗೆ ಕೊಳ್ಳಬಹುದು. ಈ ಮೊಟೊರೊಲಾ 5G ಫೋನ್ ಕಂಪನಿಯ ವೆಬ್‌ಸೈಟ್‌ನಲ್ಲಿನ ಆಫ್‌ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಿದೆ. ನೀವು, ಬ್ಲ್ಯಾಕ್ ಬ್ಯೂಟಿ, ಲಕ್ಸ್ ಲ್ಯಾವೆಂಡರ್ ಮತ್ತು ಮೂನ್‌ಲೈಟ್ ಪರ್ಲ್ ಬಣ್ಣಗಳ ಆಯ್ಕೆಯಲ್ಲಿ ಕೊಳ್ಳಬಹುದು.
ಮೊಟೊರೊಲಾ ಎಡ್ಜ್ 50 ಪ್ರೊ 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಮೊಟೊರೊಲಾ ಎಡ್ಜ್ 50 ಪ್ರೊ 5G ಮೊಬೈಲ್ 6.7 ಇಂಚಿನ 3D ಕರ್ವ್ ಪೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 2712 x 1220 ಪಿಕ್ಸೆಲ್‌ಗಳ ರೆಸಲ್ಯೂಶನ್, 144Hz ರಿಫ್ರೆಶ್ ದರ ಮತ್ತು 2000 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಡಿಸ್ಪ್ಲೇಯಲ್ಲಿ ಬ್ಲೂ ಲೈಟ್ ಎಮಿಷನ್ ಪ್ರೊಟೆಕ್ಷನ್ ತಂತ್ರಜ್ಞಾನ ಮತ್ತು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಲಭ್ಯವಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಮೊಟೊರೊಲಾ ಎಡ್ಜ್ 50 ಪ್ರೊ 5G ಅನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7 ಜೆನ್ 3 ಆಕ್ಟಾಕೋರ್ ಪ್ರೊಸೆಸರ್‌ನಲ್ಲಿ ಬಿಡುಗಡೆ ಮಾಡಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಹಲೋ ಯುಐನಲ್ಲಿ ಕೆಲಸ ನಿರ್ವಹಿಸುತ್ತದೆ.
ಕ್ಯಾಮೆರಾ ಸೆಟಪ್
ಮೊಟೊರೊಲಾ ಎಡ್ಜ್ 50 ಪ್ರೊ 5G ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಜೊತೆಗೆ, 10 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 13 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಮೊಟೊರೊಲಾ ಎಡ್ಜ್ 50 ಪ್ರೊ 5G ಫೋನಿನಲ್ಲಿ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 125W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ, 50W ಟರ್ಬೊ ಪವರ್ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವೂ ಇದೆ


Click it and Unblock the Notifications








