Home
Deal of the day

Amazon Sale: OnePlus Open ಮೇಲೆ 40,000 ಡಿಸ್ಕೌಂಟ್! ಸೀಮಿತ ಅವಧಿಗೆ ಮಾತ್ರ

ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಅಮೆಜಾನ್ ಭರ್ಜರಿ ಆಫರ್‌ ನಿಡುತ್ತಿದೆ. ಅದರಲ್ಲೂ, ಫೋಲ್ಡಬಲ್ ಮೊಬೈಲ್ ಪ್ರೇಮಿಗಳಿಗೆ ಇದು ಖಂಡಿತ ಸಂತಸದ ಸುದ್ದಿ. ಹೌದು, ನೀವು ಪ್ರೀಮಿಯಂ ಫೋಲ್ಡಬಲ್ ಸ್ಮಾರ್ಟ್‌ಫೋನ್‌ ಹುಡುಕುತ್ತಿದ್ದರೆ ಮತ್ತು ನೀವು, ದೊಡ್ಡ ಉಳಿತಾಯದೊಂದಿಗೆ ಒನ್‌ಪ್ಲಸ್‌ ಮೊಬೈಲ್ ಖರೀದಿಸಲು ಬಯಸಿದರೆ, ಇಲ್ಲಿದೆ ಉತ್ತಮ ಅವಕಾಶ. ನೀವು, ಈ ಆಫರ್‌ ಬಗ್ಗೆ ತಿಳಿದರೆ, ಇಂದೇ ಈ ಒನ್‌ಪ್ಲಸ್‌ ಫೋನ್ ಖರೀದಿಸಲು ಮುಂದಾಗುತ್ತೀರಿ. ಬನ್ನಿ, ಇದು ಯಾವ ಫೋನ್? ಎಲ್ಲಿ ಖರೀದಿಸಬೇಕು? ಎನ್ನುವುದನ್ನು ತಿಳಿಯೋಣ.

ಪ್ರಸ್ತುತ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Great Indian Festival sale 2024) ನಡೆಯುತ್ತಿದೆ. ಇದರಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್‌ಗಳು ಲಭ್ಯವಿವೆ. ಅದರಂತೆಯೇ, ಎರಡು ಡಿಸ್ಪ್ಲೇಗಳೊಂದಿಗೆ ಒನ್‌ಪ್ಲಸ್‌ ಓಪನ್ (OnePlus Open) ಫೋನ್ ದೊಡ್ಡ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ಹೌದು, ಈ ಒನ್‌ಪ್ಲಸ್‌ ಓಪನ್ ಫೋನನ್ನು 40 ಸಾವಿರ ರೂ.ಗಳ ಫ್ಲಾಟ್ ರಿಯಾಯಿತಿಯೊಂದಿಗೆ ಖರೀದಿಸುವ ಅವಕಾಶವಿದೆ.

Amazon Sale: OnePlus Open ಮೇಲೆ 40,000 ಡಿಸ್ಕೌಂಟ್! ಸೀಮಿತ ಅವಧಿಗೆ ಮಾತ್ರ

ಒನ್‌ಪ್ಲಸ್‌ ಓಪನ್ (OnePlus Open) ಕಂಪನಿಯ ಮೊದಲ ಮಡಚಬಹುದಾದ ಫೋನ್ ಆಗಿದೆ. ಇದು ವಿನ್ಯಾಸದಿಂದ ಸಾಫ್ಟ್‌ವೇರ್‌ಗೆ ಶಕ್ತಿಯುತವಾಗಿದೆ. ಈ ಫೋಲ್ಡಬಲ್ ಫೋನ್‌ಗಳ ಡಿಸ್ಪ್ಲೇಯನ್ನು ಡಾಲ್ಬಿ ವಿಷನ್ ಬೆಂಬಲದೊಂದಿಗೆ ಪ್ರಾರಂಭಿಸಲಾಗಿದೆ. ಈ ಫೋಲ್ಡಬಲ್ ಮೊಬೈಲ್ TUV ಪ್ರಮಾಣೀಕರಣವನ್ನು ಪಡೆದುಕೊಂಡಿದೆ. ಮತ್ತು ಇದನ್ನು 10 ವರ್ಷಗಳವರೆಗೆ ಪರೀಕ್ಷಿಸಲಾಗಿದೆ. ಇದನ್ನು ಖರೀದಿಸುವ ಗ್ರಾಹಕರಿಗೆ ಪ್ರೀಮಿಯಂ ಸೇವೆ ಮತ್ತು ಬೆಂಬಲವನ್ನು ನೀಡಲಾಗುತ್ತಿದೆ.

ಒನ್‌ಪ್ಲಸ್‌ ಓಪನ್ ಖರೀದಿ ಮೇಲೆ 40 ಸಾವಿರ ಡಿಸ್ಕೌಂಟ್!

