OnePlus 12R ಬೆಲೆ ಕುಸಿತ! ದೊಡ್ಡ ರಿಯಾಯಿತಿ.. ಹೊಸ ಬೆಲೆ ಎಷ್ಟು?
OnePlus 12R Price Drop: ಒನ್‌ಪ್ಲಸ್ ಫೋನ್ ಖರೀದಿಸುವವರಿಗೆ ಒಳ್ಳೆಯ ಸುದ್ದಿ ಇದೆ. ಒನ್‌ಪ್ಲಸ್ 12R (OnePlus 12R) ಮೊಬೈಲ್ ಪ್ರಸ್ತುತ ರಿಯಾಯಿತಿ ದರದಲ್ಲಿ ಲಭ್ಯವಿದೆ. ಹೌದು, ಒನ್‌ಪ್ಲಸ್ 12R ಅನ್ನು ಭಾರತದಲ್ಲಿ ಜನವರಿಯಲ್ಲಿ ಬಿಡುಗಡೆ ಮಾಡಲಾಯಿತು. ಇದೀಗ ಕಂಪನಿಯು ತನ್ನ ಕೈಗೆಟುಕುವ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನಿನ ಬೆಲೆಯನ್ನು ಇಳಿಕೆ ಮಾಡಿದೆ. ನೀವು ಅಮೆಜಾನ್ ಮತ್ತು ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಈ ಫೋನನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು.
ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಕೂಲ್ ಬ್ಲೂ, ಐರನ್ ಗ್ರೇ ಮತ್ತು ಸನ್‌ಸೆಟ್ ಡ್ಯೂನ್ ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನ್ Qualcomm Snapdragon 8 Gen 2 ಪ್ರೊಸೆಸರ್ ಅನ್ನು ಹೊಂದಿದೆ. 16GB RAM, 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 5,500mAh ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನಿನ ಹೊಸ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.

ಒನ್‌ಪ್ಲಸ್ 12R ಫೋನಿನ ಬೆಲೆ
8GB + 128GB ಸ್ಟೋರೇಜ್ ಬೆಲೆ = 39,998 ರೂ.
8GB + 256GB ಸ್ಟೋರೇಜ್ ಬೆಲೆ = 42,998 ರೂ.
16GB + 256GB ಸ್ಟೋರೇಜ್ ಬೆಲೆ = 45,998 ರೂ.
ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್ ಭಾರತದಲ್ಲಿ 8GB RAM ಮತ್ತು 128GB ಸ್ಟೋರೇಜ್‌ನೊಂದಿಗೆ 39,998 ರೂ.ಗಳ ಬೆಲೆಯಲ್ಲಿ ಬಿಡುಗಡೆಯಾಗಿದೆ. ಪ್ರಸ್ತುತ ಅಮೇಜಾನ್‌ನಲ್ಲಿ ಈ ಒನ್‌ಪ್ಲಸ್ ಫೋನಿನ ಖರೀದಿ ಮೇಲೆ 2,000 ರೂ.ಗಳ ರಿಯಾಯಿತಿ ಕೂಪನ್ ಅನ್ನು ನೀಡಲಾಗುತ್ತಿದೆ. ಈ ಡಿಸ್ಕೌಂಟ್ ಬಳಿಕ, ನೀವು ಫೋನನ್ನು 37,998 ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು.
ಈ ಒನ್‌ಪ್ಲಸ್ 12R ಫೋನ್ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಇದರ ಮಿಡ್ ವೇರಿಯಂಟ್ ಅನ್ನು 8GB + 256GB ಮತ್ತು ಟಾಪ್ ವೇರಿಯಂಟ್ 16GB + 256GB ಸ್ಟೋರೇಜ್‌ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. 8GB + 256GB ಸ್ಟೋರೇಜ್ ಬೆಲೆ 42,998 ಮತ್ತು 16GB + 256GB ಸ್ಟೋರೇಜ್ ಬೆಲೆ 45,998 ರೂ. ಇದೆ.
5,500 ರೂ.ಗಳ ವರೆಗೆ ರಿಯಾಯಿತಿ
ಅದೇ ರೀತಿ, ರಿಲಯನ್ಸ್ ಡಿಜಿಟಲ್ ಒನ್‌ಪ್ಲಸ್ 12R ಅನ್ನು 39,999 ರೂ.ಗೆ ಮಾರಾಟ ಮಾಡುತ್ತಿದೆ. ಅಧಿಕೃತ ವೆಬ್‌ಸೈಟ್ ಪ್ರಕಾರ, ಒಮ್ಮೆ ನೀವು ಆಡ್ ಟು ಕಾರ್ಟ್ ಅಥವಾ ಬೈ ನೌ ಬಟನ್ ಕ್ಲಿಕ್ ಮಾಡಿದರೆ, ನಿಮಗೆ 2,000 ರೂ. ಡಿಸ್ಕೌಂಟ್ ಸಿಗುತ್ತದೆ. ಹೆಚ್ಚುವರಿಯಾಗಿ, ಆಯ್ದ ಕೆಲವು ಬ್ಯಾಂಕ್ ಕಾರ್ಡ್ ಪಾವತಿ ಮೇಲೆ 3,500 ರೂ.ಗಳ ವರೆಗೆ ರಿಯಾಯಿತಿ ಲಭ್ಯವಿದೆ. ಇದರೊಂದಿಗೆ ಒನ್‌ಪ್ಲಸ್ 12R ಫೋನಿನ ಬೆಲೆಯನ್ನು ಮತ್ತಷ್ಟು ಕಡಿಮೆ ಆಗಲಿದೆ.

ಒನ್‌ಪ್ಲಸ್ 12R ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್ 6.78 ಇಂಚಿನ LTPO 4.0 AMOLED ProXDR ಡಿಸ್ಪ್ಲೇಯನ್ನು ಹೊಂದಿದೆ. ಇದು 2780 x 1264 ಪಿಕ್ಸೆಲ್ ರೆಸಲ್ಯೂಶನ್, 120 Hz ವರೆಗೆ ರಿಫ್ರೆಶ್ ರೇಟ್‌ನೊಂದಿಗೆ ಬರುತ್ತದೆ. 4,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಪ್ರೊಟೆಕ್ಷನ್ ಹೊಂದಿದೆ.
ಪ್ರೊಸೆಸರ್: ಈ ಸ್ಮಾರ್ಟ್‌ಫೋನ್‌ಗಳಲ್ಲಿ Qualcomm Snapdragon 8 Gen 2 ಪ್ರೊಸೆಸರ್ ಹೊಂದಿದೆ. ಇದು 12GBLPDDR5x RAM ಮತ್ತು 256GB UFS 3.1 ಸ್ಟೋರೇಜ್ ಒಳಗೊಂಡಿದೆ. ಈ ಫೋನ್ Android 14 ಆಧಾರಿತ OxygenOS 14.0 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ: ಒನ್‌ಪ್ಲಸ್ 12R ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 50 ಮೆಗಾಪಿಕ್ಸೆಲ್ ಸೋನಿ IMX890 ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.
ಬ್ಯಾಟರಿ: ಈ ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 100W SuperVOOC ವೈರ್ಡ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ IP64 ರೇಟಿಂಗ್, NFC ಮತ್ತು ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಡಾಲ್ಬಿ ಅಟ್ಮಾಸ್‌ನೊಂದಿಗೆ ಬರುತ್ತದೆ.


Click it and Unblock the Notifications








