Home
Deal of the day

Nothing Phone 2a ಬೆಲೆ ಕುಸಿತ! ಧಮಾಕಾ ಆಫರ್.. ಕಡಿಮೆ ಬೆಲೆಗೆ ಸೇಲ್

ದಸರಾ ಹಬ್ಬಕ್ಕೆ ಕ್ಷಣಗಣೆ ಶುರುವಾಗಿದೆ. ಇತ್ತ, ದೀಪಾವಳಿ ಹಬ್ಬವೂ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್‌ಫೋನ್ ಕಂಪನಿಗಳು ತನ್ನ ಗ್ರಾಹಕರಿಗಾಗಿ ಹಲವು ಆಫರ್‌ಗಳನ್ನು ಘೋಷಿಸಿವೆ. ಅದರಂತೆ, ಪ್ರಸಿದ್ಧ ಟೆಕ್ ಬ್ರಾಂಡ್ ನಥಿಂಗ್‌ ಕೂಡ ಹಬ್ಬದ ವಿಶೇಷ ಕೊಡುಗೆಯೊಂದಿಗೆ ಗಮನ ಸೆಳೆಯುತ್ತಿದೆ. ಹೌದು, ನಥಿಂಗ್ ಫೋನ್ 2a (Nothing Phone 2a) ಫೋನ್‌ ಖರೀದಿ ಮೇಲೆ ಅಮೆಜಾನ್‌ನಲ್ಲಿ ಬಂಪರ್ ಆಫರ್‌ ನೀಡುತ್ತಿದೆ. ಈ ಮೂಲಕ ನಥಿಂಗ್ ಫೋನ್ 2a ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಅಮೆಜಾನ್‌ನಲ್ಲಿ ನಥಿಂಗ್ ಫೋನ್ 2a ಫೋನ್ ಖರೀದಿ ಮೇಲೆ ಶೇ.11 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಇದರ ಮೂಲ ಬೆಲೆ 27,999 ರೂ. ಆಗಿದೆ. ಡಿಸ್ಕೌಂಟ್‌ನೊಂದಿಗೆ ಈ ಫೋನ್ 24,890 ರೂ. ಬೆಲೆಗೆ ಲಭ್ಯವಿದೆ. ಹೊಸ ಸ್ಮಾರ್ಟ್‌ಫೋನ್‌ ಖರೀದಿಸಲು ಬಯಸುವವರಿಗೆ ನಥಿಂಗ್ ಫೋನ್ 2a ಉತ್ತಮ ಆಯ್ಕೆಯಾಗಲಿದೆ. ನೀವು, ಅಮೆಜಾನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಈ ಆಫರ್‌ ಪಡೆಯಬಹುದು. ಇದು ಮೂನ್‌ಲೈಟ್ ಪರ್ಲ್, ಲಕ್ಸ್ ಲ್ಯಾವೆಂಡರ್ ಮತ್ತು ಬ್ಲಾಕ್ ಬ್ಯೂಟಿ ಕಲರ್‌ ಆಯ್ಕೆಯಲ್ಲಿ ಬರುತ್ತದೆ.

Nothing Phone 2a ಬೆಲೆ ಕುಸಿತ! ಧಮಾಕಾ ಆಫರ್.. ಕಡಿಮೆ ಬೆಲೆಗೆ ಸೇಲ್

24 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು!

ಹೊಸ ಫೋನ್ ಖರೀದಿಸುವವರಿಗೆ ಇದು ಪರ್ಫೆಕ್ಟ್ ಆಯ್ಕೆಯಾಗಿದ್ದು, ಅಮೆಜಾನ್‌ ಹೆಚ್ಚುವರಿ ಆಫರ್‌ಗಳನ್ನು ನೀಡುತ್ತದೆ. ನೀವು, ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ ಈ ಫೋನ್ ಖರೀದಿಸಿದರೆ 1,250 ರೂ.ಗಳ ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಈ ಮೂಲಕ ಹೆಚ್ಚಿನ ಹಣವನ್ನು ಉಳಿಸಬಹುದು. ಜೊತೆಗೆ, ಎಕ್ಸ್‌ಚೇಂಜ್‌ ಆಫರ್‌ ಸಹ ಲಭ್ಯವಿದೆ. ನೀವು, ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಎಕ್ಸ್‌ಚೇಂಜ್‌ ಮಾಡಿಕೊಳ್ಳಬಹುದು. ಈ ಮೂಲಕ 23,250 ರೂ.ಗಳ ವರೆಗೆ ರಿಯಾಯಿತಿಯ ಪ್ರಯೋಜನ ಪಡೆಯಬಹುದು. ಅಮೆಜಾನ್‌ನಲ್ಲಿ ಈ ಆಫರ್‌ ಪಡೆಯಿರಿ.

