Home
Deal of the day

OnePlus: 15,000ಕ್ಕೆ 5G ಫೋನ್! 4,315 ಡಿಸ್ಕೌಂಟ್.. 108MP ಕ್ಯಾಮೆರಾ.. ಖರೀದಿ ಎಲ್ಲಿ?

ದೀಪಾವಳಿ ಹಬ್ಬದ ಪ್ರಯುಕ್ತ ಫ್ಲಿಪ್‌ಕಾರ್ಟ್‌ ಸ್ಮಾರ್ಟ್‌ಫೋನ್ ಪ್ರಿಯರಿಗೆ ಬಂಪರ್ ಆಫರ್‌ಗಳನ್ನು ನೀಡುತ್ತಿದೆ. ಹಲವು ಪ್ರಸಿದ್ಧ ಕಂಪನಿಗಳ ಮೊಬೈಲ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ನೀವು, ಒನ್‌ಪ್ಲಸ್ ಸಂಸ್ಥೆಯ ಒನ್‌ಪ್ಲಸ್ ನಾರ್ಡ್‌ CE 3 ಲೈಟ್‌ 5G (OnePlus Nord CE 3 Lite 5G) ಅನ್ನು ಕೇವಲ 15,000 ರೂ. ಬಜೆಟ್‌ನಲ್ಲಿ ಖರೀದಿಸಬಹುದು. ಬ್ಯಾಂಕ್ ಆಫರ್‌ಗಳು, ಎಕ್ಸ್‌ಚೇಂಜ್ ಆಫರ್‌ ಮತ್ತು ಇಎಂಐ ಆಯ್ಕೆಯೂ ಸಿಗುತ್ತದೆ. ಈ ಫೋನಿಗೆ ಎಷ್ಟು ರಿಯಾಯಿತಿ ಲಭ್ಯವಿದೆ? ಫೀಚರ್ಸ್‌ ಹೇಗಿವೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಒನ್‌ಪ್ಲಸ್ ನಾರ್ಡ್‌ CE 3 ಲೈಟ್‌ 5G ಕಡಿಮೆ ಬೆಲೆಯಲ್ಲಿ ಸ್ಟೈಲಿಶ್ ಲುಕ್ ಮತ್ತು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 5G ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಇದು 6.72 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಮೊಬೈಲ್ 108 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ, 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಹೊಂದಿದೆ. ಇದಲ್ಲದೆ, 5000mAh ಬ್ಯಾಟರಿ ಮತ್ತು 67W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

OnePlus: ಈ 5G ಫೋನ್ ಬೆಲೆ ಇಳಿಕೆ; 4,315 ಡಿಸ್ಕೌಂಟ್.. ಹೊಸ ಬೆಲೆ ಎಷ್ಟು?

ಒನ್‌ಪ್ಲಸ್ ನಾರ್ಡ್‌ CE 3 ಲೈಟ್‌ 5G ಹೊಸ ಬೆಲೆ ಮತ್ತು ಆಫರ್‌ಗಳು

ಒನ್‌ಪ್ಲಸ್ ನಾರ್ಡ್‌ CE 4 ಲೈಟ್‌ 5G ಬೆಲೆ = 19,999 ರೂ.
ಆಫರ್‌ ಬೆಲೆ = 15,684 ರೂ.
ರಿಯಾಯಿತಿ = 4,315 ರೂ. (ಶೇ.21)

ಒನ್‌ಪ್ಲಸ್ ನಾರ್ಡ್‌ CE 4 ಲೈಟ್‌ 5G ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 19,999 ರೂ. ಆಗಿದೆ. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 15,684 ರೂ.ಗಳ ಬೆಲೆಗೆ ಲಭ್ಯವಿದೆ. ನೀವು ಈ, ಒನ್‌ಪ್ಲಸ್‌ ಫೋನನ್ನು 4,315 ರೂ. (ಶೇ.21) ಡಿಸ್ಕೌಂಟ್‌ನೊಂದಿಗೆ ಖರೀದಿಸಬಹುದು. ಇದಕ್ಕೆ ಬ್ಯಾಂಕ್ ಕಾರ್ಡ್‌ಗಳ ಅಗತ್ಯವಿಲ್ಲ. ನೀವು, ಲೈಮ್ ಮತ್ತು ಗ್ರೇ ಬಣ್ಣಗಳಲ್ಲಿ ಈ ಫೋನ್ ಕೊಳ್ಳಬಹುದು.

