ಖುಷಿ ಸುದ್ದಿ! OnePlus Nord 4 ಬೆಲೆ ಭಾರೀ ಇಳಿಕೆ.. 5,000 ಡಿಸ್ಕೌಂಟ್.. ಇಲ್ಲಿದೆ ಹೊಸ ಬೆಲೆ
ದೀಪಾವಳಿಗೆ ಹೊಸ ಮೊಬೈಲ್ ಖರೀದಿಸಲು ಬಯಸುವವರಿಗೆ ಒಳ್ಳೆಯ ಸುದ್ದಿ ಇದೆ. ಅದರಲ್ಲೂ ಒನ್‌ಪ್ಲಸ್ ಪ್ರಿಯರಿಗೆ ಇದಕ್ಕಿಂತ ಖುಷಿ ಸುದ್ದಿ ಮತ್ತೊಂದಿಲ್ಲ. ಹೌದು, ಕೆಲವು ವಾರಗಳ ಹಿಂದೆ ಬಿಡುಗಡೆಯಾದ ಒನ್‌ಪ್ಲಸ್ ನಾರ್ಡ್ 4 (OnePlus Nord 4) ಭಾರೀ ರಿಯಾಯಿತಿಯೊಂದಿಗೆ ಲಭ್ಯವಿದೆ. ನೀವು, ಬರೋಬ್ಬರಿ 5,000 ರೂ.ಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಜೊತೆಗೆ, ಇಎಂಐ ಆಯ್ಕೆ ಮತ್ತು ಎಕ್ಸ್‌ಚೇಂಜ್ ಆಫರ್‌ಗಳು ಸಹ ಸಿಗುತ್ತದೆ. ಬನ್ನಿ, ಕಂಪನಿ ಯಾವೆಲ್ಲಾ ಆಫರ್‌ಗಳನ್ನು ನೀಡುತ್ತಿದೆ ಮತ್ತು ಈ ಫೋನಿನ ವಿಶೇಷತೆಗಳೇನು? ತಿಳಿಯೋಣ.
ಒನ್‌ಪ್ಲಸ್ ಕಂಪನಿಯ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಭಾರೀ ಡಿಮ್ಯಾಂಡ್ ಇದೆ. ಮೊಬೈಲ್ ಪ್ರಿಯರು ಈ ಫೋನ್‌ಗಳನ್ನು ಹೆಚ್ಚು ಖರೀದಿಸುತ್ತಾರೆ. ಪ್ರಸ್ತುತ, ದೀಪಾವಳಿ ಪ್ರಯುಕ್ತ ಕಂಪನಿಯು ಒನ್‌ಪ್ಲಸ್ ನಾರ್ಡ್ 4 ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7+ ಜೆನ್ 3 ಪ್ರೊಸೆಸರ್ ಹೊಂದಿದೆ. ಇದು ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಹೊಂದಿದೆ. ಜೊತೆಗೆ, 6.74 ಇಂಚಿನ ಡಿಸ್ಪ್ಲೇ, 5500mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಒನ್‌ಪ್ಲಸ್ ನಾರ್ಡ್ 4 ಬೆಲೆ ಮತ್ತು ಆಫರ್‌ಗಳು
ಒನ್‌ಪ್ಲಸ್ ನಾರ್ಡ್ 4 ಫೋನನ್ನು ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 29,999 ರೂ. ಇದೆ. 8GB RAM + 256GB ಸ್ಟೋರೇಜ್ ರೂಪಾಂತರವನ್ನು 32,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. 12GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 35,999 ರೂ. ಆಗಿದೆ. ಈ ಫೋನ್ ಮರ್ಕ್ಯುರಿಯಲ್ ಸಿಲ್ವರ್, ಅಬ್ಸಿಡಿಯನ್ ಮಿಡ್‌ನೈಟ್ ಮತ್ತು ಓಯಸಿಸ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ.
5,000 ರೂ.ಗಳ ವರೆಗೆ ಡಿಸ್ಕೌಂಟ್!
