Home
Deal of the day

OnePlus: ಹೊಸ ಫೋನ್ ಬಿಡುಗಡೆಯೇ ಆಗಿಲ್ಲ.. ಹಳೆ ಫೋನಿಗೆ ಭಾರೀ ಆಫರ್.. 3000 ರಿಯಾಯಿತಿ.. ಖರೀದಿ ಎಲ್ಲಿ?

ಒನ್‌ಪ್ಲಸ್‌ ಎರಡು ಹೊಸ ಮೊಬೈಲ್ ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಶೀಘ್ರದಲ್ಲಿಯೇ ಒನ್‌ಪ್ಲಸ್‌ 13T (OnePlus 13T) ಮತ್ತು ಒನ್‌ಪ್ಲಸ್‌ ನಾರ್ಡ್‌CE 5 (OnePlus Nord CE 5) ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಮೊಬೈಲ್ ಪ್ರಿಯರ ಕಣ್ಣು ಈ ಸ್ಮಾರ್ಟ್‌ಫೋನ್ ಮೇಲೆ ಇದೆ. ಮತ್ತೊಂದೆಡೆ, ಕಂಪನಿಯು ಒನ್‌ಪ್ಲಸ್ ನಾರ್ಡ್‌ CE4 5G (OnePlus Nord CE4 5G) ಫೋನಿನ ಬೆಲೆ ಇಳಿಕೆ ಮಾಡಿದೆ. ಇದು ಭಾರೀ ರಿಯಾಯಿತಿ ಮತ್ತು ಬಂಪರ್ ಆಫರ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಅಮೆಜಾನ್ ಸೇಲ್‌ನಲ್ಲಿ ಒನ್‌ಪ್ಲಸ್ ನಾರ್ಡ್‌ CE4 5G ಫೋನ್ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ. ಈ ಮೊಬೈಲ್ ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಬರುತ್ತದೆ. ಈ ಫೋನಿನ ವಿಶೇಷತೆಗಳೆಂದರೆ, ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಈ ಮೊಬೈಲ್ 6.7 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರೊಂದಿಗೆ 5500mAh ಬ್ಯಾಟರಿ ಮತ್ತು 100W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

OnePlus: ಹೊಸ ಫೋನ್ ಬಿಡುಗಡೆಯೇ ಆಗಿಲ್ಲ.. ಹಳೆ ಫೋನಿಗೆ 3000 ಆಫರ್! ಎಲ್ಲಿ ಖರೀದಿ

ಒನ್‌ಪ್ಲಸ್ ನಾರ್ಡ್‌ CE4 5G ಹೊಸ ಬೆಲೆ

ಒನ್‌ಪ್ಲಸ್ ನಾರ್ಡ್‌ CE4 5G ಫೋನಿನ 8GB RAM + 128GB ಸ್ಟೋರೇಜ್‌ ರೂಪಾಂತರವು 24,999 ರೂ.ಗೆ ಬಿಡುಗಡೆಯಾಗತ್ತು. ಅಮೆಜಾನ್‌ನಲ್ಲಿ ಪ್ರಸ್ತುತ, ಶೇ.12 ರಷ್ಟು ನೇರ ರಿಯಾಯಿತಿಯೊಂದಿಗೆ ಲಭ್ಯವಿದೆ. ನೀವು ಬಿಡುಗಡೆ ಬೆಲೆಗಿಂತ 21,998 ರೂ.ಗೆ ಖರೀದಿಸಬಹುದು. ಈ ಒನ್‌ಪ್ಲಸ್‌ ಮೊಬೈಲ್ ಡಾರ್ಕ್ ಕ್ರೋಮ್ ಮತ್ತು ಸೆಲಡಾನ್ ಮಾರ್ಬಲ್‌ ಬಣ್ಣಗಳಲ್ಲಿ ಬರುತ್ತದೆ.

ಒನ್‌ಪ್ಲಸ್ ನಾರ್ಡ್‌ CE4 ವೈಶಿಷ್ಟ್ಯಗಳು

ಒನ್‌ಪ್ಲಸ್ ನಾರ್ಡ್‌ CE4 5G ಫೋನ್ 6.7 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 2412 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ. ಜೊತೆಗೆ 120Hz ರಿಫ್ರೆಶ್ ದರ ಮತ್ತು 2160Hz PWM ಡಿಮ್ಮಿಂಗ್ ಬೆಂಬಲ ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 7 ಜೆನ್ 3 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್‌ 14 ಆಧಾರಿತ Oxygen ಓಎಸ್‌ 14 ನಲ್ಲಿ ಕೆಲಸ ಮಾಡುತ್ತದೆ. ಈ ಒನ್‌ಪ್ಲಸ್ ಸ್ಮಾರ್ಟ್‌ಫೋನ್ 8GB RAM ಹೊಂದಿದೆ. ಇದರೊಂದಿಗೆ 8GB ವಿಸ್ತರಿಸಬಹುದಾದ RAM ಹೊಂದಿದೆ. ಇದಕ್ಕೆ ಪೂರಕವಾಗಿ 256GB ಸ್ಟೋರಜ್‌ ಆಯ್ಕೆ ಹೊಂದಿದೆ.

OnePlus: ಹೊಸ ಫೋನ್ ಬಿಡುಗಡೆಯೇ ಆಗಿಲ್ಲ.. ಹಳೆ ಫೋನಿಗೆ 3000 ಆಫರ್! ಎಲ್ಲಿ ಖರೀದಿ

ಒನ್‌ಪ್ಲಸ್ ನಾರ್ಡ್‌ CE4 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ದ್ವಿತೀಯ (ಅಲ್ಟ್ರಾ ವೈಡ್) ಕ್ಯಾಮೆರಾ ಇದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ. ಈ ಒನ್‌ಪ್ಲಸ್ ನಾರ್ಡ್‌ CE4 5G ಫೋನ್ 5500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 100W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಮೊಬೈಲ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.4 ಮತ್ತು 5GHz ವೈ-ಫೈ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

ಒಟ್ಟಾರೆ, ಒನ್‌ಪ್ಲಸ್ ನಾರ್ಡ್‌ CE5 5G ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದಲ್ಲದೆ ಒನ್‌ಪ್ಲಸ್ 13T ಸ್ಮಾರ್ಟ್‌ಫೋನ್ ಸಹ ಬಿಡುಗಡೆಗೆ ಸಜ್ಜಾಗಿದೆ. ನೀವು ಈ ಒಳ್ಳೆಯ ಅವಕಾಶವನ್ನು ಬಳಸಿಕೊಳ್ಳಬಹುದು. ಈಗಲೇ ಒನ್‌ಪ್ಲಸ್ ನಾರ್ಡ್‌ CE4 5G ಅನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು.

Best Mobiles in India

English summary
OnePlus Nord CE4 Price drop in amazon ahead OnePlus Nord CE5 india launch: know offers and Specifications details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+