Home
Deal of the day

OnePlus 13 ಬೆಲೆ ಇಳಿಕೆ! 50MP + 50MP + 32MP ಕ್ಯಾಮೆರಾಗಳು.. 5000 ರಿಯಾಯಿತಿ.. ಹೊಸ ಬೆಲೆ, ಆಫರ್ ಏನಿದೆ?

ಒನ್‌ಪ್ಲಸ್ ರೆಡ್ ರಶ್ ಡೇಸ್ ಸೇಲ್ (OnePlus Red Rush Days Sale) ಮತ್ತೆ ಬಂದಿದೆ. ಹಲವು ಒನ್‌ಪ್ಲಸ್ ಫೋನ್‌ಗಳ ಖರೀದಿ ಮೇಲೆ ಬಂಪರ್ ಆಫರ್‌ ಘೋಷಿಸಲಾಗಿದೆ. ಈ ಪೈಕಿ ಒನ್‌ಪ್ಲಸ್‌ 13 (OnePlus 13) ಸ್ಮಾರ್ಟ್‌ಫೋನ್‌ ಭಾರೀ ರಿಯಾಯಿತಿಯನ್ನು ಪಡೆದಿದೆ. ಹೌದು, ಒನ್‌ಪ್ಲಸ್ ರೆಡ್ ರಶ್ ಡೇಸ್ ಸೇಲ್ ಏಪ್ರಿಲ್ 14 ರವರೆಗೆ ನಡೆಯಲಿದೆ. ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳೊಂದಿಗೆ ಗ್ರಾಹಕರು ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ಪಡೆಯಬಹುದು. ಈ ಸೇಲ್ ಅಮೆಜಾನ್, ರಿಲಯನ್ಸ್ ಡಿಜಿಟಲ್, ಕ್ರೋಮಾ, ಒನ್‌ಪ್ಲಸ್ ವೆಬ್‌ಸೈಟ್ ಮತ್ತು ಇತರೆ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಆಗಿದೆ.

ಒನ್‌ಪ್ಲಸ್ ರೆಡ್ ರಶ್ ಡೇಸ್ ಸೇಲ್‌ನಲ್ಲಿ ಒನ್‌ಪ್ಲಸ್‌ 13 ಫೋನ್‌ ಸಹ ಬಿಡುಗಡೆ ಬೆಲೆಗಿಂತ ಕಡಿಮೆಗೆ ಮಾರಾಟವಾಗುತ್ತಿದೆ. ಈ ಫೋನಿನ ವಿಶೇಷತೆಗಳೆಂದರೆ, ಇದು ಸ್ನಾಪ್‌ಡ್ರಾಗನ್ 8 ಎಲೈಟ್‌ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಮೊಬೈಲ್ 6.82 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನಿನಲ್ಲಿ ಎರಡು 50 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 12GB RAM ಮತ್ತು 256GB ಸ್ಟೋರೇಜ್‌, 6000mAh ಬ್ಯಾಟರಿ, 100W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಹೊಸ ಬೆಲೆ, ಆಫರ್‌ ಬೆಲೆ ತಿಳಿಯಲು ಮುಂದೆ ಓದಿ.

 OnePlus 13 ಬೆಲೆ ಇಳಿಕೆ! 5000 ರಿಯಾಯಿತಿ.. ವಿಶೇಷತೆಗಳೇನು? ಖರೀದಿ ಎಲ್ಲಿ?

ಒನ್‌ಪ್ಲಸ್‌ 13 ರಿಯಾಯಿತಿ ಬೆಲೆ

ಒನ್‌ಪ್ಲಸ್‌ 13 ಫೋನ್ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗಲಿದೆ. ಈ ಫೋನಿನ 12GB RAM + 256GB ಸ್ಟೋರೇಜ್‌ ಬೆಲೆ 69,999 ರೂ.ಇದೆ. 16GB RAM + 512GB ಸ್ಟೋರೇಜ್‌ 76,999 ರೂ. ಮತ್ತು 24GB RAM + 1TB ಸ್ಟೋರೇಜ್‌ 89,999 ರೂ.ಗೆ ಲಭ್ಯವಿದೆ. ನೀವು ಈ ಫೋನನ್ನು ಬ್ಲ್ಯಾಕ್ ಎಕ್ಲಿಪ್ಸ್, ಆರ್ಕ್ಟಿಕ್ ಡಾನ್ ಮತ್ತು ಮಿಡ್‌ನೈಟ್ ಓಷನ್ ಬಣ್ಣಗಳಲ್ಲಿ ಖರೀದಿಸಬಹುದು.

ಒನ್‌ಪ್ಲಸ್ ರೆಡ್ ರಶ್ ಡೇಸ್ ಸೇಲ್‌ನಲ್ಲಿ ಈ ಫೋನಿನ ಖರೀದಿ ಮೇಲೆ 5,000 ರೂಪಾಯಿಗಳ ತಕ್ಷಣದ ಬ್ಯಾಂಕ್ ರಿಯಾಯಿತಿ ನೀಡಲಾಗಿದೆ. ಇದಲ್ಲದೆ, 12 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಮತ್ತು 7,000 ರೂಪಾಯಿಗಳವರೆಗೆ ಎಕ್ಸ್‌ಚೇಂಜ್ ಬೋನಸ್ ಸಹ ಲಭ್ಯವಿದೆ. ಈ ಫೋನ್ ಕಂಪನಿಯ ಅಧಿಕೃತ ವೆಬ್‌ಸೈಟ್, ಒನ್‌ಪ್ಲಸ್ ಸ್ಟೋರ್, ಅಮೆಜಾನ್‌ ಸೈಟ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ.

 OnePlus 13 ಬೆಲೆ ಇಳಿಕೆ! 5000 ರಿಯಾಯಿತಿ.. ವಿಶೇಷತೆಗಳೇನು? ಖರೀದಿ ಎಲ್ಲಿ?

ಒನ್‌ಪ್ಲಸ್‌ 13 ವೈಶಿಷ್ಟ್ಯಗಳು

ಒನ್‌ಪ್ಲಸ್‌ 13 ಮೊಬೈಲ್ 6.82 ಇಂಚಿನ ಅಮೋಲೆಟ್ ಡಿಸ್ಪ್ಲೇ ಹೊಂದಿದೆ. ಇದು 3,168 × 1,440 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 4500 ನಿಟ್ಸ್‌ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಇದು ಅಲ್ಟ್ರಾಸಾನಿಕ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ. ಈ ಒನ್‌ಪ್ಲಸ್‌ 13 ಮೊಬೈಲ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 ಎಲೈಟ್‌ ಪ್ರೊಸೆಸರ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 15 ಆಧಾರಿತ ಆಕ್ಸಿಜನ್ ಓಎಸ್‌ 15 ಜೊತೆಗೆ ಕೆಲಸ ಮಾಡುತ್ತದೆ. ಈ ಫೋನ್‌ 12GB, 16GB ಮತ್ತು 24GB RAM ಹೊಂದಿದೆ. ಜೊತೆಗೆ 256GB ಮತ್ತು 512GB ಸ್ಟೋರೇಜ್ ಲಭ್ಯವಿದೆ.

ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೋನಿ ತೃತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಈ ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 100W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಹಾಗೆಯೇ 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸಹ ಲಭ್ಯವಿದೆ.

Best Mobiles in India

English summary
OnePlus 13 5G available with 5,000 discount on OnePlus Red Rush Days Sale: check new price, Offers, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+