Home
Deal of the day

Motorola Razr 60 Ultra ಮೇಲೆ ಭಾರಿ ಬೆಲೆ ಕಡಿತ: ಫ್ಲಿಪ್ ಫೋನ್ ಪ್ರಿಯರು ನೋಡಿ!

ಭಾರತ ಸೇರಿದಂತೆ ಜಾಗತಿಕವಾಗಿಮಡಚಬಹುದಾದ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ ಮೋಟೋರೊಲಾದ ಇತ್ತೀಚಿನ ಪೀಳಿಗೆಯ 'ಫ್ಲಿಪ್' ಫೋನ್ Motorola Razr 60 Ultra ಇದೀಗ ಅಮೆಜಾನ್‌ನಲ್ಲಿ ಭಾರೀ ಬೆಲೆ ಕಡಿತವನ್ನು ಪಡೆದುಕೊಂಡಿದೆ. ಕಳೆದ ಮೇ ತಿಂಗಳಿನಲ್ಲಿ ದೇಶದಲ್ಲಿ ₹99,999 ರ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದ್ದ ಈ ಸ್ಮಾರ್ಟ್‌ಫೋನ್, ಪ್ರಸ್ತುತ ಅಮೆಜಾನ್‌ನಲ್ಲಿ ಬರೋಬ್ಬರಿ ₹20,000 ರಿಯಾಯಿತಿ ಬೆಲೆಯಲ್ಲಿ ದೊರೆಯುತ್ತಿದೆ. ಜೊತೆಗೆ ಇತರೆ ಕೊಡುಗೆಗಳು ಲಭ್ಯವಾಗುತ್ತಿರುವುದರಿಂದ, ಫ್ಲಿಪ್ ಶೈಲಿಯ ಫೋನ್‌ಗಳನ್ನು ಇಷ್ಟಪಡುವ ಮತ್ತು ಉತ್ತಮ ಡೀಲ್‌ಗಾಗಿ ಕಾಯುತ್ತಿದ್ದ ಗ್ರಾಹಕರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಹಾಗಾದರೆ, Motorola Razr 60 Ultra ಖರೀದಿಸಯ ಡೀಲ್ ವಿವರಗಳು ಹೇಗಿವೆ?, ಖರೀದಿಗೆ ಇದು ಅತ್ಯುತ್ತಮ ಆಯ್ಕೆ ಏಕೆ ಎಂಬುದನ್ನು ನೋಡೋಣ ಬನ್ನಿ.

Motorola Razr 60 Ultra: ಡೀಲ್ ವಿವರಗಳು ಮತ್ತು ಇತರೆ ಕೊಡುಗೆಗಳು
Motorola Razr 60 Ultra ಫೋನ್ ಅಮೆಜಾನ್‌ನಲ್ಲಿ ಪ್ರಸ್ತುತ ಕೇವಲ ₹79,999 ಕ್ಕೆ ಲಭ್ಯವಿದೆ
ಕೇವಲ ₹79,999 ರ ಪ್ರಸ್ತುತ ಬೆಲೆಯ ಹೊರತಾಗಿ, ಗ್ರಾಹಕರು ಇನ್ನು ಹೆಚ್ಚಿನ ಉಳಿತಾಯವನ್ನು ಮಾಡಬಹುದು.
ಕ್ಯಾಶ್‌ಬ್ಯಾಕ್: Amazon Pay ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವ ಗ್ರಾಹಕರು ₹2,399 ವರೆಗೆ 5% ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶವಿದೆ.
ನಿಮಯ ಕೊಡುಗೆ (ಎಕ್ಸ್‌ಚೇಂಜ್): ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ನ ಮಾದರಿ ಮತ್ತು ಸ್ಥಿತಿಯನ್ನು ಅವಲಂಬಿಸಿ, ನೀವು ಬರೋಬ್ಬರಿ ₹33,900 ವರೆಗೆ ವಿನಿಮಯ ಮೌಲ್ಯವನ್ನು ಪಡೆಯಬಹುದು.
EMI ಆಯ್ಕೆಗಳು: ಈ ಫೋನ್ ಅನ್ನು ಸುಲಭ ಕಂತುಗಳಲ್ಲಿ (EMI) ಖರೀದಿಸಲು ಬಯಸುವವರಿಗೆ, ಕೇವಲ ₹3,879 ರಿಂದ ಮಾಸಿಕ ಇಎಂಐ ಆಯ್ಕೆಗಳು ಲಭ್ಯವಿದೆ.

Motorola Razr 60 Ultra ಮೇಲೆ ಭಾರಿ ಬೆಲೆ ಕಡಿತ: ಫ್ಲಿಪ್ ಫೋನ್ ಪ್ರಿಯರು ನೋಡಿ!

