Home
Deal of the day

ಧಮಾಕಾ ಆಫರ್! 5000 ಬೆಲೆ ಇಳಿಕೆ.. 3,000 ರಿಯಾಯಿತಿ.. ರಾಶಿ ಫೀಚರ್ಸ್.. ಯಾವ ಫೋನ್?

ಒನ್‌ಪ್ಲಸ್‌ ತನ್ನ ಅಭಿಮಾನಿಗಳಿಗೆ ಸಾಲು ಸಾಲು ಆಫರ್ ನೀಡುತ್ತಿದೆ. ಕಂಪನಿಯು ಕಳೆದ ವರ್ಷ ಭಾರತದಲ್ಲಿ ತನ್ನ ಮಧ್ಯಮ ಶ್ರೇಣಿಯ ಶಕ್ತಿಶಾಲಿ ಸ್ಮಾರ್ಟ್‌ಫೋನ್ ಒನ್‌ಪ್ಲಸ್ ನಾರ್ಡ್‌ CE4 5G (OnePlus Nord CE4 5G) ಅನ್ನು ಬಿಡುಗಡೆ ಮಾಡಿತ್ತು. ಪ್ರಸ್ತುತ, ಕಂಪನಿಯು ಈ ಸ್ಮಾರ್ಟ್‌ಫೋನ್ ಮೇಲೆ 3,000 ರೂ.ಗಳ ವರೆಗೆ ರಿಯಾಯಿತಿ ಘೋಷಿಸಿದೆ. ನೀವು ಈ ಫೋನನ್ನು 20 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಒನ್‌ಪ್ಲಸ್‌ ಫೋನಿನ ಮೂಲ ಬೆಲೆ, ಆಫರ್ ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ಒನ್‌ಪ್ಲಸ್ ಮಾರ್ಚ್ 9 ರವರೆಗೆ ರೆಡ್ ರಶ್ ಡೇಸ್ ಸೇಲ್ (OnePlus Red Rush Days Sale) ಆಯೋಜಿಸಿದೆ. ಈ ವಿಶೇಷ ಮಾರಾಟದಲ್ಲಿ ಒನ್‌ಪ್ಲಸ್ ನಾರ್ಡ್‌ CE4 5G ಫೋನನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. ಇದು ಎರಡು ಸ್ಟೋರೇಜ್‌ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಮೊಬೈಲ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 6.7 ಇಂಚಿನ ಡಿಸ್ಪ್ಲೇ ಮತ್ತು 5500mAh ಬ್ಯಾಟರಿ ಲಭ್ಯವಿದೆ.

5,000 ಅಗ್ಗ! 3,000 ರಿಯಾಯಿತಿ.. ರಾಶಿ ಫೀಚರ್ಸ್.. ಈ OnePlus ಫೋನಿಗೆ ಭಾರೀ ಆಫರ್

ಒನ್‌ಪ್ಲಸ್ ನಾರ್ಡ್‌ CE4 5G ಆಫರ್‌ಗಳು

ಒಒನ್‌ಪ್ಲಸ್ ರೆಡ್ ರಶ್ ಡೇಸ್ ಸೇಲ್ ಪ್ರಾರಂಭಿಸಿದೆ. ಈ ಸೇಲ್‌ನಲ್ಲಿ, ಒನ್‌ಪ್ಲಸ್ ನಾರ್ಡ್‌ CE4 5G ಫೋನನ್ನು ಆಫರ್‌ಗಳೊಂದಿಗೆ ಅಗ್ಗದ ದರದಲ್ಲಿ ಮಾರಾಟ ಮಾಡುತ್ತಿದೆ. ಈ ಫೋನಿನ 8GB RAM + 128GB ಸ್ಟೋರೇಜ್‌ ರೂಪಾಂತರವನ್ನು 24,999 ರೂ.ಗೆ ಬಿಡುಗಡೆ ಮಾಡಿತ್ತು. ಪ್ರಸ್ತುತ, ನೀವು ಕೇವಲ 19,999 ರೂ.ಗೆ ಖರೀದಿಸಬಹುದು. ವಿಶೇಷವೆಂದರೆ, ಕಂಪನಿಯು ಈಗಾಗಲೇ ಇದರ ಬೆಲೆಯನ್ನು 3,000 ರೂ.ಗಳಷ್ಟು ಇಳಿಕೆ ಮಾಡಿದೆ. ಈಗ 3,000 ರೂ.ಗಳ ರಿಯಾಯಿತಿ ಸಹ ಪಡೆಯಬಹುದು.