ಒನ್‌ಪ್ಲಸ್ ನಾರ್ಡ್ 4 ಖರೀದಿ ಮೇಲೆ 3000 ರೂ.ಗಳ ಡಿಸ್ಕೌಂಟ್ ನೀಡಲಾಗುತ್ತಿದೆ. ಜೊತೆಗೆ, 2000 ರೂ.ಗಳ ಬ್ಯಾಂಕ್ ಆಫರ್ ನೀಡಲಾಗುತ್ತಿದೆ. ಒಟ್ಟಾರೆ ನಿಮಗೆ 5000 ರೂ.ಗಳ ವರೆಗೆ ರಿಯಾಯಿತಿ ಸಿಗುತ್ತದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳಲ್ಲಿ, 9 ತಿಂಗಳ ಅವಧಿಯೊಂದಿಗೆ ನೋ ಕಾಸ್ಟ್ ಇಎಂಐ ಸೌಲಭ್ಯವೂ ಇದೆ. ಪ್ರಸ್ತುತ, ಈ ಆಫರ್‌ಗಳನ್ನು ಒನ್‌ಪ್ಲಸ್, ಅಮೆಜಾನ್, ಒನ್‌ಪ್ಲಸ್ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳು ಮತ್ತು ಇತರೆ ಸ್ಟೋರ್‌ಗಳಲ್ಲಿ ಪಡೆಯಬಹುದು.
ಒನ್‌ಪ್ಲಸ್ ನಾರ್ಡ್ 4 ಫೋನಿ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒನ್‌ಪ್ಲಸ್ ನಾರ್ಡ್ 4 5G ಮೊಬೈಲ್ 6.74 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು 1.5K ರೆಸಲ್ಯೂಶನ್, 120Hz ರಿಫ್ರೆಶ್ ದರ, ಸೂಪರ್ ಫ್ಲೂಯಿಡ್ ಅಮೋಲೆಡ್ ಪ್ಯಾನಲ್, 2150 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಈ ಒನ್‌ಪ್ಲಸ್ ಫೋನನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಪ್ಲಸ್ ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಈ ಪ್ರೊಸೆಸರ್ ಅನ್ನು 4 ನ್ಯಾನೋಮೀಟರ್‌ನಲ್ಲಿ ತಯಾರಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಓಎಸ್ ಆಧಾರಿತ OxygenOS 14.0 ಕಸ್ಟಮ್ ಸ್ಕಿನ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆ
ಒನ್‌ಪ್ಲಸ್ ನಾರ್ಡ್ 4 5G ಫೋನ್ 8GB + 12GB UFS 4.0 RAM, 128GB UFS 3.1 + 256GB UFS 4.0 ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಫೋನ್ ವರ್ಚುವಲ್ RAM ವೈಶಿಷ್ಟ್ಯವನ್ನು ಸಹ ಹೊಂದಿದೆ.
ಈ ಸುದ್ದಿ ಓದಿದ್ದೀರಾ?: ದೀಪಾವಳಿ ಉಡುಗೊರೆ! Motorola 5G ಫೋನ್ ಬೆಲೆ ಇಳಿಕೆ; 50MP ಸೆಲ್ಫಿ ಕ್ಯಾಮೆರಾ.. ಬರೋಬ್ಬರಿ 5000 ಡಿಸ್ಕೌಂಟ್ ಘೋಷಣೆ
ಕ್ಯಾಮೆರಾ ಸೆಟಪ್
ಈ ಒನ್‌ಪ್ಲಸ್ 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಸೋನಿ LTY-600 OIS ಮತ್ತು EIS ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ಸೋನಿ ಅಲ್ಟ್ರಾವೈಡ್ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಒನ್‌ಪ್ಲಸ್ ನಾರ್ಡ್ 4 5G ಮೊಬೈಲ್ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 100W ಸೂಪರ್‌ವೂಕ್ ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಈ ಫೋನ್ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, 4G, ಬ್ಲೂಟೂತ್ 5.4, ವೈ ಫೈ 6, ಅಲರ್ಟ್ ಸ್ಲೈಡರ್, ಯುಎಸ್‌ಬಿ ಟೈಪ್ ಸಿ 2.0, ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








