Motorola: ಈ 5G ಫೋನ್ 6,000 ಅಗ್ಗ! 125W ಚಾರ್ಜರ್, 50MP ಕ್ಯಾಮೆರಾ; ಹೊಸ ಬೆಲೆ?
ನೀವು ಹೊಸ 5G ಫೋನ್ ಖರೀದಿ ಬಯಕೆ ಹೊಂದಿದ್ದೀರಾ? ಅದರಲ್ಲೂ ಮೊಟೊರೊಲಾ ಅಭಿಮಾನಿಗಳಿದ್ದರೆ ನಿಮಗೆ ಭರ್ಜರಿ ಸಿಹಿ ಸುದ್ದಿ ಇದೆ. ಹೌದು, ನೀವು ಮೊಟೊ ಕಂಪನಿಯ ಈ 5G ಮೊಬೈಲ್ ಅನ್ನು 6,000 ರೂ.ಗಳ ಭರ್ಜರಿ ರಿಯಾಯಿತಿ ಲಭ್ಯವಿದೆ. ಅದುವೇ, ಮೊಟೊರೊಲಾ ಎಡ್ಜ್ 50 ಪ್ರೊ 5G (Motorola Edge 50 Pro 5G) ಸ್ಮಾರ್ಟ್‌ಫೋನ್. ಇದರೊಂದಿಗೆ, ಡಿಸ್ಕೌಂಟ್ ಜೊತೆಗೆ ಬ್ಯಾಂಕ್ ಆಫರ್‌ಗಳು ಮತ್ತು ಎಕ್ಸ್‌ಚೇಂಜ್ ಆಫರ್ ಸಹ ನಿಮ್ಮದಾಗಿಸಿಕೊಳ್ಳಬಹುದು.
ಹೌದು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿರುವ ಬಿಗ್ ಬಿಲಿಯನ್ ಡೇಸ್ ಸೇಲ್-2024 (Flipkart Big Billion Days Sale-2024) ಈ ಆಫರ್ ಲಭ್ಯವಿದೆ. ಈ ಫೋನಿಗೆ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್‌ನಲ್ಲಿ 4.3 ರೇಟಿಂಗ್ ನೀಡಲಾಗಿದೆ. ಈ ಫೋನನ್ನು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲಾಯಿತು. ಇದು 6.7 ಇಂಚಿನ ಡಿಸ್ಪ್ಲೇ, 125W ಫಾಸ್ಟ್ ಚಾರ್ಜಿಂಗ್, 4500mAh ಬ್ಯಾಟರಿ, ಸ್ನಾಪ್‌ಡ್ರಾಗನ್ 7 ಮತ್ತು 3 ಚಿಪ್‌ಸೆಟ್, 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಮೊಟೊರೊಲಾ ಎಡ್ಜ್ 50 ಪ್ರೊ 5G ಬೆಲೆ ಮತ್ತು ಆಫರ್‌ಗಳು
ಮೊಟೊರೊಲಾ ಎಡ್ಜ್ 50 ಪ್ರೊ 5G ಫೋನನ್ನು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ. 12GB RAM + 256GB ಸ್ಟೋರೇಜ್ ವೇರಿಯಂಟ್ ಶೇ.28 ರಷ್ಟು ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ಅಂದರೆ 6,000 ರೂ.ಗಳ ಡಿಸ್ಕೌಂಟ್‌ನೊಂದಿಗೆ ಈ ಮೊಬೈಲ್ ಅನ್ನು ಕೇವಲ 29,999 ರೂ.ಗಳಲ್ಲಿ ಖರೀದಿಸಬಹುದು. ನೀವು, ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಇಎಂಐ ವಹಿವಾಟುಗಳಲ್ಲಿ ಶೇ.10 ರಷ್ಟು ಬ್ಯಾಂಕ್ ರಿಯಾಯಿತಿಯನ್ನು ಸಹ ಪಡೆಯಬಹುದು. ಇದರಿಂದಾಗಿ ಫೋನಿನ ಬೆಲೆ ಇನ್ನೂ ಕಡಿಮೆಯಾಗಲಿದೆ.
