Home
Deal of the day

125W ಚಾರ್ಜಿಂಗ್ ಸಾಮರ್ಥ್ಯದ ಈ Moto ಫೋನ್ ಬೆಲೆ ಈಗ 20 ಸಾವಿರ!

ಮೋಟೋರೋಲಾ ಅಭಿಮಾನಿಗಳಿಗೆ ದೊಡ್ಡ ಖುಷಿಯ ಸುದ್ದಿ.! ಜನಪ್ರಿಯ ಇ-ಕಾಮರ್ಸ್ ತಾಣ ಅಮೆಜಾನ್ ಇದೀಗ Motorola Edge 50 Pro ಸ್ಮಾರ್ಟ್‌ಫೋನ್ ಮೇಲೆ ಮತ್ತೊಮ್ಮೆ ಭಾರೀ ರಿಯಾಯಿತಿಯನ್ನು ಘೋಷಿಸಿದೆ. ಅತ್ಯುತ್ತಮ 1.5K pOLED ಕರ್ವ್ಡ್ ಡಿಸ್‌ಪ್ಲೇ, ಶಕ್ತಿಶಾಲಿ Qualcomm ಪ್ರೊಸೆಸರ್ ಮತ್ತು 125W ವೇಗದ ಚಾರ್ಜಿಂಗ್ ವೈಶಿಷ್ಟ್ಯಗನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಈಗ ಹೆಚ್ಚು ಕೈಗೆಟುಕುವ ದರದಲ್ಲಿ ಲಭ್ಯವಾಗಿದೆ. ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿರುವವರಿಗೆ ಇದು ತಪ್ಪಿಸಿಕೊಳ್ಳದಂತಹ ಅವಕಾಶವಾಗಿದೆ. ಹಾಗಾದರೆ, ಏನಿದು ಡೀಲ್ ಎಂಬುದನ್ನು ನೋಡೋಣ ಬನ್ನಿ.

Motorola Edge 50 Pro: ಕೊಡುಗೆಯ ವಿವರಗಳು
Motorola Edge 50 Pro ಸ್ಮಾರ್ಟ್‌ಫೋನಿನ 12GB + 256GB ಮಾದರಿಯು ಬಿಡುಗಡೆಯಾಗುವಾಗ ₹35,999 ಬೆಲೆ ಹೊಂದಿತ್ತು. ಆದರೆ ಈಗ Amazon India ತಾಣದಲ್ಲಿ ಇದು ಕೇವಲ ₹22,999 ಕ್ಕೆ ಲಭ್ಯವಿದೆ. ಅಂದರೆ ನೇರವಾಗಿ ₹13,000 ರಷ್ಟು ಬೆಲೆ ಇಳಿಕೆಯಾಗಿದೆ. ಇದರ ಜೊತೆಗೆ IDFC ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ EMI ವಹಿವಾಟು ಮಾಡಿದರೆ ಹೆಚ್ಚುವರಿ ₹1,724 ರಷ್ಟು ರಿಯಾಯಿತಿಯೂ ದೊರೆಯುತ್ತದೆ. ಇದರಿಂದ Motorola Edge 50 Pro ಫೋನ್ ಸುಮಾರು 20 ಸಾವಿರಕ್ಕೆ ದೊರೆಯುತ್ತಿದೆ. ಇದಲ್ಲದೆ, ನಿಮ್ಮ ಹಳೆಯ ಫೋನ್ ವಿನಿಮಯ ಮಾಡಿದರೆ ಇನ್ನಷ್ಟು ಉಳಿತಾಯ ಸಾಧ್ಯ.

Motorola Edge 50 Pro: ಪ್ರಮುಖ ವೈಶಿಷ್ಟ್ಯಗಳು
Motorola Edge 50 Pro ಫೋನ್ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದ್ದು, ಪ್ರಸ್ತುತ ಇದು ತನ್ನ ಬೆಲೆಗೆ ಮೀರಿದಂತಹ ಕಾರ್ಯಕ್ಷಮತೆ ಹೊಂದಿದೆ ಎನ್ನಬಹುದು. ಈ ಫೋನ್ 6.7-ಇಂಚಿನ 1.5K pOLED ಕರ್ವ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 144Hz ರಿಫ್ರೆಶ್ ರೇಟ್, HDR10+ ಬೆಂಬಲ ಮತ್ತು 2,000 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇದರಿಂದ ಡಿಸ್‌ಪ್ಲೇಯಲ್ಲಿ ಉತ್ತಮ ಬಣ್ಣಗಳು ಮತ್ತು ಸ್ಪಷ್ಟತೆ ಕಾಣಸಿಗುತ್ತದೆ ಹಾಗೂ ಗೇಮಿಂಗ್ ಅನುಭವ ಹೆಚ್ಚು ಜೀವಂತವಾಗಿರುವಂತಿದೆ.

ಈ ಫೋನ್ ಕಾರ್ಯಕ್ಷಮತೆಗಾಗಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 3 (Qualcomm Snapdragon 7 Gen 3) ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ದೊರೆಯುತ್ತದೆ. ಇದು ಮಲ್ಟಿಟಾಸ್ಕಿಂಗ್ ಮತ್ತು ಹೈ-ಎಂಡ್ ಗೇಮಿಂಗ್ ಸ್ಮೂತ್ ಆಗಿ ನಡೆಯುವಂತೆ ನೋಡಿಕೊಳ್ಳುತ್ತದೆ.

