Home
Deal of the day

OnePlus 13 ಫೋನ್ ಬೆಲೆ ಇಳಿಕೆ: ಫ್ಲಿಪ್‌ಕಾರ್ಟ್‌ನಲ್ಲಿ ಈಗ ಭಾರೀ ರಿಯಾಯಿತಿ!

ಭಾರತದ ಮೊಬೈಲ್ ಮಾರುಕಟ್ಟೆಗೆ ಇತ್ತೀಚೆಷ್ಟೇ ಪರಿಚಯಗೊಂಡಿದ್ದ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ OnePlus 13 ಇದೀಗ ಭಾರೀ ರಿಯಾಯಿತಿಯಲ್ಲಿ ಖರೀದಿಗೆ ಲಭ್ಯವಾಗುತ್ತಿದೆ. ದೇಶದಲ್ಲಿ OnePlus 13 ಸ್ಮಾರ್ಟ್‌ಫೋನನ್ನು 69,999 ರೂ. ಬೆಲೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈಗ ಗ್ರಾಹಕರು ಇದನ್ನು ಭಾರೀ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದ್ದು, ಬ್ಯಾಂಕ್ ಕೊಡುಗೆಗಳು ಮತ್ತು ಬೆಲೆ ಕಡಿತದ ಮೂಲಕ ಒಟ್ಟಾರೆ 8,000 ರೂ. ಕ್ಕಿಂತ ಹೆಚ್ಚು ಹಣವನ್ನು ಉಳಿಸಲು ಸಾಧ್ಯವಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ OnePlus 13 ಫೋನ್ ಮೇಲೆ 5,000 ರೂ. ಕಡಿತದ ನಂತರ 64,814 ರೂ.ಗಳ ಹೊಸ ಬೆಲೆಯಲ್ಲಿ ಖರೀದಿಗೆ ಲಭ್ಯವಾಗುತ್ತಿದೆ. ಆಕ್ಸಿಸ್ ಬ್ಯಾಂಕ್ ಫ್ಲಿಪ್‌ಕಾರ್ಟ್ ಕ್ರೆಡಿಟ್ ಕಾರ್ಡ್ ಹೊಂದಿರುವ ಬಳಕೆದಾರರಿಗೆ 5% ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ, ಇದರಿಂದ OnePlus 13 ಸ್ಮಾರ್ಟ್‌ಫೋನ್ 61,600 ರೂ. ಕ್ಕಿಂತ ಕಡಿಮೆ ಬೆಲೆಗೆ ಖರೀದಿಗೆ ದೊರೆಯುತ್ತದೆ.

ಇಷ್ಟೇ ಅಲ್ಲದೆ, ಗ್ರಾಹಕರು ತಿಂಗಳಿಗೆ 2,279 ರೂ. ರಿಂದ ಪ್ರಾರಂಭವಾಗುವ ಇಎಂಐ ಆಯ್ಕೆಗಳನ್ನು ಬಳಸಬಹುದು. ಮತ್ತು ಹಳೆಯ ಸಾಧನವನ್ನು ಉತ್ತಮ ಬೆಲೆಗೆ ವಿನಿಮಯ ಮಾಡಿಕೊಳ್ಳುವ ಅವಕಾಶವೂ ಇದೆ (ಹಳೆಯ ಸಾಧನದ ಮೌಲ್ಯವು ಮಾದರಿ ಮತ್ತು ಕಾರ್ಯದ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿದೆ). ಹಾಗೂ ಸಾಧನವನ್ನು ಸುರಕ್ಷಿತವಾಗಿರಿಸಲು ಆಡ್-ಆನ್‌ಗಳನ್ನು ಖರೀದಿಸಬಹುದು, ಇದರಲ್ಲಿ 3,799 ರೂ.ಗೆ ಒನ್ ಅಸಿಸ್ಟ್‌ನಿಂದ ನೀಡುವ ಸಂಪೂರ್ಣ ಸ್ಮಾರ್ಟ್‌ಫೋನ್ ರಕ್ಷಣೆ ಮತ್ತು 999 ರೂ. ಗೆ ವಿಸ್ತೃತ ಖಾತರಿ ಸೇರಿವೆ. ಉತ್ತಮ ಕಾರ್ಯಕ್ಷಮತೆ, ಕ್ಯಾಮೆರಾ, ವಿನ್ಯಾಸ ಮತ್ತು ವೈಶಿಷ್ಟ್ಯಗಳೊಂದಿಗೆ OnePlus 13 ಫೋನಿನಲ್ಲಿ 4,500 ನಿಟ್‌ಗಳ ಗರಿಷ್ಠ ಹೊಳಪಿನೊಂದಿಗೆ ದೊಡ್ಡ QHD+ LTPO 3K ಪ್ಯಾನೆಲ್, 100W ಫಾಸ್ಟ್ ಚಾರ್ಜಿಂಗ್, ಟೆಲಿಫೋಟೋ ಕ್ಯಾಮೆರಾ ಸೆನ್ಸರ್ ಇರುವ ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು IP68 ಮತ್ತು IP69 ರೇಟಿಂಗ್‌ಗಳಂತಹ ವೈಶಿಷ್ಟ್ಯಗಳಿವೆ. ಇದರ ಸಂಪೂರ್ಣ ವೈಶಿಷ್ಟ್ಯಗಳು ಹೀಗಿವೆ.