ನೀವು, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಸಿಗುತ್ತದೆ. ಜೊತೆಗೆ, ನೋ ಕಾಸ್ಟ್ ಇಎಂಐ ಆಯ್ಕೆಯು ಸಿಗುತ್ತದೆ. 3 ರಿಂದ 6 ತಿಂಗಳ ಸುಲಭ ಕಂತುಗಳಲ್ಲಿ ಈ ಫೋನ್ ಖರೀದಿಸಬಹುದು. ನಿಮ್ಮ ಹಳೆಯ ಮೊಬೈಲ್ ಎಕ್ಸ್‌ಚೇಂಚ್ ಮಾಡಿದರೆ, 16,500 ರೂ.ಗಳ ವರೆಗೆ ರಿಯಾಯಿತಿ ಲಭ್ಯವಿದೆ. ಫೋನಿನ 12GB RAM + 256GB ಸ್ಟೋರೇಜ್ ಬೆಲೆ ಬಿಡುಗಡೆಯ ಸಮಯದಲ್ಲಿ 35,999 ರೂ. ಇತ್ತು. ಈ ಆಫರ್ ಫ್ಲಿಪ್‌ಕಾರ್ಟ್‌ನಲ್ಲಿ ಸೀಮಿತ ಅವಧಿಗೆ ಲಭ್ಯವಿದೆ.
ಮೊಟೊರೊಲಾ ಎಡ್ಜ್ 50 ಪ್ರೊ 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಮೊಟೊರೊಲಾ ಎಡ್ಜ್ 50 ಪ್ರೊ 5G ಫೋನ್ 6.7 ಇಂಚಿನ 1.5k 3D ಕರ್ವ್ಡ್ ಪೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 144Hz ರಿಫ್ರೆಶ್ ದರ, 2000 ನಿಟ್ಸ್ ವರೆಗಿನ ಗರಿಷ್ಠ ಬ್ರೈಟ್‌ನೆಸ್, ರಕ್ಷಣೆಗಾಗಿ ಎಸ್‌ಜಿಎಸ್ (SGS) ತಂತ್ರಜ್ಞಾನವನ್ನು ಹೊಂದಿದೆ.
ಪ್ರೊಸೆಸರ್: ಕಂಪನಿಯು ಈ ಫೋನನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಈ ಚಿಪ್‌ಸೆಟ್ 2.63GHz ವರೆಗೆ ಹೆಚ್ಚಿನ ಗಡಿಯಾರದ ವೇಗವನ್ನು ನೀಡುತ್ತದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ ಹಲೋ ಯುಐ (Hello UI) ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 3 ವರ್ಷಗಳ ಓಎಸ್ ನವೀಕರಣಗಳನ್ನು ಪಡೆಯುತ್ತದೆ.
ಕ್ಯಾಮೆರಾ: ಮೊಟೊರೊಲಾ ಎಡ್ಜ್ 50 ಪ್ರೊ 5G ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು OIS ತಂತ್ರಜ್ಞಾನದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ + ಮ್ಯಾಕ್ರೋ ಲೆನ್ಸ್ ಮತ್ತು 10 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಹೊಂದಿದೆ. ಸೆಲ್ಫಿ ಪ್ರಿಯರಿಗಾಗಿ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ: ಈ ಫೋನ್ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 125W ವೇಗದ ಚಾರ್ಜಿಂಗ್ ತಂತ್ರಜ್ಞಾನ ಒದಗಿಸಲಾಗಿದೆ. ಇದು 50W ಟರ್ಬೊ ಪವರ್ ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಬೇರೆ ಫೋನನ್ನು ಚಾರ್ಜ್ ಮಾಡಲು 10W ವೈರ್‌ಲೆಸ್ ಪವರ್ ಶೇರಿಂಗ್ ಕೂಡ ಇದೆ.


Click it and Unblock the Notifications








