Home
Deal of the day

OnePlus 11R ಬೆಲೆ ಕುಸಿತ! 12,000 ರಿಯಾಯಿತಿ.. ಹೊಸ ಬೆಲೆ ಎಷ್ಟು?

ಒನ್‌ಪ್ಲಸ್ ಪ್ರಿಯರಿಗೆ ಖುಷಿ ಸುದ್ದಿ ಇದೆ. ನೀವು, ಹೊಸ ಒನ್‌ಪ್ಲಸ್ ಫೋನ್ ಖರೀದಿಸಲು ಬಯಸಿದರೆ ಈ ಬಂಪರ್‌ ಆಫರ್‌ ಅನ್ನು ಮಿಸ್‌ ಮಾಡಿಕೊಳ್ಳಬೇಡಿ. ಹೌದು, ಒನ್‌ಪ್ಲಸ್‌ನ ಕಂಪನಿಯ ಒನ್‌ಪ್ಲಸ್‌ 11R (OnePlus 11R) ಸ್ಮಾರ್ಟ್‌ಫೋನ್ ಬೆಲೆ ಪ್ರಸ್ತುತ ಮೊದಲಿಗಿಂತ ಇಳಿಕೆಯಾಗಿದೆ. ಅಮೆಜಾನ್‌ನಲ್ಲಿ ಈ ಫೋನ್ ಬರೋಬ್ಬರಿ 12,000 ರೂ.ಗಳ ರಿಯಾಯಿತಿಯೊಂದಿಗೆ ಲಭ್ಯವಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ ಆಫರ್‌ ಕೂಡ ಲಭ್ಯವಿರಲಿದೆ. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಇದೀಗ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Great Indian Festival sale 2024) ನಡೆಯುತ್ತಿದೆ. ಇದರಲ್ಲಿ ಒನ್‌ಪ್ಲಸ್‌ ಕಂಪನಿಯ ಹಲವು ಸ್ಮಾರ್ಟ್‌ಫೋನ್‌ಗಳನ್ನು ಭರ್ಜರಿ ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆಯೇ, ನೀವು ಒನ್‌ಪ್ಲಸ್‌ 11R (OnePlus 11R) ಮೊಬೈಲ್‌ ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಈ ಫೋನ್, 6.74 ಇಂಚಿನ ಡಿಸ್ಪ್ಲೇ, ಸ್ನಾಪ್‌ಡ್ರಾಗನ್ 8+ Gen 1 (4 nm) ಪ್ರೊಸೆಸರ್, 50 ಮೆಗಾಪಿಕ್ಸೆಲ್‌ ಕ್ಯಾಮೆರಾ ಹೊಂದಿದೆ.

OnePlus 11R ಬೆಲೆ ಕುಸಿತ! 12,000 ರಿಯಾಯಿತಿ.. ಹೊಸ ಬೆಲೆ ಎಷ್ಟು?

ಒನ್‌ಪ್ಲಸ್‌ 11R ಹೊಸ ಬೆಲೆ ಮತ್ತು ಆಫರ್‌ಗಳು

8GB RAM + 128GB = 27,999 ರೂ.
16GB RAM + 256GB = 39,999 ರೂ.

ಕಂಪನಿಯು ಒನ್‌ಪ್ಲಸ್‌ 11R ಮೊಬೈಲ್‌ ಅನ್ನು 39,999 ರೂ. ಬೆಲೆಗೆ ಬಿಡುಗಡೆ ಮಾಡಿಗಿತ್ತು. ಆದರೆ, ಈಗ ಫೋನ್ 12,000 ರಿಯಾಯಿತಿಯೊಂದಿಗೆ ಅಮೆಜಾನ್‌ನಲ್ಲಿ 27,999 ರೂ.ಗೆ ಲಭ್ಯವಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಸಮಯದಲ್ಲಿ ಇದನ್ನು ಕೇವಲ 26,749 ರೂ.ಗಳಿಗೆ ಖರೀದಿಸಬಹುದು. ಈ ಬೆಲೆ ಶ್ರೇಣಿಯಲ್ಲಿ, ಈ ಮೊಬೈಲ್ ಉತ್ತಮ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು ಸೋನಿಕ್ ಬ್ಲಾಕ್, ಸೋಲಾರ್ ರೆಡ್ ಮತ್ತು ಗ್ಯಲಾಕ್ಟಿಕ್ ಸಿಲ್ವರ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಒನ್‌ಪ್ಲಸ್‌ 11R ಆಫರ್‌ಗಳು