125W ಚಾರ್ಜಿಂಗ್ ಸಾಮರ್ಥ್ಯದ ಈ Moto ಫೋನ್ ಬೆಲೆ ಈಗ 20 ಸಾವಿರ!

ಫೋಟೋಗ್ರಫಿ ಇಷ್ಟಪಡುವವರಿಗೆ Motorola Edge 50 Pro ಉತ್ತಮ ಕ್ಯಾಮೆರಾ ಸೆಟಪ್ ಹೊಂದಿದೆ. ಇದರ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದ್ದು, ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಇರುವ 50MP ಮುಖ್ಯ ಕ್ಯಾಮೆರಾ, 13MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 3x ಆಪ್ಟಿಕಲ್ ಜೂಮ್ ಹೊಂದಿರುವ 10MP ಟೆಲಿಫೋಟೋ ಕ್ಯಾಮೆರಾ ಇದೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಇದು ಮುಂಭಾಗದಲ್ಲಿ 50MP ಕ್ಯಾಮೆರಾವನ್ನು ಒಳಗೊಂಡಿದೆ.

ಬ್ಯಾಟರಿ ವಿಷಯಕ್ಕೆ ಬಂದರೆ, ಈ ಫೋನ್ 4,500mAh ಬ್ಯಾಟರಿಯನ್ನು ಹೊಂದಿದ್ದು, 125W ವೇಗದ ವೈರ್ಡ್ ಚಾರ್ಜಿಂಗ್ ಬೆಂಬಲಿಸುತ್ತದೆ. ಇದು ಫೋನ್ ಅನ್ನು ಕೆಲವೇ ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಮಾಡಲು ಸಹಾಯ ಮಾಡಲಿದ್ದು, ದಿನಪೂರ್ತಿ ಬ್ಯಾಟರಿ ಬ್ಯಾಕಪ್ ಬಯಸುವವರಿಗೆ ಇದು ಪರಿಪೂರ್ಣ ಆಯ್ಕೆ. ಈ ವೈಶಿಷ್ಟ್ಯಗಳಿಂದ ಮೋಟೋರೋಲಾ ಎಡ್ಜ್ 50 ಪ್ರೊ ಹೆಚ್ಚು ಜನಪ್ರಿಯವಾಗಿದೆ.

ನೇರವಾಗಿ ₹22,999 ದರದಲ್ಲಿ ಮತ್ತು ಬ್ಯಾಂಕ್ ಕೊಡುಗೆಯಿಂದ 20 ಸಾವಿರ ಬೆಲೆ ವಿಭಾಗದಲ್ಲಿ ಲಭ್ಯವಿರುವ Motorola Edge 50 Pro ಫೋನ್ ತನ್ನ ವಿಭಾಗದಲ್ಲಿ ಅತ್ಯುತ್ತಮ ಪರ್ಫಾರ್ಮೆನ್ಸ್, ಉತ್ತಮ ಕ್ಯಾಮೆರಾ ಮತ್ತು ವೇಗದ ಚಾರ್ಜಿಂಗ್ ನೀಡುವ ಸ್ಮಾರ್ಟ್‌ಫೋನ್‌ಗಳ ಪೈಕಿ ಒಂದು. ಹೊಸ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಈ ಅಮೆಜಾನ್ ಡೀಲ್ ನಿಜಕ್ಕೂ ತಪ್ಪಿಸಿಕೊಳ್ಳಬದಾರದು. ಇಂತಹ ಡೀಲ್‌ಗಳು ಹೆಚ್ಚು ಕಾಲ ಇರುವುದಿಲ್ಲ, ಆದ್ದರಿಂದ ಈ ಆಫರ್ ಲೈವ್ ಇರುವ ಸಮಯದಲ್ಲೇ ಖರೀದಿಸುವುದು ಉತ್ತಮ.

ಗಮನಿಸಿ: ಮೇಲೆ ತಿಳಿಸಿದ ಕೊಡುಗೆಯ ಬೆಲೆಗಳು ಈ ಲೇಖನವನ್ನು ಬರೆಯುವ ವೇಳೆಗೆ ನಿಖರವಾಗಿದೆ. ಆದರೆ, ಆಫ್‌ರ್ಗಳು ಸಮಯ ಆಧಾರಿತವಾಗಿರುವುದರಿಂದ ಖರೀದಿಸುವ ಮೊದಲು ಅಮೆಜಾನ್‌ನಲ್ಲಿ ಇತ್ತೀಚಿನ ಬೆಲೆ ಮತ್ತು ಷರತ್ತುಗಳನ್ನು ಪರಿಶೀಲಿಸಿ. ಮತ್ತು ಈ ಆಫರ್ ಕುರಿತು ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
The Motorola Edge 50 Pro (12GB + 256GB) variant, which was originally launched at ₹35,999, is now available on Amazon India for just ₹22,999 . a massive price drop of ₹13,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+