ಯಾರೂ ನಿರೀಕ್ಷಿಸಿರಲಿಲ್ಲ..! OnePlus Nord CE 4 ಫೋನಿಗೆ ಭಾರೀ ಡಿಸ್ಕೌಂಟ್.. ಕಮ್ಮಿ ಬೆಲೆಗೆ ನಿಮ್ಮದಾಗುತ್ತೆ!
ಒನ್‌ಪ್ಲಸ್ ಪ್ರಿಯರು ಈ ಆಫರ್ ಮಿಸ್ ಮಾಡಿಕೊಳ್ಳಬೇಡಿ! ನೀವು 20 ಸಾವಿರ ರೂ.ಗಳ ಒಳಗೆ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ಇಲ್ಲಿದೆ ಸೂಪರ್ ಅವಕಾಶ. ಕಡಿಮೆ ಬೆಲೆಯೊಂದಿಗೆ 3,000 ರೂ.ಗಳ ರಿಯಾಯಿತಿ ಸಹ ಲಭ್ಯವಿದೆ. ಹೌದು, ಒನ್‌ಪ್ಲಸ್ ನಾರ್ಡ್ CE4 5G (OnePlus Nord CE4 5G) ಫೋನಿನ ಬೆಲೆ ಭಾರೀ ಇಳಿಕೆಯಾಗಿದೆ. ರಿಯಾಯಿತಿಯ ಜೊತೆಗೆ ನೋ ಕಾಸ್ಟ್ ಇಎಂಐ ಮತ್ತು ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ. ಬನ್ನಿ, ಈ ಒನ್‌ಪ್ಲಸ್ ಫೋನಿನ MRP ಬೆಲೆ, ರಿಯಾಯಿತಿ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಒನ್‌ಪ್ಲಸ್ ನಾರ್ಡ್ CE4 5G ಮೊಬೈಲ್ ಭಾರತದಲ್ಲಿ ಬಿಡುಗಡೆಯಾಗಿತ್ತು. ಈ ಮೊಬೈಲ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.7 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 5500mAh ದೊಡ್ಡ ಬ್ಯಾಟರಿ ಮತ್ತು 100W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯುತ್ತಮ ಫೀಚರ್ಸ್ ಒಳಗೊಂಡಿದೆ. ಪ್ರಸ್ತುತ, ಈ ಫೋ ನ್ ಅಗ್ಗದ ಬೆಲೆಗೆ ನಿಮ್ಮದಾಗಲಿ!

ಒನ್‌ಪ್ಲಸ್ ನಾರ್ಡ್ CE4 5G ಹೊಸ ಬೆಲೆ
ಒನ್‌ಪ್ಲಸ್ ನಾರ್ಡ್ CE4 5G ಮೊಬೈಲ್ ಅಮೆಜಾನ್‌ನಲ್ಲಿ ಆಕರ್ಷಕ ರಿಯಾಯಿತಿಯೊಂದಿಗೆ ಲಭ್ಯವಿದೆ. ಈ ಫೋನಿನ ಬಿಡುಗಡೆ ಬೆಲೆ 24,999 ರೂ. ಆಗಿದೆ. ಆದರೆ, ಪ್ರಸ್ತುತ ಇದರ ಬೆಲೆ 3,000 ರೂ. ಕಡಿಮೆ ಮಾಡಲಾಗಿದೆ. ನೀವು, ಕೇವಲ 21,999 ರೂ.ಗೆ ಪಟ್ಟಿ ಮಾಡಲಾಗಿದೆ. ಇದರೊಂದಿಗೆ ಕೆಲವು ಆಫರ್‌ಗಳಿವೆ. ಬ್ಯಾಂಕ್ ರಿಯಾಯಿತಿ ಮತ್ತು ಎಕ್ಸ್‌ಚೇಂಜ್ ಆಫರ್‌ನೊಂದಿಗೆ ಇದರ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ. ನೀವು ಎಚ್‌ಡಿಎಫ್‌ಸಿ ಅಥವಾ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ, ಹೆಚ್ಚುವರಿ ರಿಯಾಯಿತಿ ಸಿಗುತ್ತದೆ. ಇದಲ್ಲದೆ, ಎಕ್ಸ್‌ಚೇಂಜ್ ಆಫರ್ ಮೂಲಕ ನೀವು ಕೇವಲ 19,499 ರೂ.ಗೆ ಒನ್‌ಪ್ಲಸ್ ನಾರ್ಡ್ CE4 5G ಖರೀದಿಸಬಹುದು.
ಒನ್‌ಪ್ಲಸ್ ನಾರ್ಡ್ CE4 5G ವೈಶಿಷ್ಟ್ಯಗಳು
ದೊಡ್ಡ ಡಿಸ್ಪ್ಲೇ
ಒನ್‌ಪ್ಲಸ್ ನಾರ್ಡ್ CE4 5G ಸ್ಮಾರ್ಟ್‌ಫೋನ್ 6.7 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಫುಲ್ ಎಚ್‌ಡಿ ಪ್ಲಸ್ ಪಂಚ್ ಹೋಲ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2412 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಹಾಗೆಯೇ 120Hz ರಿಫ್ರೆಶ್ ದರ ಮತ್ತು 2160Hz PWM ಡಿಮ್ಮಿಂಗ್ ಬೆಂಬಲ ಹೊಂದಿದೆ.
ಕ್ವಾಲ್ಕಾಮ್ ಪ್ರೊಸೆಸರ್
ಒನ್‌ಪ್ಲಸ್ ನಾರ್ಡ್ CE4 5G ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7 ಜೆನ್ 3 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಆಧಾರಿತ Oxygen ಓಎಸ್ 14 ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ 8GB RAM ಮತ್ತು 8GB ವಿಸ್ತರಿಸಬಹುದಾದ RAM ಹೊಂದಿದೆ. ಜೊತೆಗೆ 256GB ಸ್ಟೋರಜ್ ಆಯ್ಕೆ ಒಳಗೊಂಡಿದೆ.

ಡ್ಯುಯಲ್ ರಿಯರ್ ಕ್ಯಾಮೆರಾ
ಒನ್‌ಪ್ಲಸ್ ನಾರ್ಡ್ CE4 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ದ್ವಿತೀಯ (ಅಲ್ಟ್ರಾ ವೈಡ್ ಲೆನ್ಸ್) ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬಿಗ್ ಬ್ಯಾಟರಿ
ಒನ್‌ಪ್ಲಸ್ ನಾರ್ಡ್ CE4 5G ಸ್ಮಾರ್ಟ್‌ಫೋನ್ 5,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 100W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ ಬ್ಲೂಟೂತ್ 5.4 ಮತ್ತು 5GHz ವೈ-ಫೈ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.


Click it and Unblock the Notifications








