Home
Deal of the day

ಅತ್ಯಂತ ಕಡಿಮೆ ಬೆಲೆಗೆ 'ಪ್ರೀಮಿಯಂ ಫ್ಲಿಪ್ ಫೋನ್': ಖರೀದಿಗೆ ಇದು ಬೆಸ್ಟ್ ಟೈಮ್!

ನೀವು ಮಡಚಬಹುದಾದ ಸ್ಮಾರ್ಟ್‌ಫೋನ್ ಖರೀದಿಸುವ ಕನಸು ಹೊಂದಿದ್ದರೂ ಹೆಚ್ಚಿನ ಬೆಲೆ ಕಾರಣದಿಂದ ಹಿಂಜರಿದಿದ್ದರೆ, ಈಗ ನಿಮಗೆ ಸರಿಯಾದ ಸಮಯ ಬಂದಿದೆ.!. ಮೋಟೊರೊಲಾ ತನ್ನ ಪ್ರೀಮಿಯಂ ಫ್ಲಿಪ್ ಫೋನ್ ಆಗಿರುವ Motorola Razr 60 Ultra 5G ಮೇಲೆ ಭಾರೀ ಬೆಲೆ ಕಡಿತವನ್ನು ನೀಡಿದ್ದು, ಅಮೆಜಾನ್‌ನಲ್ಲಿ ಇದು ಈಗ ಅತ್ಯಂತ ಪರಿಣಾಮಕಾರಿ ಕಡಿಮೆ ದರದಲ್ಲಿ ಲಭ್ಯವಾಗುತ್ತಿದೆ. ಈ ಆಫರ್‌ನೊಂದಿಗೆ, ಫ್ಲಾಗ್‌ಶಿಪ್ ಸ್ಪೆಸಿಫಿಕೇಶನ್ ಹೊಂದಿರುವ ಫ್ಲಿಪ್ ಫೋನ್‌ಗಳಲ್ಲಿ ಈಗ ಅತ್ಯಂತ ಮೌಲ್ಯಯುತ ಆಯ್ಕೆಯಾಗಿ ಕಾಣಿಸುತ್ತಿದೆ.

ಹೌದು, ಭಾರತದಲ್ಲಿ ರೂ.99,999ಕ್ಕೆ ಬಿಡುಗಡೆಯಾಗಿದ್ದ Motorola Razr 60 Ultra ಈಗ ಅಮೆಜಾನ್‌ನಲ್ಲಿ ರೂ.79,999ಕ್ಕೆ ಲಿಸ್ಟ್ ಆಗಿದೆ. ಅಂದರೆ, ಗ್ರಾಹಕರಿಗೆ ಈಗ ರೂ.20,000 ರಷ್ಟು ನೇರ ರಿಯಾಯಿತಿ ಸಿಗುತ್ತದೆ. ಇದರ ಜೊತೆಗೆ, IDFC First Bank ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಮಾಡಿದರೆ, ಹೆಚ್ಚುವರಿಯಾಗಿ ರೂ.10,500 ಇನ್‌ಸ್ಟಂಟ್ ಡಿಸ್ಕೌಂಟ್ ಲಭ್ಯವಿದೆ. ಈ ಎಲ್ಲಾ ಆಫರ್‌ಗಳನ್ನು ಸೇರಿಸಿದರೆ, ಫೋನ್‌ನ ಪರಿಣಾಮಕಾರಿ ಬೆಲೆ ರೂ.69,499ಕ್ಕೆ ಇಳಿಯುತ್ತದೆ, ಇದು ಈ ಸೆಗ್ಮೆಂಟ್‌ನಲ್ಲಿ ದೊಡ್ಡ ಆಕರ್ಷಣೆಯಾಗಿದೆ.

ಬಜೆಟ್‌ಗೆ ಇನ್ನಷ್ಟು ಅನುಕೂಲವಾಗಲೆಂದು ಅಮೆಜಾನ್ ಎಕ್ಸ್ಚೇಂಜ್ ಆಫರ್‌ನನ್ನೂ ನೀಡುತ್ತಿದೆ. ಗ್ರಾಹಕರು ತಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಬದಲಾಗಿ ನೀಡಿ ಗರಿಷ್ಠ ರೂ.44,450 ವರೆಗೆ ಮೌಲ್ಯ ಪಡೆಯಬಹುದು. ಹಳೆಯ ಸಾಧನದ ಬ್ರ್ಯಾಂಡ್, ಮಾದರಿ ಮತ್ತು ಸ್ಥಿತಿಯನ್ನು ಅವಲಂಬಿಸಿ ಈ ಮೊತ್ತವು ಬದಲಾಗುತ್ತದೆ ಎಂಬುದನ್ನು ಗಮನಿಸಿ. ಅಲ್ಲದೆ, ರೂ.2,813 ರಿಂದ ಆರಂಭವಾಗುವ ನೋ-ಕಾಸ್ಟ್ EMI ಆಯ್ಕೆಯೂ ಲಭ್ಯವಿರುವುದರಿಂದ, ನೀವು ತಿಂಗಳ ಕಂತುಗಳಲ್ಲಿ ಈ ಪ್ರೀಮಿಯಂ ಫೋನ್ ಖರೀದಿಸುವ ಅವಕಾಶವೂ ಇದೆ.

