7,632 ಡಿಸ್ಕೌಂಟ್! 64MP ಕ್ಯಾಮೆರಾ.. 512GB ಸ್ಟೋರೇಜ್.. OnePlus 12 ಬೆಲೆ ದಿಢೀರ್ ಕುಸಿತ
ಒನ್‌ಪ್ಲಸ್ ತನ್ನ ಅಭಿಮಾನಿಗಳಿಗೆ ಎರಡು ಸಿಹಿಸುದ್ದಿ ನೀಡಿದೆ. ಶೀಘ್ರದಲ್ಲೇ ಒನ್‌ಪ್ಲಸ್ 13 (OnePlus 13) ಮೊಬೈಲ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಮತ್ತೊಂದೆಡೆ, ಹೊಸ ಫೋನಿನ ಬಿಡುಗಡೆಗೂ ಮೊದಲೇ, ಒನ್‌ಪ್ಲಸ್ 12 (OnePlus 12) ಮೊಬೈಲ್ ಬೆಲೆ ಇಳಿಕೆಯಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಭರ್ಜರಿ ಡಿಸ್ಕೌಂಟ್ ಸಹ ಲಭ್ಯವಿದೆ. ನೀವು, ಬ್ಯಾಂಕ್ ಡಿಸ್ಕೌಂಟ್ ಮತ್ತು ಎಕ್ಸ್‌ಚೇಂಜ್ ಆಫರ್ ಇಲ್ಲದೆಯೇ, ನೇರವಾಗಿ 7,632 ರೂ. ಉಳಿತಾಯ ಮಾಡಬಹುದು. ಬನ್ನಿ, ಈ ಪೋನಿನ ಹೊಸ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಕಂಪನಿಯು ಒನ್‌ಪ್ಲಸ್ 12 ಫೋನನ್ನು 12GB + 256GB ಮತ್ತು 16GB + 512GB ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ನೀವು, ಸಿಲ್ಕಿ ಬ್ಲಾಕ್, ಫ್ಲೋವಿ ಎಮರಾಲ್ಡ್ ಮತ್ತು ಗ್ಲೇಶಿಯಲ್ ವೈಟ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು. ಈ ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ. ಫೋನಿನಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 6.82 ಇಂಚಿನ ಡಿಸ್ಪ್ಲೇ, 5400mAh ಬ್ಯಾಟರಿ ಮತ್ತು 100W ಚಾರ್ಜಿಂಗ್ ಒಳಗೊಂಡಿದೆ.

ಒನ್‌ಪ್ಲಸ್ 12 ಫೊನಿನ ಬೆಲೆ ಮತ್ತು ಆಫರ್‌ಗಳು
ಕಂಪನಿಯು ಒನ್‌ಪ್ಲಸ್ 12 ಫೋನಿನ 12GB + 256GB ಸ್ಟೋರೇಜ್ ರೂಪಾಂತರವನ್ನು 64,999 ರೂ.ಗೆ ಬಿಡುಗಡೆ ಮಾಡಿತ್ತು. ಪ್ರಸ್ತುತ, ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ 57,367 ರೂ.ಗೆ ಮಾರಾಟ ಮಾಡುತ್ತಿದೆ. ನೀವು, ಈ ಫೋನಿನ ಖರೀದಿ ಮೇಲೆ ಭಾರೀ ಉಳಿತಾಯ ಮಾಡಬಹುದು. ಜೊತೆಗೆ, ಯಾವುದೇ ಷರತ್ತುಗಳಿಲ್ಲದೆ 7,632 ರೂ.ಗಳ ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ.
ನೀವು, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಸಿ ಒನ್‌ಪ್ಲಸ್ 12 ಫೋನನ್ನು ಖರೀದಿಸಿದರೆ, ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಜೊತೆಗೆ, ಕಂಪನಿಯು ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಸಹ ನೀಡುತ್ತಿದೆ. ಅಮೆಜಾನ್‌ನಲ್ಲಿಯೂ ಒನ್‌ಪ್ಲಸ್ 12 ಫೋನಿನ ಮೇಲೆ ರಿಯಾಯಿತಿ ಲಭ್ಯವಿದೆ.
ಒನ್‌ಪ್ಲಸ್ 12 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒನ್‌ಪ್ಲಸ್ 12 ಮೊಬೈಲ್ 6.82 ಇಂಚಿನ ಕ್ವಾಡ್ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು LTPO ಪ್ಲಸ್ ಪ್ಯಾನೆಲ್ ಮತ್ತು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಫೋನ್ 120Hz ರಿಫ್ರೆಶ್ ದರ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಒನ್‌ಪ್ಲಸ್ 12 ಫೋನನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಗ್ರಾಫಿಕ್ಸ್‌ಗಾಗಿ Adreno 750 GPU ಲಭ್ಯವಿದೆ. ಗೇಮಿಂಗ್‌ಗಾಗಿ ಆವಿ ಕೂಲಿಂಗ್ ವ್ಯವಸ್ಥೆ ಇದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ ಆಕ್ಸಿಜನ್ ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಫೋನಿನಲ್ಲಿ 16GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್ ಲಭ್ಯವಿದೆ.
ಕ್ಯಾಮೆರಾ ಸೆಟಪ್
ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 64 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 48 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಒನ್‌ಪ್ಲಸ್ 12 ಮೊಬೈಲ್‌ನಲ್ಲಿ 5400mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 100W ವೇಗದ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಈ ಫೋನಿನಲ್ಲಿ 4 ವರ್ಷಗಳ ಆಂಡ್ರಾಯ್ಡ್ ನವೀಕರಣ ಮತ್ತು 5 ವರ್ಷಗಳ ಭದ್ರತಾ ನವೀಕರಣ ಲಭ್ಯವಿದೆ.


Click it and Unblock the Notifications