ಒನ್‌ಪ್ಲಸ್ ನಾರ್ಡ್‌ CE 3 ಲೈಟ್‌ 5G ಫೀಚರ್ಸ್‌

ಡಿಸ್ಪ್ಲೇ ವಿವರ

ಒನ್‌ಪ್ಲಸ್ ನಾರ್ಡ್‌ CE 3 ಲೈಟ್‌ 5G ಫೋನ್ 6.72 ಇಂಚಿನ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 2400 x 1080 ಪಿಕ್ಸೆಲ್‌ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಡಿಸ್ಪ್ಲೇಯು 240Hz ಸ್ಪರ್ಶ ಮಾದರಿ ದರ ಮತ್ತು 391 ppi ಪಿಕ್ಸೆಲ್ ಸಾಂದ್ರತೆಯೊಂದಿಗೆ ಬರುತ್ತದೆ. ಇದು ಐ ಕಂಫರ್ಟ್ ಡಿಸ್ಪ್ಲೇಯಾಗಿದ್ದು, P3 ಕಲರ್ ಕಾಮೆಟ್ ಲಭ್ಯವಿದೆ.

ಪ್ರೊಸೆಸರ್ ಸಾಮರ್ಥ್ಯ

ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 5G ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಆಪರೇಟಿಂಗ್ ಸಿಸ್ಟಮ್ (OS) ಮತ್ತು ಒನ್‌ಪ್ಲಸ್‌ನ OxygenOS ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಗೇಮಿಂಗ್ ಔಟ್‌ಪುಟ್‌ನೊಂದಿಗೆ ಅಡ್ರಿನೊ 619 ಜಿಪಿಯು (Adreno 619 GPU) ಲಭ್ಯವಿದೆ.

ಸ್ಟೋರೇಜ್ ಆಯ್ಕೆ

ಒನ್‌ಪ್ಲಸ್ ನಾರ್ಡ್‌ CE 3 ಲೈಟ್‌ ಮೊಬೈಲ್ 8GB RAM + 128GB ಸ್ಟೋರೇಜ್ ಮತ್ತು 8GB RAM + 256GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಲಭ್ಯವಿದೆ. ಹೈಬ್ರಿಡ್ ಸಿಮ್ ಸ್ಲಾಟ್ (ಹೈಬ್ರಿಡ್ ಸ್ಲಾಟ್) ಪ್ಯಾಕ್ ಆಗಿದೆ. 3.5 ಎಂಎಂದ ಹೆಡ್‌ಫೋನ್ ಜ್ಯಾಕ್ ಲಭ್ಯವಿದೆ.

ಕ್ಯಾಮೆರಾ ಸೆಟಪ್

ಒನ್‌ಪ್ಲಸ್ ನಾರ್ಡ್‌ CE 3 ಲೈಟ್‌ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಸ್ಯಾಮ್‌ಸಂಗ್ ISOCELL HM6 ನೊಂದಿಗೆ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ಅಸಿಸ್ಟ್ ಕ್ಯಾಮರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಇದೆ. ಸೆಲ್ಪಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಹೊಂದಿದೆ. ಇದು 1080p ವಿಡಿಯೋ ರೆಕಾರ್ಡಿಂಗ್ ಮತ್ತು 720p ಸ್ಲೋ ಮೋಷನ್ ರೆಕಾರ್ಡಿಂಗ್‌ನೊಂದಿಗೆ ಬರುತ್ತದೆ. ಮತ್ತು 6x ಝೂಮಿಂಗ್ ಬೆಂಬಲ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಒನ್‌ಪ್ಲಸ್ ನಾರ್ಡ್‌ CE 3 ಲೈಟ್‌ ಅನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದು 67W SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಈ ಫೋನ್ ಸ್ಟೀರಿಯೋ ಸ್ಪೀಕರ್‌ಗಳು ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ.

Best Mobiles in India

English summary
OnePlus Nord CE 3 Lite 5G available on huge discount in flipkart sale: check offers, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+