ಎಸ್‌ಬಿಐ ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟಿನಲ್ಲಿ 1,250 ರೂ. ವರೆಗೆ ರಿಯಾಯಿತಿಯನ್ನು ನೀಡಲಾಗುವುದು (ಕನಿಷ್ಠ ಖರೀದಿ ಮೌಲ್ಯ 5,000 ರೂ.) ಎಸ್‌ಬಿಐ ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ 1,000 ರೂ. ವರೆಗೆ ರಿಯಾಯಿತಿ ಇದೆ. (ಕನಿಷ್ಠ ಖರೀದಿ ಮೌಲ್ಯ 5,000 ರೂ.) ಎಸ್‌ಬಿಐ ಕ್ರೆಡಿಟ್ ಕಾರ್ಡ್ ನಾನ್ ಇಎಂಐ ವಹಿವಾಟಿನಲ್ಲಿ 1,000 ವರೆಗೆ ರಿಯಾಯಿತಿ ಸಿಗುತ್ತದೆ.

ಒನ್‌ಪ್ಲಸ್‌ 11R ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ಒನ್‌ಪ್ಲಸ್‌ 11R ಫೋನ್ 6.74 ಇಂಚಿನ ಅಮೋಲೆಡ್‌ ಪಂಚ್ ಹೋಲ್ ಡಿಸ್ಪ್ಲೇಯನ್ನು ಹೊಂದಿದೆ. 120Hz ರಿಫ್ರೆಶ್ ದರ, HDR10+, 1450 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದಿದೆ. ಜೊತೆಗೆ, 1240 x 2772 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ.

ಪ್ರೊಸೆಸರ್‌: ಒನ್‌ಪ್ಲಸ್‌ 11R ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 (4 nm) ಪ್ರೊಸೆಸರ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 13, ಆಕ್ಸಿಜನ್ ಓಎಸ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ, ಅಡ್ರಿನೊ 730 ಜಿಪಿಯು ಬಲ ಪಡೆದುಕೊಂಡಿದೆ. ಇದು 3 ಪ್ರಮುಖ OS ನವೀಕರಣಗಳನ್ನು ಮತ್ತು 4 ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ.

ಸ್ಟೋರೇಜ್‌: ಈ ಫೋನ್ LPDDR5X RAM ಮತ್ತು UFS 3.1 ಸ್ಟೋರೇಜ್‌ನೊಂದಿಗೆ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. 8GB RAM + 128GB ಮತ್ತು 16GB RAM + 256GB ಸ್ಟೋರೇಜ್‌ ಒಳಗೊಂಡಿದೆ

ಈ ಸುದ್ದಿ ಓದಿದ್ದೀರಾ?: Samsung: ದೊಡ್ಡ ಡಿಸ್ಕೌಂಟ್.. ಕೇವಲ 25,499 ರೂ.! ಖರೀದಿಗೆ ಪೈಪೋಟಿ

ಕ್ಯಾಮೆರಾ: ಒನ್‌ಪ್ಲಸ್‌ 11R ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್‌ಅಲ್ಟ್ರಾವೈಡ್ ಸೆನ್ಸರ್ ಹಾಗೂ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಸೆನ್ಸರ್‌ ಅನ್ನು ಪಡೆದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್‌ ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ: ಒನ್‌ಪ್ಲಸ್‌ 11R ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 100W ವೈರ್ಡ್ ಚಾರ್ಜಿಂಗ್ ಸಪೋರ್ಟ್‌ ಪಡೆದಿದೆ.

ಇತರೆ ವೈಶಿಷ್ಟ್ಯಗಳು: ಒನ್‌ಪ್ಲಸ್‌ 11R ಫೋನ್ ಸ್ಟೀರಿಯೋ ಸ್ಪೀಕರ್‌, ವೈ ಫೈ, ಡ್ಯುಯಲ್ ಬ್ಯಾಂಡ್, ಬ್ಲೂಟೂತ್ ಆವೃತ್ತಿ 5.3, ಯುಎಸ್‌ಬಿ ಟೈಪ್ ಸಿ 2.0 ಸೇರಿದಂತೆ ಹಲವು ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.

Best Mobiles in India

English summary
OnePlus 11R gets Massive discount on amazon great indian festival sale 2024: check offer price, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+