Home
Deal of the day

ನೋಡಿ ಫ್ರೆಂಡ್ಸ್..! 50MP + 50MP + 64MP + 50MP ಕ್ಯಾಮೆರಾಗಳು.. 3000 ರಿಯಾಯಿತಿ ಘೋಷಣೆ.. ಯಾವ ಫೋನ್? ಬೆಲೆ ಎಷ್ಟು?

ಈ ಸುದ್ದಿ ಪ್ರೀಮಿಯಂ ಸ್ಮಾರ್ಟ್‌ಫೋನ್ ಪ್ರಿಯರಿಗೆ ಮಾತ್ರ! 50MP ಸೆಲ್ಫಿ ಕ್ಯಾಮೆರಾ ಹೊಂದಿರುವ ಈ 5G ಫೋನಿನ ಬೆಲೆ ಭಾರೀ ಇಳಿಕೆಯಾಗಿದೆ. ಹೌದು, ಮೊಟೊರೊಲಾ ತನ್ನ ಮೊಟೊರೊಲಾ ಎಡ್ಜ್ 50 ಅಲ್ಟ್ರಾ (Motorola Edge 50 Ultra 5G) ಬೆಲೆಯಲ್ಲಿ ದೊಡ್ಡ ಕಡಿತ ಮಾಡಿದೆ. ಈ ಹೊಸ ಬೆಲೆ ಇಂದಿನಿಂದ (ಏಪ್ರಿಲ್ 29) ಭಾರತದಾದ್ಯಂತ ಜಾರಿಗೆ ಬಂದಿದೆ. ವಿಶೇಷವೆಂದರೆ, ನಾಳೆ ಮೊಟೊರೊಲಾ ಎಡ್ಜ್ 60 ಪ್ರೊ (Motorola Edge 60 Pro) ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ. ಇದಕ್ಕೂ ಮೊದಲೇ ಹಳೆಯ ಫೋನಿನ ಬೆಲೆ ಇಳಿಕೆಯಾಗಿದೆ. ಈ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಕಂಪನಿಯು ಕಳೆದ ವರ್ಷ ಜೂನ್‌ನಲ್ಲಿ ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ 5G ಫೋನನ್ನು ಬಿಡುಗಡೆ ಮಾಡಿತ್ತು. ಇದು ಕೇವಲ ಒಂದು ರೂಪಾಂತರದಲ್ಲಿ ಬರುತ್ತದೆ. ಈ ಫೋನಿನ ದೊಡ್ಡ ವಿಶೇಷತೆ, ಇದರ ಕ್ಯಾಮೆರಾ ಸೆಟಪ್. ಈ ಫೋನಿನಲ್ಲಿ 50MP + 50MP + 64MP + 50MP ಕ್ಯಾಮೆರಾಗಳಿವೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ 6.7 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರೊಂದಿಗೆ 512GB ಸ್ಟೋರೇಜ್‌, 4500mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳಿವೆ. ಈ ಫೋನನ್ನು ಕಡಿಮೆ ದರದಲ್ಲಿ ಹೇಗೆ ಮತ್ತು ಎಲ್ಲಿ ಖರೀದಿಸಬಹುದು ಎನ್ನುವುದನ್ನು ತಿಳಿಯಲು ಮುಂದೆ ಓದಿ.

Motorola: 50MP + 50MP + 50MP ಕ್ಯಾಮೆರಾ.. 3000 ರಿಯಾಯಿತಿ.. ಬೆಲೆ ಎಷ್ಟು?

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ ಸ್ಮಾರ್ಟ್‌ಫೋನ್ 6.7 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 2712 x 1220 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಹಾಗೆಯೇ 144Hz ರಿಫ್ರೆಶ್ ದರ, 360Hz ಟಚ್ ಸ್ಯಾಂಪ್ಲಿಂಗ್ ದರ, 2800 ನಿಟ್ಸ್ ಬ್ರೈಟ್‌ನೆಸ್‌ ಬೆಂಬಲ ಹೊಂದಿದೆ.