Razr 60 Ultra: ಇದು ಏಕೆ ಅತ್ಯುತ್ತಮ ಆಯ್ಕೆ?
ಕೇವಲ ಬೆಲೆ ಕಡಿತ ಮಾತ್ರವಲ್ಲ, ಮೋಟೋರೊಲಾ ರೇಜರ್ 60 ಅಲ್ಟ್ರಾ ಅದರ ವಿಶಿಷ್ಟ ವಿನ್ಯಾಸ ಮತ್ತು ಶಕ್ತಿಯುತ ವೈಶಿಷ್ಟ್ಯಗಳಿಂದಾಗಿ ಮಡಚಬಹುದಾದ ಫೋನ್‌ಗಳ ವಿಭಾಗದಲ್ಲಿ ಅತ್ಯುತ್ತಮ ಆಯ್ಕೆಯಾಗಿದೆ.
ಅದ್ಭುತ ವಿನ್ಯಾಸ ಮತ್ತು ಬಾಳಿಕೆ: ಈ ಕ್ಲಾಮ್‌ಶೆಲ್ (Clamshell) ಮಡಚಬಹುದಾದ ಸಾಧನವು ಟೈಟಾನಿಯಂ-ಬಲವರ್ಧಿತ ಹಿಂಜ್‌ನೊಂದಿಗೆ ಬರುತ್ತದೆ. ಕಂಪನಿಯ ಪ್ರಕಾರ, ಇದು 800,000 ಕ್ಕೂ ಹೆಚ್ಚು ಮಡಿಕೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದರ ಜೊತೆಗೆ, ಇದು ಧೂಳು ಮತ್ತು ನೀರಿನಿಂದ ರಕ್ಷಣೆ ನೀಡುವ IP48 ರೇಟಿಂಗ್ ಹೊಂದಿದೆ.
ಡ್ಯುಯಲ್ ಡಿಸ್ಪ್ಲೇ ಮ್ಯಾಜಿಕ್: ಒಳಭಾಗದಲ್ಲಿ, ಇದು 165Hz ರಿಫ್ರೆಶ್ ದರದೊಂದಿಗೆ 6.96-ಇಂಚಿನ LTPO pOLED ಡಿಸ್ಪ್ಲೇ ಹೊಂದಿದೆ. ಅಷ್ಟೇ ಮುಖ್ಯವಾಗಿ, ಹೊರಭಾಗದಲ್ಲಿರುವ 4-ಇಂಚಿನ LTPO AMOLED ಕವರ್ ಸ್ಕ್ರೀನ್ ಕೂಡ 165Hz ರಿಫ್ರೆಶ್ ದರವನ್ನು ಹೊಂದಿದೆ. ಈ ದೊಡ್ಡ ಕವರ್ ಸ್ಕ್ರೀನ್‌ನಿಂದಾಗಿ, ಫೋನ್ ತೆರೆಯದೆಯೇ ಹೆಚ್ಚಿನ ಕಾರ್ಯಗಳನ್ನು (ಉದಾಹರಣೆಗೆ, ನೋಟಿಫಿಕೇಶನ್ ವೀಕ್ಷಣೆ, ಮೋಟೋ AI ವೈಶಿಷ್ಟ್ಯಗಳ ಬಳಕೆ, ಸೆಲ್ಫಿ) ನಿರ್ವಹಿಸಬಹುದು.
ಶಕ್ತಿಯುತ ಕಾರ್ಯಕ್ಷಮತೆ: Razr 60 Ultra ಗೆ ಸ್ನಾಪ್‌ಡ್ರಾಗನ್ 8 ಎಲೈಟ್ SoC ಶಕ್ತಿ ನೀಡುತ್ತದೆ, ಇದು ಅತಿ ವೇಗದ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ. ಇದರೊಂದಿಗೆ 16GB LPDDR5X RAM ಮತ್ತು 512GB UFS 4.0 ಸಂಗ್ರಹಣೆ ಲಭ್ಯವಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್: 4,700mAh ಬ್ಯಾಟರಿ 68W ವೈರ್ಡ್, 30W ವೈರ್‌ಲೆಸ್ ಮತ್ತು 5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಲಭ್ಯವಿದೆ.
ಕ್ಯಾಮೆರಾ: ಡ್ಯುಯಲ್ 50MP ಸಂವೇದಕಗಳು (ಪ್ರಾಥಮಿಕ OIS ಮತ್ತು ಅಲ್ಟ್ರಾವೈಡ್) ಉತ್ತಮ ಫೋಟೋಗ್ರಫಿ ಅನುಭವವನ್ನು ನೀಡುತ್ತದೆ. ಇದರ 50MP ಮುಂಭಾಗದ ಕ್ಯಾಮೆರಾ ಮತ್ತು 4K ವೀಡಿಯೊ ರೆಕಾರ್ಡಿಂಗ್ ಬೆಂಬಲ ಫ್ಲಿಪ್ ಫೋನ್‌ಗಳಲ್ಲಿ ಒಂದು ಪ್ರಮುಖ ವೈಶಿಷ್ಟ್ಯವಾಗಿದೆ.

ಒಟ್ಟಾರೆಯಾಗಿ, ನಿಮ್ಮ ಹಳೆಯ ಫೋನ್ ಅನ್ನು ಬದಲಾಯಿಸಿ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿನ್ಯಾಸದೊಂದಿಗೆ ಬರುವ Motorola Razr 60 Ultra 5G ಅನ್ನು ಈ ಭಾರೀ ಬೆಲೆ ಕಡಿತದ ಸಮಯದಲ್ಲಿ ಖರೀದಿಸುವುದು ಬುದ್ಧಿವಂತಿಕೆಯ ನಿರ್ಧಾರವಾಗಬಹುದು. ಮಡಚಬಹುದಾದ ಫೋನ್‌ಗಳಲ್ಲಿ ಈ ಫೋನ್ ಸೌಂದರ್ಯ, ಬಾಳಿಕೆ ಮತ್ತು ಕಾರ್ಯಕ್ಷಮತೆಯ ಅತ್ಯುತ್ತಮ ಸಂಯೋಜನೆಯನ್ನು ನೀಡುತ್ತದೆ ಎಂಬುದು ನಮ್ಮ ಅಭಿಪ್ರಾಯ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Massive savings on Motorola's flagship flip phone! The latest Motorola Razr 60 Ultra 5G, featuring a durable titanium-reinforced hinge, Snapdragon 8 Elite SoC, and a stunning dual 165Hz display, is now available on Amazon for under ₹80,000. Learn how to maximize your savings with exchange offers and bank cashback, making this durable, stylish foldable phone an unmissable deal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+