OnePlus Nord CE 3 5G ಬೆಲೆ ಭಾರೀ ಕುಸಿತ: 9,000ಕ್ಕಿಂತ ಅಗ್ಗ.. ಹೊಸ ಬೆಲೆ?
ಒನ್‌ಪ್ಲಸ್ ಪ್ರೇಮಿಗಳಿಗೆ ಒಳ್ಳೆಯ ಸುದ್ದಿ ಇದೆ. ನೀವು ಒನ್‌ಪ್ಲಸ್ ಕಂಪನಿಯ 5G ಫೋನನ್ನು ಖರೀದಿಸಲು ಬಯಸಿದರೆ ಭರ್ಜರಿ ರಿಯಾಯಿತಿ ಸಿಗುತ್ತದೆ. ನಿಮ್ಮ ಬಜೆಟ್ 20,000 ರೂ.ಗಿಂತ ಕಡಿಮೆಯಿದ್ದರೆ, ಈ ಮಾಹಿತಿ ನಿಮಗೆ ತುಂಬಾ ಉಪಯುಕ್ತವಾಗಿದೆ. ಹೌದು, ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್-2024 ನಲ್ಲಿ (Amazon Great Indian Festival-2024) ಒನ್‌ಪ್ಲಸ್ ನಾರ್ಡ್ CE 3 5G (OnePlus Nord CE 3 5G) ಮೊಬೈಲ್ ಖರೀದಿ ಮೇಲೆ 9,000 ರೂ. ರಿಯಾಯಿತಿ ಲಭ್ಯವಿದೆ. ಇದರೊಂದಿಗೆ ಬ್ಯಾಂಕ್ ಆಫರ್, ಎಕ್ಸ್ ಚೇಂಜ್ ಮತ್ತು ಇಎಂಐನಂತಹ ಆಯ್ಕೆಗಳೂ ಲಭ್ಯವಿದೆ.
ಒನ್‌ಪ್ಲಸ್ ನಾರ್ಡ್ CE 3 5G ಫೋನನ್ನು ಕಳೆದ ವರ್ಷ ಜುಲೈನಲ್ಲಿ ಬಿಡುಗಡೆ ಮಾಡಲಾಯಿತು. ಇದು ವಿಭಿನ್ನ ವಿನ್ಯಾಸ, ಕಾರ್ಯಕ್ಷಮತೆ ಮತ್ತು ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಬಜೆಟ್ ಸ್ನೇಹಿ 5G ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿರುವವರಿಗೆ ಉತ್ತಮ ಆಯ್ಕೆಯಾಗಿದೆ. ಇದು 6.7 ಇಂಚಿನ AMOLED ಡಿಸ್ಪ್ಲೇ, 50 ಮೆಗಾಪಿಕ್ಸೆಲ್ ಕ್ಯಾಮೆರಾ, 80W ವೇಗದ ಚಾರ್ಜಿಂಗ್ ಮತ್ತು ಸ್ನಾಪ್ಡ್ರಾಗನ್ ಪ್ರೊಸೆಸರ್ ಅನ್ನು ಹೊಂದಿದೆ. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ಆಫರ್‌ಗಳನ್ನು ತಿಳಿಯೋಣ.

ಒನ್‌ಪ್ಲಸ್ ನಾರ್ಡ್ CE 3 5G ಫೋನಿನ ಬೆಲೆ ಮತ್ತು ಆಫರ್‌ಗಳು
ಒನ್‌ಪ್ಲಸ್ ನಾರ್ಡ್ CE 3 5G ಅನ್ನು 9,000 ರೂ.ಗಳ ರಿಯಾಯಿತಿಯೊಂದಿಗೆ ಕೇವಲ 17,999 ರೂ.ಗೆ ಖರೀದಿಸಬಹುದು. ಇದು ಫೋನಿನ 8GB RAM + 128GB ಸ್ಟೋರೇಜ್ ಬೆಲೆಯಾಗಿದೆ. ಬಿಡುಗಡೆಯ ಸಮಯದಲ್ಲಿ ಇದರ ಬೆಲೆ 26,999 ರೂ. ಇತ್ತು. ನೀವು, ಅಮೇಜಾನ್‌ನಲ್ಲಿ (Amazon Great Indian Festival-2024) ಈ ಮೊಬೈಲ್ ಅನ್ನು ನೀಲಿ ಮತ್ತು ಬೂದು ಬಣ್ಣಗಳಲ್ಲಿ ಖರೀದಿಸಬಹುದು.