ಪ್ರೊಸೆಸರ್ ಮತ್ತು ಕಾರ್ಯಕ್ಷಮತೆ

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ ಮೊಬೈಲ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್ ಹೊಂದಿದೆ. ಇದು ಕಾರ್ಯಕ್ಷಮತೆ ಮತ್ತು ದಕ್ಷತೆ ಎರಡರಲ್ಲೂ ಅತ್ಯುತ್ತಮವಾಗಿದೆ. ಗೇಮಿಂಗ್, ಬಹುಕಾರ್ಯಕ ಮತ್ತು ವೃತ್ತಿಪರ ಬಳಕೆಗೆ ಸಮರ್ಥವಾಗಿದೆ. ಈ ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಜೊತೆಗೆ ಕೆಲಸ ಮಾಡುತ್ತದೆ.

Motorola: 50MP + 50MP + 50MP ಕ್ಯಾಮೆರಾ.. 3000 ರಿಯಾಯಿತಿ.. ಬೆಲೆ ಎಷ್ಟು?

ಟ್ರಿಪಲ್ ಕ್ಯಾಮೆರಾ ಸೆಟಪ್

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್ಇಡಿ ಫ್ಲ್ಯಾಷ್‌ ಮತ್ತು OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ ದ್ವಿತೀಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಲೆನ್ಸ್ ಮತ್ತು ತೃತೀಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಶೂಟರ್ ಅಳವಡಿಸಲಾಗಿದೆ.

ಸೂಪರ್ ಡೂಪರ್ ಬ್ಯಾಟರಿ

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ 5G ಸ್ಮಾರ್ಟ್‌ಫೋನ್ 4500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 125W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ 50W ವೈರ್‌ಲೆಸ್ ಚಾರ್ಜಿಂಗ್ ಮತ್ತು 10W ವೈರ್‌ಲೆಸ್ ಪವರ್ ಶೇರಿಂಗ್ ವೈಶಿಷ್ಟ್ಯ ಹೊಂದಿದೆ.

ಇತರೆ ವೈಶಿಷ್ಟ್ಯಗಳು

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ 5G ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಪಡೆದಿದೆ. ಹಾಗೆಯೇ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಡ್ಯುಯಲ್ ಸಿಮ್ 5G, ವೈ-ಫೈ, ಬ್ಲೂಟೂತ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Motorola: 50MP + 50MP + 50MP ಕ್ಯಾಮೆರಾ.. 3000 ರಿಯಾಯಿತಿ.. ಬೆಲೆ ಎಷ್ಟು?

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ ಹೊಸ ಬೆಲೆ ಮತ್ತು ಆಫರ್

ಬಿಡುಗಡೆ ಬೆಲೆ = 52,999 ರೂ.
ರಿಯಾಯಿತಿ ಬೆಲೆ = 49,999 ರೂ.

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ 5G ಫೋನ್ ಕೇವಲ ಒಂದು ರೂಪಾಂತರದಲ್ಲಿ ಬರುತ್ತದೆ. ನೀವು 12GB RAM + 512GB ಸ್ಟೋರೇಜ್‌ ಆಯ್ಕೆಯಲ್ಲಿ ಖರೀದಿಸಬಹುದು. ಇದರ ಬಿಡುಗಡೆ ಬೆಲೆ 52,999 ರೂ. ಆಗಿದೆ. ಪ್ರಸ್ತುತ, ಇದು 49,999 ರೂ.ಗೆ ಮಾರಾಟವಾಗುತ್ತಿದೆ. ಅಂದರೆ, ಕಂಪನಿಯು 3,000 ರೂ. ರಿಯಾಯಿತಿ ಘೋಷಿಸಿದೆ. ಈ ಹೊಸ ಬೆಲೆ ಇಂದಿನಿಂದಲೇ (ಏಪ್ರಿಲ್ 29) ಜಾರಿಗೆ ಬಂದಿದೆ. ನೀವು ಆನ್‌ಲೈನ್ ಸೈಟ್‌ಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಈ ಫೋನ್ ಕೊಳ್ಳಬಹುದು. ಈ ಮೊಬೈಲ್ ಫಾರೆಸ್ಟ್ ಗ್ರೇ, ನಾರ್ಡಿಕ್ ವುಡ್ ಮತ್ತು ಪೀಚ್ ಫಡ್ಜ್‌ ಬಣ್ಣಗಳಲ್ಲಿ ಬರುತ್ತದೆ.

Best Mobiles in India

English summary
Motorola Edge 50 Ultra 5G Price Drop in India ahead of Motorola Edge 60 Pro launch: know new price, offers, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+