ಅತ್ಯಂತ ಕಡಿಮೆ ಬೆಲೆಗೆ 'ಪ್ರೀಮಿಯಂ ಫ್ಲಿಪ್ ಫೋನ್': ಖರೀದಿಗೆ ಇದು ಬೆಸ್ಟ್ ಟೈಮ್!

Motorola Razr 60 Ultra: ಖರೀದಿಸಲು ಯೋಗ್ಯವಾಗಿದೆಯೇ?
Motorola Razr 60 Ultra ಫೋನ್ ಬಿಡುಗಡೆಯಾಗಿ ಹತ್ತಿರಹತ್ತಿರ ಎರಡು ವರ್ಷಗಳಾಗುತ್ತಾ(May 13, 2025) ಬರುತ್ತಿದೆ. ಆದರೆ, ಈಗಲೂ ಸಂಪೂರ್ಣವಾಗಿ ಫ್ಲಾಗ್‌ಶಿಪ್ ಅನುಭವವನ್ನು ಒದಗಿಸುವಂತಹ ಫೀಚರ್ಸ್ ಇದರಲ್ಲಿದೆ. ಇದರಲ್ಲಿ 6.96 ಇಂಚಿನ LTPO pOLED ಮುಖ್ಯ ಡಿಸ್‌ಪ್ಲೇ ಇದ್ದು, 165Hz ರಿಫ್ರೆಶ್ ರೇಟ್ ಮತ್ತು HDR10+ ಸಪೋರ್ಟ್ ಹೊಂದಿದೆ. 4,500 ನಿಟ್ಸ್ ಪೀಕ್ ಬ್ರೈಟ್‌ನೆಸ್ ಇರುವುದರಿಂದ ಸೂರ್ಯನ ಬೆಳಕಿನಲ್ಲಿಯೂ ಸ್ಕ್ರೀನ್ ಸ್ಪಷ್ಟವಾಗಿ ಕಾಣುತ್ತದೆ.

Motorola Razr 60 Ultra ಫೋನ್ ಹೊರಭಾಗದಲ್ಲಿರುವ 4 ಇಂಚಿನ LTPO AMOLED ಕವರ್ ಸ್ಕ್ರೀನ್ ಕೂಡ 165Hz ರಿಫ್ರೆಶ್ ರೇಟ್ ಮತ್ತು 3,000 ನಿಟ್ಸ್ ಬ್ರೈಟ್‌ನೆಸ್ ಹೊಂದಿದೆ. ಫೋನ್ ಮುಚ್ಚಿದ ಸ್ಥಿತಿಯಲ್ಲಿಯೇ ನೋಟಿಫಿಕೇಶನ್‌ಗಳು, ಕರೆಗಳು ಮತ್ತು ಪ್ರಮುಖ ಅಪ್‌ಡೇಟ್‌ಗಳನ್ನು ಸುಲಭವಾಗಿ ನೋಡಬಹುದು. ಇನ್ನು ಗೋರಿಲ್ಲಾ ಗ್ಲಾಸ್ ಸೆರಾಮಿಕ್ ರಕ್ಷಣೆಯು ಫೋನ್‌ನ ದೃಢತೆಯನ್ನು ಹೆಚ್ಚಿಸುತ್ತದೆ.