ಕಂಪನಿಯು ಈ ಮೊಬೈಲ್ ಖರೀದಿ ಮೇಲೆ 1,000 ರೂ.ಗಳ ಫ್ಲಾಟ್ ರಿಯಾಯಿತಿ ನೀಡುತ್ತಿದೆ. ಇದರೊಂದಿಗೆ, ಈ ಫೋನ್ ಮೇಲೆ 2,000 ರೂ.ಗಳ ಬ್ಯಾಂಕ್ ಡಿಸ್ಕೌಂಟ್ ಸಹ ನೀಡಲಾಗುತ್ತಿದೆ. ಇದು ಹೆಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಎಸ್‌ಬಿಐ ಬ್ಯಾಂಕ್‌ಗಳಲ್ಲಿ ಲಭ್ಯವಿರುತ್ತದೆ. 3,000 ರೂ.ಗಳ ರಿಯಾಯಿತಿಯ ಜೊತೆಗೆ, ನೋ ಕಾಸ್ಟ್ ಇಎಂಐ ಮೂಲಕ ಖರೀದಿಸಬಹುದು. ಈ ಒನ್‌ಪ್ಲಸ್‌ ಮೊಬೈಲ್ ಡಾರ್ಕ್ ಕ್ರೋಮ್ ಮತ್ತು ಸೆಲಡಾನ್ ಮಾರ್ಬಲ್‌ ಬಣ್ಣಗಳಲ್ಲಿ ಬರುತ್ತದೆ.

5,000 ಅಗ್ಗ! 3,000 ರಿಯಾಯಿತಿ.. ರಾಶಿ ಫೀಚರ್ಸ್.. ಈ OnePlus ಫೋನಿಗೆ ಭಾರೀ ಆಫರ್

ಒನ್‌ಪ್ಲಸ್ ನಾರ್ಡ್‌ CE4 5G ವೈಶಿಷ್ಟ್ಯಗಳು

ಡಿಸ್ಪ್ಲೇ ಮಾಹಿತಿ

ಒನ್‌ಪ್ಲಸ್ ನಾರ್ಡ್‌ CE4 5G ಸ್ಮಾರ್ಟ್‌ಫೋನ್ 6.7 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಪೂರ್ಣ ಎಚ್‌ಡಿ ಪ್ಲಸ್ ಪಂಚ್ ಹೋಲ್ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 2412 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ. ಹಾಗೆಯೇ 120Hz ರಿಫ್ರೆಶ್ ದರ ಮತ್ತು 2160Hz PWM ಡಿಮ್ಮಿಂಗ್ ಬೆಂಬಲ ಸಹ ಹೊಂದಿದೆ.

ಕ್ವಾಲ್ಕಾಮ್‌ ಪ್ರೊಸೆಸರ್

ಒನ್‌ಪ್ಲಸ್ ನಾರ್ಡ್‌ CE4 5G ಮೊಬೈಲ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 7 ಜೆನ್ 3 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್‌ 14 ಆಧಾರಿತ Oxygen ಓಎಸ್‌ 14 ನಲ್ಲಿ ಕೆಲಸ ಮಾಡುತ್ತದೆ. ಈ ಒನ್‌ಪ್ಲಸ್ ಸ್ಮಾರ್ಟ್‌ಫೋನ್ 8GB RAM ಹೊಂದಿದೆ. ಇದರೊಂದಿಗೆ 8GB ವಿಸ್ತರಿಸಬಹುದಾದ RAM ಹೊಂದಿದೆ. ಇದಕ್ಕೆ ಪೂರಕವಾಗಿ 256GB ಸ್ಟೋರಜ್‌ ಆಯ್ಕೆ ಲಭ್ಯವಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್

ಒನ್‌ಪ್ಲಸ್ ನಾರ್ಡ್‌ CE4 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ದ್ವಿತೀಯ (ಅಲ್ಟ್ರಾ ವೈಡ್) ಕ್ಯಾಮೆರಾ ಇದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಅದ್ಭುತ ಬ್ಯಾಟರಿ ಬ್ಯಾಕಪ್

ಒನ್‌ಪ್ಲಸ್ ನಾರ್ಡ್‌ CE4 5G ಮೊಬೈಲ್ 5500mAh ಸಾಮರ್ಥ್ಯದ ಶಕ್ತಿಶಾಲಿ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 100W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಬ್ಲೂಟೂತ್ 5.4 ಮತ್ತು 5GHz ವೈ-ಫೈ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
OnePlus Nord CE4 5G Available with Rs 3,000 discount on OnePlus Red Rush Days Sale: know offers and Specifications details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+