Home
Deal of the day

ಹೊಸ ವರ್ಷಕ್ಕೆ ಧಮಾಕಾ ಆಫರ್! 3000 ಡಿಸ್ಕೌಂಟ್.. ಇಯರ್‌ಬಡ್‌ ಉಚಿತ.. ಕಡಿಮೆ ಬೆಲೆಗೆ OnePlus ಫೋನ್

ಒನ್‌ಪ್ಲಸ್ ಪ್ರಿಯರಿಗೆ ಇಲ್ಲಿದೆ ಕ್ರಿಸ್ಮಸ್‌ ಉಡುಗೊರೆ! 3,000 ರೂ. ಡಿಸ್ಕೌಂಟ್.. ಜೊತೆಗೆ ಒನ್‌ಪ್ಲಸ್ ಬಡ್ಸ್ ಉಚಿತ. ಹೌದು, ಕಂಪನಿಯು ಒನ್‌ಪ್ಲಸ್ ನಾರ್ಡ್‌ CE4 5G (OnePlus Nord CE4 5G) ಫೋನಿನ ಬೆಲೆಯನ್ನು ಇಳಿಕೆ ಮಾಡಿದೆ. ನೀವು, ಕಡಿಮೆ ಬಜೆಟ್‌ನಲ್ಲೊ ಹೊಸ ಮೊಬೈಲ್ ಖರೀದಿಸಲು ಬಯಸಿದರೆ, ಇದು ಉತ್ತಮ ಆಯ್ಕೆಯಾಗಿದೆ. ಡಿಸ್ಕೌಂಟ್ ಜೊತೆಗೆ ನೋ ಕಾಸ್ಟ್ ಇಎಂಐ ಮತ್ತು ಎಕ್ಸ್‌ಚೇಂಜ್ ಆಫರ್‌ ಸಹ ಲಭ್ಯವಿದೆ. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಒನ್‌ಪ್ಲಸ್ ನಾರ್ಡ್‌ CE4 5G ಫೋನನ್ನು ಕಳೆದ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದು ಎರಡು ಸ್ಟೋರೇಜ್‌ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಮೊಬೈಲ್ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಫೋನಿನಲ್ಲಿ 6.7 ಇಂಚಿನ ಡಿಸ್ಪ್ಲೇ ಇದೆ. ಜೊತೆಗೆ 5500mAh ದೊಡ್ಡ ಬ್ಯಾಟರಿ ಮತ್ತು 100W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಸ್ತುತ, ಈ ಫೋನನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

3000 ಡಿಸ್ಕೌಂಟ್.. ಇಯರ್‌ಬಡ್‌ ಉಚಿತ.. ಈ OnePlus ಫೋನಿಗೆ ಭರ್ಜರಿ ಆಫರ್‌!

ಒನ್‌ಪ್ಲಸ್ ನಾರ್ಡ್‌ CE4 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಒನ್‌ಪ್ಲಸ್ ನಾರ್ಡ್‌ CE4 5G ಮೊಬೈಲ್ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಪಂಚ್ ಹೋಲ್ ಡಿಸ್ಪ್ಲೇ ಹೊಂದಿದೆ. ಇದು 2412 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 2160Hz PWM ಡಿಮ್ಮಿಂಗ್ ಬೆಂಬಲ ಹೊಂದಿದೆ.

ಪ್ರೊಸೆಸರ್ ಯಾವುದು?

ಒನ್‌ಪ್ಲಸ್ ನಾರ್ಡ್‌ CE4 5G ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7 ಜೆನ್ 3 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್‌ 14 ಆಧಾರಿತ Oxygen ಓಎಸ್‌ 14 ನಲ್ಲಿ ಕೆಲಸ ನಿರ್ವಹಿಸುತ್ತದೆ.

