ಖರೀದಿಗೆ ಕ್ಯೂ! OnePlus 13R ಬೆಲೆ ಇಳಿಕೆ.. 3000 ರಿಯಾಯಿತಿ.. 4000 ಎಕ್ಸ್‌ಚೇಂಜ್ ಆಫರ್.. ಹೊಸ ಬೆಲೆ ಎಷ್ಟು?
ಒನ್‌ಪ್ಲಸ್ ರೆಡ್ ರಶ್ ಡೇಸ್ ಸೇಲ್ ಮತ್ತೆ ಬಂದಿದೆ. ಸೊಗಸಾದ ಒನ್‌ಪ್ಲಸ್ ಫೋನ್‌ಗಳ ಖರೀದಿ ಮೇಲೆ ಬಂಪರ್ ಆಫರ್‌ಗಳನ್ನು ತಂದಿದೆ. ಹೌದು, ಒನ್‌ಪ್ಲಸ್ ತನ್ನ ಅಭಿಮಾನಿಗಳಿಗಾಗಿ ವಿಶೇಷ (OnePlus Red Rush Days Sale) ಮಾರಾಟವನ್ನು ನಡೆಸುತ್ತಿದೆ. ಈ ಮಾರಾಟವು ಏಪ್ರಿಲ್ 14 ರವರೆಗೆ (ಏಪ್ರಿಲ್ 8 ರಿಂದ ಪ್ರಾರಂಭ) ನಡೆಯಲಿದೆ. ಈ ಸೇಲ್‌ನಲ್ಲಿ ನೀವು ಒನ್‌ಪ್ಲಸ್ 13R (OnePlus 13R) ಮೊಬೈಲ್ ಮೇಲೆ ಭಾರೀ ರಿಯಾಯಿತಿ ಪಡೆಯಬಹುದು. ಜೊತೆಗೆ ವಿಶೇಷ ರಿಯಾಯಿತಿಗಳು, ಬ್ಯಾಂಕ್ ಆಫರ್ ಮತ್ತು ನೋ ಕಾಸ್ಟ್ ಇಎಂಐ ಆಯ್ಕೆಗಳನ್ನು ನೀಡಲಾಗುತ್ತಿದೆ.
ಒನ್‌ಪ್ಲಸ್ 13R ಸ್ಮಾರ್ಟ್‌ಫೋನ್ ಎರಡು ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ. ಈ ಫೋನಿನ ವಿಶೇಷತೆಗಳೆಂದರೆ, ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾದೆ. ಈ ಮೊಬೈಲ್ 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಜೊತೆಗೆ 12GB RAM + 256GB ಸ್ಟೋರೇಜ್, 6000mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಸ್ತುತ, ಒನ್‌ಪ್ಲಸ್ ರೆಡ್ ರಶ್ ಡೇಸ್ ಮಾರಾಟದಲ್ಲಿ ಬಿಡಗಡೆ ಬೆಲೆಗಿಂತ ಅಗ್ಗವಾಗಿ ಮಾರಾಟವಾಗುತ್ತಿದೆ. ಈ ಫೋನಿನ ಮೂಲ ಬೆಲೆ, ಆಫರ್ ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ಒನ್‌ಪ್ಲಸ್ 13R ಹೊಸ ಬೆಲೆ ಮತ್ತು ಆಫರ್
ಒನ್‌ಪ್ಲಸ್ 13R ಫೋನ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗಲಿದೆ. ಈ ಮೊಬೈಲ್‌ನ 12GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 42,999 ರೂ. ಆಗಿದೆ. 16GB RAM + 512GB ಸ್ಟೋರೇಜ್ ಆಯ್ಕೆಯು 49,999 ರೂ.ಗೆ ಮಾರಾಟವಾಗುತ್ತಿದೆ. ಪ್ರಸ್ತುತ, ಒನ್‌ಪ್ಲಸ್ ರೆಡ್ ರಶ್ ಡೇಸ್ ಸೇಲ್‌ನಲ್ಲಿ (OnePlus Red Rush Days Sale) ಈ ಫೋನ್ ಖರೀದಿಸಿದರೆ, 3000 ರೂ.ಗಳ ತಕ್ಷಣದ ಬ್ಯಾಂಕ್ ರಿಯಾಯಿತಿ ನೀಡಲಾಗುತ್ತಿದೆ.
ಇನ್ನು ಈ ಫೋನಿನ 16GB RAM + 512GB ಸ್ಟೋರೇಜ್ ಆಯ್ಕೆಯ ಬೆಲೆಯನ್ನು 2,000 ರೂ. ಇಳಿಕೆ ಮಾಡಲಾಗಿದೆ. ಇದರೊಂದಿಗೆ 9 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಮತ್ತು 4,000 ರೂಪಾಯಿಗಳ ಎಕ್ಸ್‌ಚೇಂಜ್ ಬೋನಸ್ ಸಹ ಪಡೆಯಬಹುದು. ಈ ಫೋನ್ ನೆಬ್ಯುಲಾ ನಾಯ್ರ್ ಮತ್ತು ಆಸ್ಟ್ರಲ್ ಟ್ರೈಲ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಒನ್‌ಪ್ಲಸ್ ವೆಬ್‌ಸೈಟ್ ಮತ್ತು ಅಮೆಜಾನ್ ಹೊರತುಪಡಿಸಿ, ಕ್ರೋಮಾ, ವಿಜಯ್ ಸೇಲ್ಸ್, ರಿಲಯನ್ಸ್ ಡಿಜಿಟಲ್ ಮತ್ತು ಇತರೆ ಅಂಗಡಿಗಳಲ್ಲಿಯೂ ಈ ಮೊಬೈಲ್ ಲಭ್ಯವಿದೆ.

ಒನ್‌ಪ್ಲಸ್ 13R ವೈಶಿಷ್ಟ್ಯಗಳು
ಒನ್‌ಪ್ಲಸ್ 13R ಸ್ಮಾರ್ಟ್‌ಫೋನ್ 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 2780 × 1264 ಪಿಕ್ಸೆಲ್ ರೆಸಲ್ಯೂಶನ್ ಮತ್ತು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಈ ಡಿಸ್ಪ್ಲೇಯು ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಪಡೆದಿದೆ. ಈ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ. ಗ್ರಾಫಿಕ್ಸ್‌ಗಾಗಿ, ಇದು ಅಡ್ರಿನೊ 750 ಜಿಪಿಯು ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ಆಕ್ಸಿಜನ್ ಓಎಸ್ 15.0 ಜೊತೆಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 12GB RAM ಮತ್ತು16GB RAM ಹೊಂದಿದೆ. 256GB ಮತ್ತು 512GB ಸ್ಟೋರೇಜ್ ಆಯ್ಕೆ ಹೊಂದಿದೆ.
ಒನ್‌ಪ್ಲಸ್ 13R ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್ಇಡಿ ಫ್ಲಾಶ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ. ಈ ಒನ್‌ಪ್ಲಸ್ ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.


Click it and Unblock the Notifications








