Home
Deal of the day

ಸೂಪರ್ ಆಫರ್‌! ಬರೋಬ್ಬರಿ 12000 ಡಿಸ್ಕೌಂಟ್.. ಕಡಿಮೆ ಬೆಲೆಗೆ ಈ OnePlus ಫೋನ್‌ಗಳು ಸೇಲ್.. ಇಲ್ಲಿದೆ ಲಿಸ್ಟ್‌

ಒನ್‌ಪ್ಲಸ್‌ ವ್ಯಾಲೆಂಟೈನ್ಸ್ ಡೇ (Valentine's Day) ಪ್ರಯುಕ್ತ ತನ್ನ ಅಭಿಮಾನಿಗಳಿಗೆ ಭರಪೂರ ಆಫರ್‌ ಘೋಷಿಸಿದೆ. ನೀವು ಇಂದು ನಿಮ್ಮ ಪ್ರೇಯಸಿಗೆ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ ಉಡುಗೊರೆ ನೀಡಲು ಬಯಸಿದರೆ, ಈ ಅವಕಾಶ ಮಿಸ್‌ ಮಾಡಿಕೊಳ್ಳಬೇಡಿ. ಹೌದು, ಟಕ್ ಬ್ರ್ಯಾಂಡ್ ಒನ್‌ಪ್ಲಸ್ 'ರೆಡ್ ರಶ್ ಡೇಸ್' (OnePlus Red Rush Days Sale) ಸೇಲ್‌ನಲ್ಲಿ ಆಯ್ದೆ ಕೆಲವು ಮೊಬೈಲ್‌ಗಳನ್ನು ಭಾರೀ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. ಈ ಆಫರ್‌ಗಳು ಫೆಬ್ರವರಿ 16 ರವರೆಗೆ (ಇಂದು) ಮಾತ್ರ ಲಭ್ಯವಿದೆ. ಒನ್‌ಪ್ಲಸ್ ಯಾವೆಲ್ಲಾ ಫೋನ್‌ಗಳ ಮೇಲೆ ಆಫರ್‌ ನೀಡುತ್ತಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಒನ್‌ಪ್ಲಸ್ ರೆಡ್ ರಶ್ ಡೇಸ್ ಸೇಲ್‌ನಲ್ಲಿ ಒನ್‌ಪ್ಲಸ್ ನಾರ್ಡ್ ಸರಣಿ, ಟ್ಯಾಬ್ಲೆಟ್‌ಗಳು ಮತ್ತು IoT ಸಾಧನಗಳು ಸೇರಿದಂತೆ ಒನ್‌ಪ್ಲಸ್ 13 (OnePlus 13) ಸರಣಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿ ನೀಡುತ್ತಿದೆ. ಈ ಮಾರಾಟವು ಫೆಬ್ರವರಿ 11 ರಿಂದ ಫೆಬ್ರವರಿ 16 ರವರೆಗೆ ಒನ್‌ಪ್ಲಸ್‌ ಸಮುದಾಯದ ಸದಸ್ಯರಿಗಾಗಿ ನಡೆಯುತ್ತಿದೆ. ಒನ್‌ಪ್ಲಸ್ 13 ಸರಣಿಯ ಹೊರತಾಗಿ, ಒನ್‌ಪ್ಲಸ್ 12 (OnePlus 12) ಸರಣಿ, ಒನ್‌ಪ್ಲಸ್ ನಾರ್ಡ್ ಸರಣಿಯ ಸ್ಮಾರ್ಟ್‌ಫೋನ್‌ಗಳು, ಒನ್‌ಪ್ಲಸ್ ಪ್ಯಾಡ್ ಟ್ಯಾಬ್ಲೆಟ್‌ಗಳು ಮತ್ತು ಒನ್‌ಪ್ಲಸ್ ವಾಚ್ 2 ಸರಣಿ ಮತ್ತು ಒನ್‌ಪ್ಲಸ್ ಬಡ್ಸ್ ಪ್ರೊ 3 ಇಯರ್‌ಬಡ್‌ಗಳ ಮೇಲೆಯೂ ಆಫರ್ ಲಭ್ಯವಿದೆ.

ಬಂಪರ್ ಆಫರ್‌! ಈ OnePlus ಫೋನ್‌ಗಳಿಗೆ 12000 ಡಿಸ್ಕೌಂಟ್‌.. ಇಲ್ಲಿದೆ ಲಿಸ್ಟ್‌

ಒನ್‌ಪ್ಲಸ್ 13 ಫೋನಿಗೆ 12,000 ರಿಯಾಯಿತಿ

ಒನ್‌ಪ್ಲಸ್ 13 ಸ್ಮಾರ್ಟ್‌ಫೋನ್ 69,999 ಬೆಲೆಗೆ ಬಿಡುಗಡೆಯಾಗಿದೆ. ಪ್ರಸ್ತುತ, ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ ಈ ಫೋನ್ ಖರೀದಿಸಿದರೆ, ನಿಮಗೆ 5000 ರೂ.ಗಳ ತ್ವರಿತ ಕ್ಯಾಶ್‌ಬ್ಯಾಕ್ ಸಿಗುತ್ತದೆ. ಜೊತೆಗೆ 7,000 ರೂ.ಗಳ ಎಕ್ಸ್‌ಚೇಂಜ್ ಬೋನಸ್ ಸಹ ಲಭ್ಯವಿದೆ. ಇದರೊಂದಿಗೆ ನೀವು ಒನ್‌ಪ್ಲಸ್ 13 ಸ್ಮಾರ್ಟ್‌ಫೋನ್ ಮೇಲೆ 12,000 ರೂ. ವರೆಗೆ ರಿಯಾಯಿತಿ ಪಡೆಯಬಹುದು. ಹೆಚ್ಚುವರಿಯಾಗಿ, ಬಜಾಜ್ ಫಿನ್‌ಸರ್ವ್ ಮತ್ತು ಇತರೆ ಪ್ರಮುಖ ಕ್ರೆಡಿಟ್ ಕಾರ್ಡ್‌ಗಳಲ್ಲಿ 24 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಆಯ್ಕೆಯೂ ಲಭ್ಯವಿದೆ.

