Home
Deal of the day

Motorola: 5000mAh ಬ್ಯಾಟರಿ.. 256GB ಸ್ಟೋರೇಜ್‌.. ಈ ಸೊಗಸಾದ ಫೋನಿನ ಬೆಲೆ ಕುಸಿತ; ಮುಗಿಬಿದ್ದ ಗ್ರಾಹಕರು!

ಮೊಟೊರೊಲಾ ಸಂಸ್ಥೆಯು ಭಾರತದಲ್ಲಿ ಅನೇಕ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇವೆಲ್ಲವೂ ಮೊಬೈಲ್ ಪ್ರಿಯರಿಂದ ಮೆಚ್ಚುಗೆ ಪಡೆದಿವೆ. ಕಂಪನಿಯು ಅಗ್ಗದ ಬೆಲೆಯಿಂದ ಹಿಡಿದು ಭಿನ್ನ ಶ್ರೇಣಿಯ ಮೊಬೈಲ್‌ಗಳನ್ನು ಪರಿಚಯಿಸಿದೆ. ಈ ಪೈಕಿ ಮೊಟೊರೊಲಾ G85 5G (Motorola G85 5G) ಸ್ಮಾರ್ಟ್‌ಫೋನ್ ಯುವಕರ ಹಾಟ್ ಫೇವರಿಟ್ ಆಗಿದೆ. ಪ್ರಸ್ತುತ, ಇದು ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಫ್ಲಿಪ್‌ಕಾರ್ಟ್ ಈ ಬೊಂಬಾಟ್ ಆಫರ್ ನೀಡುತ್ತಿದೆ. ಬನ್ನಿ, ಈ ಫೊನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಮೊಟೊರೊಲಾ G85 5G ಸ್ಮಾರ್ಟ್‌ಫೋನ್ ಕಳೆದ ವರ್ಷ ಜುಲೈನಲ್ಲಿ ಬಿಡುಗಡೆಯಾಗಿತ್ತು. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6s ಜೆನ್ 3 ಪ್ರೊಸೆಸರ್‌ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ, 256GB ಸ್ಟೋರೇಜ್‌, 5000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನ್ ನಾಲ್ಕು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನಿನ ಹೊಸ ಬೆಲೆ ಮತ್ತು ಮತ್ತಷ್ಟು ಫೀಚರ್ಸ್‌ ತಿಳಿಯಲು ಮುಂದೆ ಓದಿ.

Motorola: 256GB ಸ್ಟೋರೇಜ್‌.. 5000mAh ಬ್ಯಾಟರಿ.. ಈ ಫೋನಿನ ಬೆಲೆ ಕುಸಿತ!

ಮೊಟೊರೊಲಾ G85 5G ಆಫರ್‌ ಬೆಲೆ

ಮೊಟೊರೊಲಾ G85 5G ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನಿನ 8GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆ 17,999 ರೂ. ಆಗಿದೆ. ಹಾಗೆಯೇ 12GB RAM + 256GB ಸ್ಟೋರೇಜ್ ರೂಪಾಂತರವನ್ನು 19,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, ಫ್ಲಿಪ್‌ಕಾರ್ಟ್ ಈ ಫೋನಿನ ಬೆಲೆಯನ್ನು ಇಳಿಕೆ ಮಾಡಿದೆ.

ನೀವು ಎಲ್ಲಾ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳ ಮೇಲೆ 1000 ರೂ.ಗಳ ರಿಯಾಯಿತಿ ಪಡೆಯಬಹುದು. ಈ ಡಿಸ್ಕೌಂಟ್‌ನೊಂದಿಗೆ ಕೇವಲ 16,999 ರೂ.ಗೆ ಈ ಮೊಬೈಲ್ ಮಾರಾಟವಾಗುತ್ತಿದೆ. ಟಾಪ್ ವೇರಿಯಂಟ್ 18,999 ರೂ. ಬೆಲೆಗೆ ಲಭ್ಯವಿದೆ. ನೀವು ಫ್ಲಿಪ್‌ಕಾರ್ಟ್ ಆಕ್ಸೆಸ್ ಬ್ಯಾಂಕ್ ಕಾರ್ಡ್ ಮೂಲಕ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಸ್ಮಾರ್ಟ್‌ಫೋನ್ ಅರ್ಬನ್ ಗ್ರೇ, ವಿವಾ ಮೆಜೆಂಟಾ, ಕೋಬಾಲ್ಟ್ ಬ್ಲೂ ಮತ್ತು ಆಲಿವ್ ಗ್ರೀನ್ ಬಣ್ಣಗಳಲ್ಲಿ ಮಾರಾಟವಾಗುತ್ತಿದೆ.

ಮೊಟೊರೊಲಾ G85 5G ಫೀಚರ್ಸ್‌

ದೊಡ್ಡ ಡಿಸ್ಪ್ಲೇ

ಮೊಟೊ G85 5G ಫೋನ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಪೂರ್ಣ ಎಚ್‌ಡಿ ಪ್ಲಸ್ ಪೋಲ್ಡ್ 3D ಬಾಗಿದ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2400 x 1080 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಹಾಗೆಯೇ 120Hz ರಿಫ್ರೆಶ್ ದರ, 1600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಪಡೆದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ.

ಸ್ನಾಪ್‌ಡ್ರಾಗನ್‌ ಪ್ರೊಸೆಸರ್

ಮೊಟೊರೊಲಾ G85 5G ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 6s ಜೆನ್ 3 ಪ್ರೊಸೆಸರ್‌ ಹೊಂದಿದೆ. ಇದನ್ನು 6 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಓಎಸ್‌ನಲ್ಲಿ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ ಇದು, ಅಡ್ರಿನೊ 619 ಜಿಪಿಯು ಸಹ ಹೊಂದಿದೆ. ಈ ಫೋನ್ 8GB + 128GB ಮತ್ತು 12GB RAM + 256GB ಸ್ಟೋರೇಜ್‌ ಆಯ್ಕೆ ಹೊಂದಿದೆ. ನೀವು RAM ಅನ್ನು 24GB ವರೆಗೆ ವಿಸ್ತರಿಸಬಹುದು.

Motorola: 256GB ಸ್ಟೋರೇಜ್‌.. 5000mAh ಬ್ಯಾಟರಿ.. ಈ ಫೋನಿನ ಬೆಲೆ ಕುಸಿತ!

32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ

ಮೊಟೊರೊಲಾ G85 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಸಿಂಗಲ್ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಹಾಗೆಯೇ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನೀನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಮೊಟೊರೊಲಾ G85 5G ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 33W ವೇಗದ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಈ ಮೊಬೈಲ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಮತ್ತು ಫೇಸ್ ಅನ್‌ಲಾಕ್ ಫೀಚರ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಸ್ಮಾರ್ಟ್‌ಫೋನ್ ಡ್ಯುಯಲ್ ಸಿಮ್ 5G, 4G, ಬ್ಲೂಟೂತ್ 5.1, 5GHZ ವೈ-ಫೈ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Motorola G85 5G price drops under Rs 17,000 on Flipkart: know new price, offers, specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+