Home
Deal of the day

3000 ಡಿಸ್ಕೌಂಟ್! 50MP + 50MP + 64MP ಕ್ಯಾಮೆರಾ.. ಈ Motorola ಫೋನಿನ ಬೆಲೆ ಕುಸಿತ.. ಎಷ್ಟಾಗಿದೆ?

ಮೊಟೊರೊಲಾ ಮಿಡ್ ಬಜೆಟ್ ವಿಭಾಗದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರೀ ಸದ್ದು ಮಾಡುತ್ತಿದೆ. ಸದ್ಯ ತನ್ನ ಅಭಿಮಾನಿಗಳಿಗೆ ಬಂಪರ್ ಆಫರ್‌ಗಳನ್ನು ನೀಡುತ್ತಿದೆ. ಕಂಪನಿಯು ತನ್ನ 'Edge 50' ಸರಣಿಯ ಈ ಸೊಗಸಾದ ಫೋನನ್ನು ಆಕರ್ಷಕ ರಿಯಾಯಿತಿಯೊಂದಿಗೆ ಮಾರಾಟ ಮಾಡುತ್ತಿದೆ. ಹೌದು, ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ 5G (Motorola Edge 50 Ultra 5G) ಸ್ಮಾರ್ಟ್‌ಫೋನ್‌ ಖರೀದಿಸಿದರೆ, ನೀವು 3,000 ರೂ. ಉಳಿತಾಯ ಮಾಡಬಹುದು. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ 5G ಫೋನನ್ನು ಕಳೆದ ವರ್ಷ ಜೂನ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಫೋನ್ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 50MP + 50MP + 64MP ಕ್ಯಾಮೆರಾಗಳಿವೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 6.7 ಇಂಚಿನ ಡಿಸ್ಪ್ಲೇ ಇದೆ. ಜೊತೆಗೆ, 12GB RAM + 512GB ಸ್ಟೋರೇಜ್‌, 4500mAh ಬ್ಯಾಟರಿ ಮತ್ತು 125W ವೇಗದ ಚಾರ್ಜಿಂಗ್ ಒಳಗೊಂಡಿದೆ. ಈ ಫೋನಿನ ಆಫರ್‌ ತಿಳಿಯಲು ಮುಂದೆ ಓದಿ.

Motorola Edge 50 Ultra 5G ಬೆಲೆ ಇಳಿಕೆ; 3000 ಡಿಸ್ಕೌಂಟ್.. ಹೊಸ ಬೆಲೆ ಎಷ್ಟು?

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ 5G ಬೆಲೆ

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ 5G ಫೋನಿನ 12GB RAM + 512GB ಸ್ಟೋರೇಜ್‌ ರೂಪಾಂತರವನ್ನು 52,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, ಕಂಪನಿಯು 3,000 ರೂ. ರಿಯಾಯಿತಿ ಘೋಷಿಸಿದೆ. ನೀವು, ಡಿಸ್ಕೌಂಟ್‌ ಬಳಿಕ 49,999 ರೂ.ಗೆ ಈ ಫೋನ್ ಖರೀದಿಸಬಹುದು. ಈ ಫೋನ್ ಫಾರೆಸ್ಟ್ ಗ್ರೇ, ನಾರ್ಡಿಕ್ ವುಡ್ ಮತ್ತು ಪೀಚ್ ಫಡ್ಜ್‌ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಆಫರ್‌ನ ಲಾಭ ಪಡೆಯಬಹುದು.

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ 5G ಮೊಬೈಲ್ 6.7 ಇಂಚಿನ ಪೋಲೆಡ್ 3D ಕರ್ವ್ ಡಿಸ್ಪ್ಲೇ ಹೊಂದಿದೆ. ಇದು 2712 x 1220 ಪಿಕ್ಸೆಲ್ ರೆಸಲ್ಯೂಶನ್, 144Hz ರಿಫ್ರೆಶ್ ದರ, 360Hz ಟಚ್ ಸ್ಯಾಂಪ್ಲಿಂಗ್ ದರ, 2800 ನಿಟ್ಸ್ ಬ್ರೈಟ್‌ನೆಸ್‌ ಬೆಂಬಲವನ್ನು ಹೊಂದಿದೆ.

ಪ್ರೊಸೆಸರ್ ಯಾವುದು?

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ 5G ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂನೊಂದಿಗೆ ಕೆಲಸ ನಿರ್ವಹಿಸಲಿದೆ. ಇದು 12GB RAM ಮತ್ತು 512GB ಸ್ಟೋರೇಜ್‌ ಆಯ್ಕೆ ಒಳಗೊಂಡಿದೆ.

ಕ್ಯಾಮೆರಾ ಸೆಟಪ್

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ 5G ಸ್ಮಾರ್ಟ್‌ಫೋನ್ ಎಲ್ಇಡಿ ಫ್ಲ್ಯಾಷ್‌ನೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 64 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 50 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ 5G ಮೊಬೈಲ್ 4,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು, 125W ವೇಗದ ಚಾರ್ಜಿಂಗ್, 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಒದಗಿಸಲಾಗಿದೆ. ಜೊತೆಗೆ, 10W ವೈರ್‌ಲೆಸ್ ಪವರ್ ಶೇರಿಂಗ್ ತಂತ್ರಜ್ಞಾನ ಹೊಂದಿದೆ.

ಇತರೆ ವೈಶಿಷ್ಟ್ಯಗಳು

ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ 5G ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ. ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ 5G, ವೈ-ಫೈ, ಬ್ಲೂಟೂತ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Motorola Edge 50 Ultra 5G sale with Rs 3000 discount offer: know offers, specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+