ಕ್ಯಾಮೆರಾ ವಿಚಾರದಲ್ಲಿ, ಈ ಫೋನ್ ಡ್ಯುಯಲ್ 50MP ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಪ್ರೈಮರಿ ಮತ್ತು ಅಲ್ಟ್ರಾವೈಡ್ ಲೆನ್ಸ್‌ಗಳು ಉತ್ತಮ ಡಿಟೇಲ್ ಮತ್ತು ನ್ಯಾಚುರಲ್ ಕಲರ್‌ಗಳೊಂದಿಗೆ ಫೋಟೋಗಳನ್ನು ಸೆರೆಹಿಡಿಯುತ್ತವೆ. ಸೆಲ್ಫಿ ಮತ್ತು ವೀಡಿಯೊ ಕಾಲ್‌ಗಳಿಗೆ 50MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ. OIS ಸಪೋರ್ಟ್, 2x ಆಪ್ಟಿಕಲ್ ಜೂಮ್, 30x AI ಸೂಪರ್ ಜೂಮ್ ಮತ್ತು 4K ವೀಡಿಯೊ ರೆಕಾರ್ಡಿಂಗ್ ಈ ಕ್ಯಾಮೆರಾ ವ್ಯವಸ್ಥೆಯ ಪ್ರಮುಖ ಹೈಲೈಟ್ಸ್ ಆಗಿವೆ.

ಕಾರ್ಯಕ್ಷಮತೆ ವಿಷಯದಲ್ಲಿ ಈ ಫ್ಲಿಪ್ ಫೋನ್ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಇದರಲ್ಲಿ ಶಕ್ತಿಶಾಲಿ Snapdragon 8 Elite SoC ಪ್ರೊಸೆಸರ್ ನೀಡಲಾಗಿದ್ದು, ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್‌ಗೆ ಅತ್ಯುತ್ತಮವಾಗಿದೆ. 16GB LPDDR5X RAM ಮತ್ತು 512GB UFS 4.0 ಸ್ಟೋರೇಜ್ ಇರುವುದರಿಂದ ವೇಗ ಮತ್ತು ಸ್ಟೋರೇಜ್ ಸಮಸ್ಯೆ ಎಂದೇ ಇಲ್ಲ. ದಿನನಿತ್ಯದ ಬಳಕೆಯಿಂದ ಹಿಡಿದು ಹೆವಿ ಅಪ್ಲಿಕೇಶನ್‌ಗಳವರೆಗೂ ಇದು ಸುಗಮ ಅನುಭವ ನೀಡುತ್ತದೆ.

ಬ್ಯಾಟರಿ ವಿಭಾಗದಲ್ಲೂ Motorola Razr 60 Ultra ಗಮನ ಸೆಳೆಯುತ್ತದೆ. ಇದರಲ್ಲಿ 4,700mAh ಬ್ಯಾಟರಿ ನೀಡಲಾಗಿದ್ದು, 68W ಫಾಸ್ಟ್ ವೈರ್ಡ್ ಚಾರ್ಜಿಂಗ್ ಸಪೋರ್ಟ್ ಇದೆ. ಜೊತೆಗೆ 30W ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವೂ ಲಭ್ಯವಿದ್ದು, ಇತರೆ ಸಾಧನಗಳನ್ನು ಕೂಡ ಚಾರ್ಜ್ ಮಾಡಬಹುದು.

ಒಟ್ಟಾರೆಯಾಗಿ, ಪ್ರೀಮಿಯಂ ಫ್ಲಿಪ್ ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಇದು ಅಪರೂಪದ ಅವಕಾಶ. ಆಕರ್ಷಕ ಡಿಸೈನ್, ಹೈ-ಎಂಡ್ ಡಿಸ್‌ಪ್ಲೇ, ಫ್ಲಾಗ್‌ಶಿಪ್ ಪ್ರೊಸೆಸರ್ ಮತ್ತು ಶಕ್ತಿಶಾಲಿ ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ Motorola Razr 60 Ultra 5G ಈಗ ಹೆಚ್ಚಿನ ಗ್ರಾಹಕರಿಗೆ ಸುಲಭವಾಗಿ ತಲುಪುತ್ತಿದೆ. ಇಂತಹ ಡೀಲ್‌ಗಳು ಹೆಚ್ಚು ದಿನಗಳ ಕಾಲ ಇರುವುದಿಲ್ಲ, ಆದ್ದರಿಂದ ಹೊಸ ಫ್ಲಿಪ್ ಫೋನ್ ಹುಡುಕುತ್ತಿರುವವರು ಈ ಅವಕಾಶವನ್ನು ಮಿಸ್ ಮಾಡದೇ ಬಳಸಿಕೊಳ್ಳಬಹುದು.

Best Mobiles in India

English summary
The Motorola Razr 60 Ultra 5G is now available at its lowest effective price in India. Originally launched at ₹99,999, the premium flip phone is listed on Amazon for ₹79,999, with an additional ₹10,500 instant discount on select bank cards bringing the final price down to just ₹69,499 and making it one of the best-value foldable smartphones right now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+