4,000 ಡಿಸ್ಕೌಂಟ್! 50MP SONY ಕ್ಯಾಮೆರಾ.. 256GB ಸ್ಟೋರೇಜ್.. ಈ OnePlus ಫೋನಿನ ಬೆಲೆ ದಿಢೀರ್ ಕುಸಿತ
ಒನ್‌ಪ್ಲಸ್ ಪ್ರಿಯರಿಗೆ ಖುಷಿ ಸುದ್ದಿ ಇದೆ. ರಿಪಬ್ಲಿಕ್ ಡೇ ಸೇಲ್ (Republic Day Sale) ಹೊರತಾಗಿಯೂ ನಿಮಗಿದೆ ಬೊಂಬಾಟ್ ಆಫರ್. ಹೌದು, ಒನ್‌ಪ್ಲಸ್ ನಾರ್ಡ್ 4 (OnePlus Nord 4) ಭಾರೀ ರಿಯಾಯಿತಿಯೊಂದಿಗೆ ಖರೀದಿಗೆ ಲಭ್ಯವಿದೆ. ನೀವು, ಅಮೆಜಾನ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬರೋಬ್ಬರಿ 4,000 ರೂ.ಗಳ ಡಿಸ್ಕೌಂಟ್ ಪಡೆಯಬಹುದು. ಜೊತೆಗೆ, ಇಎಂಐ ಸೌಲಭ್ಯ ಮತ್ತು ಎಕ್ಸ್‌ಚೇಂಜ್ ಆಫರ್ ಸಹ ಸಿಗುತ್ತದೆ. ಬನ್ನಿ, ಈ ಒನ್‌ಪ್ಲಸ್ ಫೋನಿನ ಹೊಸ ಬೆಲೆ, ಆಫರ್, ಲಭ್ಯತೆ ಮತ್ತು ವಿಶೇಷತೆಗಳೇನು? ತಿಳಿಯೋಣ.
ಒನ್‌ಪ್ಲಸ್ ನಾರ್ಡ್ 4 ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಈ ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7+ ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನ್ 6.74 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 256GB ಸ್ಟೋರೇಜ್, 5500mAh ಬ್ಯಾಟರಿ ಮತ್ತು 100W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಸ್ತುತ, ಈ ಮೊಬೈಲ್ ಬಿಡುಗಡೆ ಬೆಲೆಗಿಂತ ಕಡಿಮೆಗೆ ಮಾರಾಟವಾಗುತ್ತಿದೆ.

ಒನ್‌ಪ್ಲಸ್ ನಾರ್ಡ್ 4 ಬೆಲೆ ಮತ್ತು ಆಫರ್‌ಗಳು
ಒನ್‌ಪ್ಲಸ್ ನಾರ್ಡ್ 4 ಮೊಬೈಲ್ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 29,999 ರೂ. ಆಗಿದೆ. 8GB RAM + 256GB ಸ್ಟೋರೇಜ್ ರೂಪಾಂತರವನ್ನು 32,999 ರೂ. ಮತ್ತು 12GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 35,999 ರೂ.ಗೆ ಬಿಡುಗಡೆಯಾಗಿತ್ತು. ಈ ಫೋನ್ ಮರ್ಕ್ಯುರಿಯಲ್ ಸಿಲ್ವರ್, ಅಬ್ಸಿಡಿಯನ್ ಮಿಡ್‌ನೈಟ್ ಮತ್ತು ಓಯಸಿಸ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ.
ಪ್ರಸ್ತುತ 256GB ಸ್ಟೋರೇಜ್ ರೂಪಾಂತರಗಳ ಮೇಲೆ 4,000 ರೂ. ರಿಯಾಯಿತಿ ಲಭ್ಯವಿದೆ. ನೀವು 8GB RAM + 256GB ಸ್ಟೋರೇಜ್ ರೂಪಾಂತರವನ್ನು 28,999 ರೂ.ಗೆ ಖರೀದಿಸಬಹುದು. ಒನ್‌ಕಾರ್ಡ್, ಐಸಿಐಸಿಐ, ಆರ್‌ಬಿಎಲ್ ಕಾರ್ಡ್‌ಗಳ ಪಾವತಿ ಮೇಲೆ 4,000 ರೂ. ರಿಯಾಯಿತಿ ಪಡೆಯಬಹುದು. ಇದರೊಂದಿಗೆ ನೀವು ಈ ಫೋನನ್ನು 24,999 ರೂ.ಗೆ ಕೊಳ್ಳಬಹುದು. ಪ್ರಸ್ತುತ 12GB RAM + 256GB ಸ್ಟೋರೇಜ್ 31,999 ರೂ.ಗೆ ಲಭ್ಯವಿದೆ. ನೀವು 4,000 ರೂ. ರಿಯಾಯಿತಿ ಪಡೆಯಬಹುದು. ಈ ಮೂಲಕ 27,999 ರೂ.ಗೆ ಈ ಮೊಬೈಲ್ ಖರೀದಿಸಬಹುದು.
ಒನ್‌ಪ್ಲಸ್ ನಾರ್ಡ್ 4 ವೈಶಿಷ್ಟ್ಯಗಳು
ಡಿಸ್ಪ್ಲೇ ಮತ್ತು ಪ್ರೊಸೆಸರ್ ವಿವರ
ಒನ್‌ಪ್ಲಸ್ ನಾರ್ಡ್ 4 5G ಸ್ಮಾರ್ಟ್‌ಫೋನ್ 6.74 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 1.5K ರೆಸಲ್ಯೂಶನ್, 120Hz ರಿಫ್ರೆಶ್ ದರ, ಸೂಪರ್ ಫ್ಲೂಯಿಡ್ ಅಮೋಲೆಡ್ ಪ್ಯಾನಲ್, 2,150 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಒನ್‌ಪ್ಲಸ್ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಪ್ಲಸ್ ಜೆನ್ 3 ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೋಮೀಟರ್‌ನಲ್ಲಿ ತಯಾರಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಓಎಸ್ ಆಧಾರಿತ OxygenOS 14.0 ಜೊತೆಗೆ ಕೆಲಸ ಮಾಡುತ್ತದೆ.

ಕ್ಯಾಮೆರಾ ಮತ್ತು ಸ್ಟೋರೇಜ್
ಒನ್‌ಪ್ಲಸ್ ನಾರ್ಡ್ 4 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಮತ್ತು EIS ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 8 ಮೆಗಾಪಿಕ್ಸೆಲ್ ಸೋನಿ ದ್ವೀತಿಯ ಕ್ಯಾಮೆರೆ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಹೊಂದಿದೆ. ಈ ಫೋನ್ 8GB ಮತ್ತು 12GB RAM, 128GB ಮತ್ತು 256GB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಫೋನ್ ವರ್ಚುವಲ್ RAM ವೈಶಿಷ್ಟ್ಯ ಸಹ ಹೊಂದಿದೆ.
ಬ್ಯಾಟರಿ ಮತ್ತು ಇತರೆ ವೈಶಿಷ್ಟ್ಯಗಳು
ಒನ್‌ಪ್ಲಸ್ ನಾರ್ಡ್ 4 5G ಫೋನ್ 5500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 100W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಡ್ಯುಯಲ್ ಸಿಮ್, 5G, 4G, ಬ್ಲೂಟೂತ್ 5.4, ವೈ ಫೈ 6, ಅಲರ್ಟ್ ಸ್ಲೈಡರ್, ಯುಎಸ್‌ಬಿ ಟೈಪ್ ಸಿ 2.0, ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








