6000 ಬೆಲೆ ಕಡಿತ! 50MP +50MP +50MP ಕ್ಯಾಮೆರಾಗಳು.. 256GB ಸ್ಟೋರೇಜ್.. ಕಮ್ಮಿ ಬೆಲೆಗೆ Nothing ಫೋನ್
ಗಣರಾಜ್ಯೋತ್ಸವ ಬಂದಿದೆ.. ಸ್ಮಾರ್ಟ್‌ಫೋನ್ ಪ್ರಿಯರಿಗೆ ಆಫರ್‌ಗಳ ಹಬ್ಬದೂಟ ಹೊತ್ತು ತಂದಿದೆ. ಹೌದು, ರಿಪಬ್ಲಿಕ್ ಡೇ (Republic Day 2025) ಪ್ರಯುಕ್ತ ಪ್ರಸಿದ್ಧ ಕಂಪನಿಗಳು ತನ್ನ ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದೆ. ನಥಿಂಗ್ ಸಂಸ್ಥೆಯು ಇದರಿಂದ ಹೊರತಾಗಿಲ್ಲ. ಕಂಪನಿಯು ನಥಿಂಗ್ ಫೋನ್ (2a) ಪ್ಲಸ್ (Nothing Phone (2a) Plus ಫೋನಿನ ಬೆಲೆ ಭಾರೀ ಇಳಿಕೆ ಮಾಡಿದೆ. ನೀವು ಫ್ಲಿಪ್‌ಕಾರ್ಟ್‌ನಲ್ಲಿ 6,000 ರೂ.ಗಳ ರಿಯಾಯಿತಿ ಪಡೆಯಬಹುದು. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ನಥಿಂಗ್ ಫೋನ್ (3a) ಸರಣಿ ಬಿಡುಗಡೆಗೂ ಮೊದಲೇ ನಥಿಂಗ್ ಫೋನ್ (2a) ಪ್ಲಸ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಈ ಮೊಬೈಲ್ ಕಳೆದ ವರ್ಷ ಬಿಡುಗಡೆಯಾಗಿತ್ತು. ಈ ಫೋನಿನಲ್ಲಿ 50MP + 50MP + 50MP ಕ್ಯಾಮೆರಾಗಳು ಲಭ್ಯವಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7350 ಪ್ರೊ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನ್ 6.6 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 256GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 45W ಸ್ಪೀಡ್ ಚಾರ್ಜಿಂಗ್ ಒಳಗೊಂಡಿದೆ. ಈ ಫೋನಿಗೆ ಯಾವೆಲ್ಲಾ ಆಫರ್‌ಗಳಿವೆ ತಿಳಿಯಲು ಮುಂದೆ ಓದಿ.

ನಥಿಂಗ್ ಫೋನ್ (2a) ಪ್ಲಸ್ ಬೆಲೆ ಮತ್ತು ಆಫರ್‌ಗಳು
ನಥಿಂಗ್ ಫೋನ್ (2a) ಪ್ಲಸ್ ಫೋನನ್ನು ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಫೋನಿನ 8GB RAM ರೂಪಾಂತರದ ಬೆಲೆ 27,999 ರೂ ಮತ್ತು 12GB RAM ಮಾದರಿಯ ದರ 29,999 ರೂ. ಆಗಿದೆ. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ 8GB RAM ರೂಪಾಂತರವು 23,999 ರೂ.ಗೆ ಲಭ್ಯವಿದೆ. ಈ ಫೋನಿನ ಬೆಲೆ 4,000 ರೂ. ಕಡಿಮೆ ಮಾಡಲಾಗಿದೆ. ಇದರ ಜೊತೆಗೆ, ಕಂಪನಿಯು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳ ಮೇಲೆ 2,000 ರೂ. ಹೆಚ್ಚುವರಿ ಡಿಸ್ಕೌಂಟ್ ನೀಡುತ್ತಿದೆ. ಎರಡೂ ರಿಯಾಯಿತಿಯೊಂದಿಗೆ ನೀವು ಕೇವಲ 21,999 ರೂ.ಗೆ ನಥಿಂಗ್ ಫೋನ್ (2a) ಪ್ಲಸ್ ಖರೀದಿಸಬಹುದು.
ನಥಿಂಗ್ ಫೋನ್ (2a) ಪ್ಲಸ್ ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ನಥಿಂಗ್ ಫೋನ್ (2a) ಪ್ಲಸ್ ಸ್ಮಾರ್ಟ್‌ಫೋನ್ 6.7 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 240Hz ಸ್ಪರ್ಶ ಮಾದರಿ ದರ ಮತ್ತು 1300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಹೊಂದಿದೆ.
ಪ್ರೊಸೆಸರ್ ಯಾವುದು
ನಥಿಂಗ್ ಫೋನ್ (2a) ಪ್ಲಸ್ ಮೊಬೈಲ್ ಮೀಡಿಯಾಟೆಕ್‌ನ ಡೈಮೆನ್ಸಿಟಿ 7300 ಪ್ರೊ ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ ಗ್ರಾಫಿಕ್ಸ್‌ಗಾಗಿ, ಮಾಲಿ G610 MC4 ಜಿಪಿಯು ಸಹ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ನಥಿಂಗ್ ಓಎಸ್ 2.6 ಜೊತೆಗೆ ಕೆಲಸ ನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆ
ನಥಿಂಗ್ ಫೋನ್ (2a) ಪ್ಲಸ್ ಫೋನ್ 8GB RAM ಬೂಸ್ಟರ್ ತಂತ್ರಜ್ಞಾನ ಹೊಂದಿದೆ. ನೀವು ಭೌತಿಕ RAM ಜೊತೆಗೆಬ ವರ್ಚುವಲ್ RAM ಸೇರಿಸುವ ಮೂಲಕ, 20GB RAM ಅನ್ನು ಬಳಸಬಹುದು. ಈ ಮೊಬೈಲ್ 8GB RAM ಮತ್ತು 12GB RAM ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಈ ಎರಡೂ ರೂಪಾಂತರಗಳಲ್ಲಿ 256GB ಸ್ಟೋರೇಜ್ ಲಭ್ಯವಿದೆ.

ಮೂರು ಬೊಂಬಾಟ್ ಕ್ಯಾಮೆರಾಗಳು
ನಥಿಂಗ್ ಫೋನ್ (2A) ಪ್ಲಸ್ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಮತ್ತು EIS ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಆಟೋ ಫೋಕಸ್ ಮತ್ತು 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಈ ಸ್ಮಾರ್ಟ್‌ಫೋನ್, 50 ಈ ಮೊಬೈಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.
ದೊಡ್ಡ ಬ್ಯಾಟರಿ ಬ್ಯಾಕಪ್
ನಥಿಂಗ್ ಫೋನ್ (2A) ಪ್ಲಸ್ ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 50W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ 5W ರಿವರ್ಸ್ ವೈರ್ಡ್ ಚಾರ್ಜಿಂಗ್ ಬೆಂಬಲ ಸಹ ಲಭ್ಯವಿದೆ.
ಇತರೆ ವೈಶಿಷ್ಟ್ಯಗಳು
ನಥಿಂಗ್ ಫೋನ್ (2A) ಪ್ಲಸ್ ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ. ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, 5G ಬೆಂಬಲ, 13 5G ಬ್ಯಾಂಡ್‌ಗಳ ಸಪೋರ್ಟ್, 4G LTE, ವೈ-ಫೈ 6, ಬ್ಲೂಟೂತ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.


Click it and Unblock the Notifications








