ಭಾರೀ ಡೀಲ್! 50MP ಕ್ಯಾಮೆರಾ, 5000mAh ಬ್ಯಾಟರಿಯ Motorola ಫೋನ್.. ಸಿಕ್ಕಾಪಟ್ಟೆ ಕಡಿಮೆಗೆ ಸೇಲ್!
ಅಮೆಜಾನ್ ಸೇಲ್‌ನಲ್ಲಿ ಈ ಸೊಗಸಾದ ಮೊಟೊರೊಲಾ ಫೋನನ್ನು ವಿಶೇಷ ರಿಯಾಯಿತಿಯಲ್ಲಿ ಖರೀದಿಸುವ ಅವಕಾಶವಿದೆ. ಹೌದು, ಮೊಟೊರೊಲಾ ಕಂಪನಿಯು ವಿಭಿನ್ನ ಶ್ರೇಣಿಯ ಮೊಬೈಲ್‌ಗಳ ಮೂಲಕ ಸದ್ದು ಮಾಡುತ್ತಿದೆ. ಈ ಪೈಕಿ ಮೊಟೊರೊಲಾ G45 5G (Motorola G45 5G) ಸಹ ಒಂದಾಗಿದೆ. ಪ್ರಸ್ತುತ, ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ರಿಯಾಯಿತಿ ಲಭ್ಯವಿದೆ. ಅಮೆಜಾನ್‌ನಲ್ಲಿ ಪ್ರಾರಂಭವಾಗಿರುವ ಗ್ರೇಟ್ ಸಮ್ಮರ್ ಸೇಲ್ (Amazon Great Summer Sale 2025) ಈ ಫೋನನ್ನು ಅತೀ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವನ್ನು ಕಲ್ಪಿಸಿದೆ. ಇದಲ್ಲದೆ ಬ್ಯಾಂಕ್ ಡಿಸ್ಕೌಂಟ್ ಮತ್ತು ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ.
ಮೊಟೊರೊಲಾ G45 5G ಅನ್ನು ದೊಡ್ಡ ರಿಯಾಯಿತಿಯೊಂದಿಗೆ ಪಟ್ಟಿ ಮಾಡಲಾಗಿದ್ದು, ಇದರ ಬೆಲೆ 11,000 ರೂ.ಗೆ ಇಳಿಕೆಯಾಗಿದೆ. ವಿಶೇಷವೆಂದರೆ, ಕಳೆದ ವರ್ಷ ಆಗಸ್ಟ್‌ನಲ್ಲಿ ಈ ಫೋನನ್ನು ಬಿಡುಗಡೆ ಮಾಡಲಾಗಿತ್ತು. ನೀವು ಮೂರು ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು. ಇದು ವಿವಾ ಮೆಜೆಂಟಾ, ಬ್ರಿಲಿಯಂಟ್ ಬ್ಲೂ ಮತ್ತು ಬ್ರಿಲಿಯಂಟ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. ಇದು 4GB, 8GB RAM ಮತ್ತು 128GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ಇದಲ್ಲದೆ, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.

ಮೊಟೊರೊಲಾ G45 5G ವೈಶಿಷ್ಟ್ಯಗಳು
ಮೊಟೊರೊಲಾ G45 5G ಮೊಬೈಲ್ 6.5 ಇಂಚಿನ ಡಿಸ್ಲ್ಪೇ ಹೊಂದಿದೆ. ಇದು 1600 x 720 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ, 500 ನಿಟ್ಸ್ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಹೊಂದಿದೆ. ಇದು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದ ಹೊಂದಿದೆ. ಈ ಫೋನ್ ಸ್ನಾಪ್‌ಡ್ರಾಗನ್ 6s ಜೆನ್ 3 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 14 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ.
ಮೊಟೊರೊಲಾ G45 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಫ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇದೆ. ಈ ಫೋನಿನಲ್ಲಿ ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಶೂಟರ್ ಲಭ್ಯವಿದೆ. ಈ ಮೊಟೊರೊಲಾ 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಮೊಬೈಲ್ 18W ಚಾರ್ಜಿಂಗ್ ತಂತ್ರಜ್ಞಾನ ಒಳಗೊಂಡಿದೆ. ಈ ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP52 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಡ್ಯುಯಲ್ ಸಿಮ್ 5G, ಬ್ಲೂಟೂತ್ 5.2, ವೈ-ಫೈ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ಮೊಟೊರೊಲಾ G45 5G ಬೆಲೆ ಮತ್ತು ಆಫರ್‌ಗಳು
4GB RAM + 128GB ಸ್ಟೋರೇಜ್ = 10,999 ರೂ.
8GB RAM + 128GB ಸ್ಟೋರೇಜ್ =12,999 ರೂ.
ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ ಮೊಟೊರೊಲಾ G45 5G ಸ್ಮಾರ್ಟ್‌ಫೋನ್ ಕೇವಲ 11,119 ರೂ.ಗಳ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಈ ಫೋನ್ ಮೇಲೆ ವಿಶೇಷ ಬ್ಯಾಂಕ್ ಆಫರ್ ಸಹ ನೀಡಲಾಗುತ್ತಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸುವ ಗ್ರಾಹಕರು, 1000 ರೂ.ಗಿಂತ ಹೆಚ್ಚಿನ ರಿಯಾಯಿತಿ ಪಡೆಯಬಹುದು. ಅಲ್ಲದೆ ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ಎಕ್ಸ್‌ಚೇಂಜ್ ಆಫರ್ ನೀಡುತ್ತಿದೆ. ಈ ಮೊಟೊರೊಲಾ G45 5G ಸ್ಮಾರ್ಟ್‌ಫೋನ್ ಖರೀದಿಸಲು, ನಿಮ್ಮ ಹಳೆಯ ಮೊಬೈಲ್ ಎಕ್ಸ್‌ಚೇಂಜ್ ಮಾಡಿಕೊಂಡರೆ 10,600 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು.


Click it and Unblock the Notifications