ನಥಿಂಗ್ ಫೋನ್ 2a ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ನಥಿಂಗ್ ಫೋನ್ 2a ಫೋನ್ 6.7 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಫುಲ್ ಹೆಚ್‌ಡಿ ಪ್ಲಸ್ ರೆಸಲ್ಯೂಶನ್ ಹೊಂದಿದೆ. ಇದು 1300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್, 1080 x 2412 ಪಿಕ್ಸೆಲ್‌ ರೆಸಲ್ಯೂಶನ್‌ ಮತ್ತು 30Hz ನಿಂದ 120Hz ವರೆಗಿನ ರಿಫ್ರೆಶ್ ದರ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ನಥಿಂಗ್‌ ಫೋನ್‌ 2a ಫೋನ್‌ ಅನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊ SoC ಚಿಪ್‌ಸೆಟ್‌ನೊಂದಿಗೆ ಬಿಡುಗಡೆ ಮಾಡಿದೆ. ಇದರೊಂದಿಗೆ, ಗ್ರಾಫಿಕ್ಸ್‌ಗಾಗಿ ಮಾಲಿ G610 ಜಿಪಿಯು ಲಭ್ಯವಿದೆ. ಈ ಫೋನ್ ಆಂಡ್ರಾಯ್ಡ್‌ 14 ಆಧಾರಿತ ನಥಿಂಗ್‌ ಓಎಸ್‌ 2.5 ನಲ್ಲಿ ಕಾರ್ಯನಿರ್ವಹಿಸುತ್ತದೆ. ಮೂರು ಆಂಡ್ರಾಯ್ಡ್ ಆವೃತ್ತಿಗಳು ಮತ್ತು ನಾಲ್ಕು ವರ್ಷಗಳ ಭದ್ರತಾ ಪ್ಯಾಚ್ ನವೀಕರಣಗಳು ಲಭ್ಯವಿದೆ.

ಕ್ಯಾಮೆರಾ ಸೆಟಪ್

ನಥಿಂಗ್‌ ಫೋನ್‌ 2a ಮೊಬೈಲ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಎಲ್ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಇದರಲ್ಲಿ 50 ಮೆಗಾಪಿಕ್ಸೆಲ್ (Samsung ISOCELL S5KG9) ಪ್ರಾಥಮಿಕ ಕ್ಯಾಮೆರಾ ಇದೆ. ಜೊತೆಗೆ, 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ JN1 ಸಂವೇದಕದೊಂದಿಗೆ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಪ್ರಿಯರಿಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ನಥಿಂಗ್‌ ಫೋನ್‌ 2a ಫೋನನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪರಿಚಯಿಸಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ನಥಿಂಗ್‌ ಫೋನ್‌ 2a ಸ್ಮಾರ್ಟ್‌ಫೋನ್ 5G, 4G LTE, ವೈ-ಫೈ 6, ವೈ-ಫೈ 6 ಡೈರೆಕ್ಟ್, ಬ್ಲೂಟೂತ್ 5.3, ಎನ್‌ಎಫ್‌ಸಿ (NFC), ಜಿಪಿಎಸ್‌, ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಕನೆಕ್ಟಿವಿಟಿ ಸೌಲಭ್ಯಗಳನ್ನು ಹೊಂದಿದೆ.

Best Mobiles in India

English summary
Nothing Phone 2A Available With Huge Discount on Amazon sale: know price, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+