Home
Deal of the day

11499 ಸಾಕು! Nokia G42 5G ಬೆಲೆ ಇಳಿಕೆ; 5000 ಡಿಸ್ಕೌಂಟ್.. ಹೇಗಿದೆ ಗೊತ್ತಾ?

ನೋಕಿಯಾ ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುವ ಫೋನಿನ ಬೆಲೆಯನ್ನು ಇಳಿಕೆ ಮಾಡಿದೆ. ಹೌದು, ಅಮೆಜಾನ್‌ನಲ್ಲಿ ನೋಕಿಯಾ G42 5G (Nokia G42 5G) ಮೊಬೈಲ್ ಶೇ.30 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಜೊತೆಗೆ, 1750 ರೂ. ವರೆಗೆ ಬ್ಯಾಂಕ್ ಡಿಸ್ಕೌಂಟ್ ಮತ್ತು ಇಎಂಐ ಸೌಲಭ್ಯ ಲಭ್ಯವಿದೆ. ಬನ್ನಿ, ನೋಕಿಯಾ G42 5G ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ನೋಕಿಯಾ G42 5G ಮೊಬೈಲ್ ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾಗಿತ್ತು. ನೀವು, ಈ ಫೋನನ್ನು 6GB RAM ಮತ್ತು 128GB ಸ್ಟೋರೇಜ್ ಆಯ್ಕೆಯಲ್ಲಿ ಕೊಳ್ಳಬಹುದು. ಇದು 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಈ ಮೊಬೈಲ್ ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಫೋನಿನಲ್ಲಿ 6.56 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಹಾಗೆಯೇ, 5000mAh ಬ್ಯಾಟರಿ ಮತ್ತು 20W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರಾಟವಾಗುತ್ತಿದೆ.

ಕೇವಲ 11,499 ರೂ.! Nokia G42 5G ಬೆಲೆ ಇಳಿಕೆ; 5000 ಡಿಸ್ಕೌಂಟ್.. ಹೇಗಿದೆ?

ನೋಕಿಯಾ G42 5G ಬೆಲೆ ಮತ್ತು ಆಫರ್‌ಗಳು

ನೀವು, ನೋಕಿಯಾ G42 5G ಫೋನನ್ನು ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದು. ಅಮೆಜಾನ್‌ನಲ್ಲಿ ಫೋನಿನ 6GB RAM + 128GB ಸ್ಟೋರೇಜ್ ರೂಪಾಂತರವು ಬೆಲೆ 11,499 ರೂ.ಗೆ ಲಭ್ಯವಿದೆ. ಕಂಪನಿಯು ಆಕ್ಸಿಸ್ ಬ್ಯಾಂಕ್, ಆರ್‌ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್, ಹೆಚ್‌ಡಿಎಫ್‌ಸಿ, ಬ್ಯಾಂಕ್ ಆಫ್ ಬರೋಡಾ, ಒನ್‌ಕಾರ್ಡ್‌ ಕ್ರೆಡಿಟ್ ಕಾರ್ಡ್‌ ಪಾವತಿ ಮೇಲೆ ಡಿಸ್ಕೌಂಟ್ ನೀಡುತ್ತಿದೆ. ನೀವು, ಗ್ರೇ ಮತ್ತು ಪರ್ಪಲ್ ಬಣ್ಣಗಳಲ್ಲಿ ಫೋನನ್ನು ಖರೀದಿಸಬಹುದು.

ನೋಕಿಯಾ G42 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ನೋಕಿಯಾ G42 5G ಮೊಬೈಲ್ 6.56 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ದರ, 720 × 1612 ಪಿಕ್ಸೆಲ್ ರೆಸಲ್ಯೂಶನ್, 560 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ನೋಕಿಯಾ G42 5G ಫೋನನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 480+ ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಪ್ರೊಸೆಸರ್ ಅನ್ನು 4ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಇದರಲ್ಲಿ Adreno 619 GPU ಗ್ರಾಫಿಕ್ಸ್ ಕಾರ್ಡ್ ಲಭ್ಯವಿದೆ. ಈ ಮೊಬೈಲ್ ಆಂಡ್ರಾಯ್ಡ್‌ 13 ಓಎಸ್‌ನಲ್ಲಿ ಕೆಲಸ ಮಾಡುತ್ತದೆ.

ಸ್ಟೋರೇಜ್‌ ಆಯ್ಕೆ

ನೋಕಿಯಾ G42 5G ಸ್ಮಾರ್ಟ್‌ಫೋನ್ 11GB RAM + 128GB ಸ್ಟೋರೇಜ್‌ ಹೊಂದಿದೆ. ಮೈಕ್ರೊ SD ಕಾರ್ಡ್‌ನೊಂದಿಗೆ 1TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.

ಕೇವಲ 11,499 ರೂ.! Nokia G42 5G ಬೆಲೆ ಇಳಿಕೆ; 5000 ಡಿಸ್ಕೌಂಟ್.. ಹೇಗಿದೆ?

ಕ್ಯಾಮೆರಾ ಸೆಟಪ್

ನೋಕಿಯಾ G42 5G ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೊನಿನಲ್ಲಿ 50 ಮೆಗಾಪಿಕ್ಸೆಲ್ ಎಐ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಜೊತೆಗೆ, 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ನೋಕಿಯಾ G42 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 20W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವಶಿಷ್ಟ್ಯಗಳು

ನೋಕಿಯಾ G42 5G ಸ್ಮಾರ್ಟ್‌ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ, IP52 ರೇಟಿಂಗ್‌ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ 5G, 4G VoLTE, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Nokia G42 5G available with Rs 5,000 discount on amazon: check new price, offers, availability specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+