ಒನ್‌ಪ್ಲಸ್ 13R ಫೋನಿಗೆ 10,000 ರಿಯಾಯಿತಿ

ಅದೇ ರೀತಿ, ಒನ್‌ಪ್ಲಸ್ 13R ಮೇಲೆ 3,000 ರೂ. ವರೆಗಿನ ತ್ವರಿತ ಬ್ಯಾಂಕ್ ರಿಯಾಯಿತಿ ಲಭ್ಯವಿದೆ. ಜೊತೆಗೆ 7,000 ರೂ. ವರೆಗಿನ ಎಕ್ಸ್‌ಚೇಂಜ್ ಬೋನಸ್‌ ಸಹ ಲಭ್ಯವಿದೆ. ಇದರೊಂದಿಗೆ ಒಟ್ಟು 10,000 ರೂ. ವರೆಗಿನ ರಿಯಾಯಿತಿಯ ಲಾಭ ಪಡೆಯಬಹುದು. ಇನ್ನೂ ಒನ್‌ಪ್ಲಸ್ 12 (OnePlus 12) ಫೊನಿನ ಮೇಲೆ 4,000 ರೂ.ಗಳ ತ್ವರಿತ ಬ್ಯಾಂಕ್ ರಿಯಾಯಿತಿ ಲಭ್ಯವಿದೆ. ಇದರ ಜೊತೆಗೆ, ನೀವು 3,000 ರೂ.ಗಳ ಫ್ಲಾಟ್ ರಿಯಾಯಿತಿ ಸಹ ಪಡೆಯಬಹುದು.

ಬಂಪರ್ ಆಫರ್‌! ಈ OnePlus ಫೋನ್‌ಗಳಿಗೆ 12000 ಡಿಸ್ಕೌಂಟ್‌.. ಇಲ್ಲಿದೆ ಲಿಸ್ಟ್‌

ಒನ್‌ಪ್ಲಸ್ ನಾರ್ಡ್ 4 (OnePlus Nord 4) ಸ್ಮಾರ್ಟ್‌ಫೋನ್ ಸಹ 1,000 ರೂ.ಗಳ ರಿಯಾಯಿತಿಯೊಂದಿಗೆ ಖರೀದಿಗೆ ಲಭ್ಯವಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ ನೀವು 4,000 ರೂ.ಗಳ ಬ್ಯಾಂಕ್ ರಿಯಾಯಿತಿ ಸಹ ಪಡೆಯಬಹುದು. ಒನ್‌ಪ್ಲಸ್ ನಾರ್ಡ್ CE 4 (OnePlus Nord CE 4) ಸ್ಮಾರ್ಟ್‌ಫೋನ್ ಕೂಡ 1,000 ರೂ.ಗಳ ರಿಯಾಯಿತಿಯೊಂದಿಗೆ ಖರೀದಿಸಲು ಲಭ್ಯವಿದೆ. ಒನ್‌ಪ್ಲಸ್ ನಾರ್ಡ್ CE 4 ಲೈಟ್ (OnePlus Nord CE 4 Lite) ಫೋನಿನ ಖರೀದಿ ಮೇಲೆ 2,000 ರೂ. ಬ್ಯಾಂಕ್ ರಿಯಾಯಿತಿ ಲಭ್ಯವಿದೆ.

ಒನ್‌ಪ್ಲಸ್ ಟ್ಯಾಬ್ಲೆಟ್‌ಗಳು, ಇಯರ್‌ಬಡ್‌ಗಳಿಗೂ ಆಫರ್

ಒನ್‌ಪ್ಲಸ್ ಪ್ಯಾಡ್ 2 ಮೇಲೆ 2,000 ರೂ.ಗಳ ಫ್ಲಾಟ್ ರಿಯಾಯಿತಿ ಲಭ್ಯವಿದೆ. ಹಾಗೆಯೇ ಒನ್‌ಪ್ಲಸ್ ಪ್ಯಾಡ್ ಗೋ ಖರೀದಿ ಮೇಲೆ 3,000 ರೂ.ಗಳ ಫ್ಲಾಟ್ ಡಿಸ್ಕೌಂಟ್ ಸಿಗುತ್ತದೆ. ಒನ್‌ಪ್ಲಸ್ 'ರೆಡ್ ರಶ್ ಡೇಸ್' (OnePlus Red Rush Days Sale) ಮಾರಾಟದಲ್ಲಿ OnePlus Buds Pro 3 ಸಹ 1,000 ರೂ. ರಿಯಾಯಿತಿಯೊಂದಿಗೆ ಖರೀದಿಗೆ ಲಭ್ಯವಿರುತ್ತದೆ.

Best Mobiles in India

English summary
OnePlus 13 and OnePlus 13R Get Massive Discount In Red Rush Days Sale; Check Offers, Specs and More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+