ಕಂಪನಿಯು ಸಂಪೂರ್ಣ ಪಾವತಿಯ ಮೇಲೆ 1,250 ರೂ.ಗಳ ರಿಯಾಯಿತಿಯನ್ನು ಮತ್ತು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಎಎಂಐ ಮೇಲೆ 1,500 ರೂ.ಗಳ ರಿಯಾಯಿತಿಯನ್ನು ಸಹ ನೀಡುತ್ತಿದೆ. ಇದರಿಂದ ಬೆಲೆ 16,749 ಅಥವಾ 16,499 ರೂ.ಗೆ ಇಳಿಕೆಯಾಗಲಿದೆ. ಎಕ್ಸ್‌ಚೇಂಜ್ ಆಫರ್ ಬಗ್ಗೆ ಹೇಳುವುದಾದರೆ, ನೀವು ಹಳೆಯ ಮೊಬೈಲ್‌ನಲ್ಲಿ 17,050 ರೂ.ವರೆಗೆ ರಿಯಾಯಿತಿ ಪಡೆಯಬಹುದು.
ಒನ್‌ಪ್ಲಸ್ ನಾರ್ಡ್ CE 3 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಒನ್‌ಪ್ಲಸ್ ನಾರ್ಡ್ CE 3 5G ಸ್ಮಾರ್ಟ್‌ಫೋನ್ 6.7 ಇಂಚಿನ AMOLED ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು ಪೂರ್ಣ ಹೆಚ್‌ಡಿ 2412 x 1080 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಇದು ಮಾತ್ರವಲ್ಲ, HDR10+, sRGB ಮತ್ತು 10 ಬಿಟ್ ಕಲರ್ ಡೆಪ್ತ್‌ಗೆ ಸಹ ಬೆಂಬಲವಿದೆ.
ಪ್ರೊಸೆಸರ್: ಒನ್‌ಪ್ಲಸ್ ನಾರ್ಡ್ CE 3 5G ಮೊಬೈಲ್ ಸ್ನಾಪ್‌ಡ್ರಾಗನ್ 782G SoC ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಫೋನನ್ನು ಕಂಪನಿಯ OxygenOS 13 ಆಧಾರಿತ Android 13.1 ನಲ್ಲಿ ಪರಿಚಯಿಸಲಾಗಿದೆ. ಇದು ಆಪರೇಟಿಂಗ್ ಸಿಸ್ಟಮ್ ನವೀಕರಣಗಳು ಮತ್ತು ಭದ್ರತಾ ನವೀಕರಣಗಳನ್ನು ಸಹ ಒದಗಿಸುತ್ತದೆ.
ಕ್ಯಾಮೆರಾ: ಕ್ಯಾಮೆರಾ ಸೆಟಪ್ ಬಗ್ಗೆ ಹೇಳುವುದಾದರೆ, ಈ ಸ್ಮಾರ್ಟ್‌ಫೋನ್ ಹಿಂಭಾಗದ ಪ್ಯಾನೆಲ್ 50 ಮೆಗಾಪಿಕ್ಸೆಲ್ ಪ್ರಾಥಮಿಕ Sony IMX890 OIS ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ Sony IMX355 ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ: ಒನ್‌ಪ್ಲಸ್ ನಾರ್ಡ್ CE 3 5G ಮೊಬೈಲ್ ದೊಡ್ಡ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು 80W ವೇಗದ ವೈರ್ಡ್ ಚಾರ್ಜಿಂಗ್ ಸೌಲಭ್ಯವಿದೆ.
ಕನೆಕ್ಟಿವಿಟಿ ಆಯ್ಕೆಗಳು: ಒನ್‌ಪ್ಲಸ್ ನಾರ್ಡ್ CE 3 5G ಫೋನ್ ವೈಫೈ, ಬ್ಲೂಟೂತ್ 5.2, GPS, NFC ಮತ್ತು ಇನ್ಫ್ರಾರೆಡ್ ಪೋರ್ಟ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