ಸ್ಟೋರೇಜ್ ಆಯ್ಕೆ

ಒನ್‌ಪ್ಲಸ್ ನಾರ್ಡ್‌ CE4 5G ಸ್ಮಾರ್ಟ್‌ಫೋನ್ 8GB RAM ಮತ್ತು 8GB ವಿಸ್ತರಿಸಬಹುದಾದ RAM ಹೊಂದಿದೆ. ಹಾಗೆಯೇ 256GB ಸ್ಟೋರಜ್‌ ಆಯ್ಕೆ ಒಳಗೊಂಡಿದೆ.

ಕ್ಯಾಮೆರಾ ಸೆಟಪ್

ಒನ್‌ಪ್ಲಸ್ ನಾರ್ಡ್‌ CE4 5G ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಒನ್‌ಪ್ಲಸ್ ನಾರ್ಡ್‌ CE4 5G ಫೋನ್ 5500mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 100W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಒನ್‌ಪ್ಲಸ್ ನಾರ್ಡ್‌ CE4 5G ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ ಬ್ಲೂಟೂತ್ 5.4 ಮತ್ತು 5GHz ವೈ-ಫೈ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಒನ್‌ಪ್ಲಸ್ ನಾರ್ಡ್‌ CE4 5G ಬೆಲೆ ಮತ್ತು ಆಫರ್‌ಗಳು

ಒನ್‌ಪ್ಲಸ್ ನಾರ್ಡ್‌ CE4 5G ಫೋನಿನ ಖರೀದಿ ಮೇಲೆ 2,000 ರೂ. ಫ್ಲಾಟ್ ರಿಯಾಯಿತಿ ಲಭ್ಯವಿದೆ. ಜೊತೆಗೆ 1,000 ರೂ. ಬ್ಯಾಂಕ್ ಆಫರ್ ನೀಡಲಾಗುತ್ತಿದೆ. ನೀವು, 3000 ರೂ. ಡಿಸ್ಕೌಂಟ್‌ನ ಲಾಭ ಪಡೆಯಬಹುದು. ವಿಶೇಷವೆಂದರೆ, OnePlus Buds 2r ಅನ್ನು ಉಚಿತವಾಗಿ ನೀಡಲಾಗುತ್ತದೆ. ರಿಯಾಯಿತಿಯೊಂದಿಗೆ 8GB RAM + 128GB ಸ್ಟೋರೇಜ್ ರೂಪಾಂತರವನ್ನು 21,999 ಮತ್ತು 8GB RAM + 256GB ಸ್ಟೋರೇಜ್ ಆಯ್ಕೆಯನ್ನು 23,999 ರೂ.ಗೆ ಖರೀದಿಸಬಹುದು.

ಕಂಪನಿಯು ಐಸಿಐಸಿಐ ಮತ್ತು ಒನ್‌ ಕಾರ್ಡ್ ಪಾವತಿ ಮೇಲೆ 1,000 ರೂ. ಬ್ಯಾಂಕ್ ಆಫರ್ ನೀಡುತ್ತಿದೆ. ಜೊತೆಗೆ 3 ರಿಂದ 6 ತಿಂಗಳ ಸುಲಭ ನೋ ಕಾಸ್ಟ್ ಇಎಂಐ ಪ್ರಯೋಜನ ಪಡೆಯಬಹುದು. ಇದಲ್ಲದೆ 19,250 ರೂ. ವರೆಗೆ ಎಕ್ಸ್‌ಚೇಂಜ್ ಆಫರ್‌ ಸಹ ಲಭ್ಯವಿದೆ. ಈ ಒನ್‌ಪ್ಲಸ್‌ ಮೊಬೈಲ್ ಡಾರ್ಕ್ ಕ್ರೋಮ್ ಮತ್ತು ಸೆಲಡಾನ್ ಮಾರ್ಬಲ್‌ ಬಣ್ಣಗಳಲ್ಲಿ ಬರುತ್ತದೆ. ನೀವು, ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಮತ್ತು ಕಂಪನಿಯ ವೆಬ್‌ಸೈಟ್‌ನಲ್ಲಿ ಫೋನನ್ನು ಖರೀದಿಸಬಹುದು.

Best Mobiles in India

English summary
OnePlus Nord CE4 5G Available with Rs 3,000 discount and OnePlus Nord Buds 2r free: know details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+