OnePlus 13 ಫೋನ್ ಬೆಲೆ ಇಳಿಕೆ: ಫ್ಲಿಪ್‌ಕಾರ್ಟ್‌ನಲ್ಲಿ ಈಗ ಭಾರೀ ರಿಯಾಯಿತಿ!

OnePlus 13 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರಗಳು
OnePlus 13 ಸ್ಮಾರ್ಟ್‌ಫೋನ್ 6.82 ಇಂಚಿನ 2K+ LTPO AMOLED ಡಿಸ್ಪ್ಲೇ ಹೊಂದಿದೆ. ಇದರ ರೆಸಲ್ಯೂಶನ್ 3168 × 1440 ಪಿಕ್ಸೆಲ್‌ಗಳು, 120Hz ರಿಫ್ರೆಶ್ ದರ ಮತ್ತು 4500 ನಿಟ್ಸ್‌ ಬೆಳಕು ಬೆಂಬಲಿಸುತ್ತದೆ. ಈ ಡಿಸ್ಪ್ಲೇನಲ್ಲಿ ಅಲ್ಟ್ರಾಸಾನಿಕ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವಿದೆ.

ಪ್ರೊಸೆಸರ್ ಸಾಮರ್ಥ್ಯ
OnePlus 13 ಫೋನನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್‌ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಾಗುತ್ತದೆ, ಇದು 900MHz ಅಡ್ರಿನೊ 830 ಜಿಪಿಯು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 15 ಆಧಾರಿತ ಆಕ್ಸಿಜನ್ ಓಎಸ್‌ 15 ನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಸ್ಟೋರೇಜ್ ಆಯ್ಕೆಗಳು
OnePlus 13 ಸ್ಮಾರ್ಟ್‌ಫೋನ್‌ 12GB, 16GB ಮತ್ತು 24GB RAM ಆಯ್ಕೆಗಳನ್ನು ಹೊಂದಿದೆ, ಮತ್ತು 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳು ಲಭ್ಯವಿವೆ.

ಕ್ಯಾಮೆರಾ ಸೆಟಪ್
OnePlus 13 ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿರುವ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ OIS (ಆಪ್ಟಿಕಲ್ ಇಮೇಜ್ ಸ್ಟಾಬಿಲೈಸೇಶನ್) ಅನ್ನು ಬೆಂಬಲಿಸುತ್ತದೆ. ಜೊತೆಗೆ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೋನಿ ತೃತೀಯ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್
OnePlus 13 ಫೋನಿನಲ್ಲಿ 6000mAh ಸಾಮರ್ಥ್ಯದ ಬ್ಯಾಟರಿ ಇದೆ. ಇದನ್ನು 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮೂಲಕ ಚಾರ್ಜ್ ಮಾಡಬಹುದು, ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸಹ ಲಭ್ಯವಿದೆ.

Best Mobiles in India

English summary
OnePlus 13 Price Reduction: Enjoy a Discount of Over Rs 8,000 on Flipkart—Here’s How to Take Advantage of It.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+