ಭಾರತದಲ್ಲಿ ಒನ್‌ಪ್ಲಸ್‌ ಓಪನ್ ಮೊಬೈಲ್ ಅನ್ನು 1,39,999 ರೂ. ಬೆಲೆಗೆ ಬಿಡುಗಡೆ ಮಾಡಲಾಗಿದೆ. ಇದು 16GB RAM ಮತ್ತು 512GB ಸ್ಟೋರೇಜ್ ರೂಪಾಂತರದ ಬೆಲೆಯಾಗಿದೆ. ಆದರೆ, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಕೇವಲ 99,999 ರೂ.ಗೆ ಪಟ್ಟಿ ಮಾಡಲಾಗಿದೆ. ಅಂದರೆ, ಈ ಫೋಲ್ಡಬಲ್ ಫೋನ್‌ ಖರೀದಿಸಿದರೆ, ನೀವು ನೇರವಾಗಿ 40,000 ರೂ.ಗಳನ್ನು ಉಳಿಸುವ ಅವಕಾಶ ಸಿಗುತ್ತದೆ.

ಕಂಪನಿಯು ಒನ್‌ಪ್ಲಸ್‌ ಓಪನ್ ಖರೀದಿ ಮೇಲೆ ಎಕ್ಸ್‌ಚೇಂಜ್‌ ಆಫರ್‌ ಅನ್ನು ಸಹ ನೀಡುತ್ತಿದೆ. ಈ ಆಫರ್‌ನೊಂದಿಗೆ ನೀವು, 55,000 ರೂ.ಗಳ ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಆದರೆ, ಈ ರಿಯಾಯಿತಿಯು ನಿಮ್ಮ ಹಳೆಯ ಫೋನ್‌ನ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಕಂಪನಿಯ ಈ ಮಡಿಸಬಹುದಾದ ಮೊಬೈಲ್‌ ಅನ್ನು ಮೂರು ಬಣ್ಣದ ಆಯ್ಕೆಗಳಲ್ಲಿ ಪರಿಚಯಿಸಿದೆ. ನೀವು ಎಮರಾಲ್ಡ್ ಡಸ್ಕ್, ವಾಯೇಜರ್ ಬ್ಲ್ಯಾಕ್ ಮತ್ತು ಅಪೆಕ್ಸ್ ಆವೃತ್ತಿಯಲ್ಲಿ ಖರೀದಿಸಬಹುದು.

ಈ ಸುದ್ದಿ ಓದಿದ್ದೀರಾ?: OnePlus: ಈ 5G ಫೋನ್ ಬೆಲೆ ಇಳಿಕೆ: 3,000 ಅಗ್ಗ.. 1,299 ರೂ.ನ ನೆಕ್‌ಬ್ಯಾಂಡ್ ಉಚಿತ!

ಒನ್‌ಪ್ಲಸ್‌ ಓಪನ್ ಫೋನಿನ ವೈಶಿಷ್ಟ್ಯಗಳು

ಒನ್‌ಪ್ಲಸ್‌ ಓಪನ್ ಮೊಬೈಲ್ 7.82 ಇಂಚಿನ LTPO3 ಫ್ಲೆಕ್ಸಿ-ಫ್ಲೂಯಿಡ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ, 120 Hz ರಿಫ್ರೆಶ್ ದರವನ್ನು ಹೊಂದಿದೆ. ಎರಡೂ ಪ್ರದರ್ಶನಗಳು ಡಾಲ್ಬಿ ವಿಷನ್ ಬೆಂಬಲದೊಂದಿಗೆ ಬರುತ್ತವೆ. ಮತ್ತು 2800 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಹೊಂದಿವೆ. ಈ ಮಡಿಸಬಹುದಾದ ಫೋನ್ Qualcomm Snapdragon 8 Gen 2 ಪ್ರೊಸೆಸರ್ ಜೊತೆಗೆ OxygenOS 14 ಅಪ್‌ಡೇಟ್‌ನೊಂದಿಗೆ ಬರುತ್ತದೆ.

ಒನ್‌ಪ್ಲಸ್‌ ಓಪನ್ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, ಜೊತೆಗೆ, 64 ಮೆಗಾಪಿಕ್ಸೆಲ್ ಟೆಲಿಫೋಟೋ ಮತ್ತು 48 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಒಳಗೊಂಡಿದೆ. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 20 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಮತ್ತು ಕವರ್ ಡಿಸ್ಪ್ಲೇನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಒನ್‌ಪ್ಲಸ್‌ ಓಪನ್ ಫೋಲ್ಡಬಲ್ ಸ್ಮಾರ್ಟ್‌ಫೋನ್‌ 4805mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಜೊತೆಗೆ, ಇದು ರಿವರ್ಸ್ ವೈರ್ಡ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಸಹ ಹೊಂದಿದೆ. ಈ ಫೋನ್, ಫಿಂಗರ್‌ಪ್ರಿಂಟ್ ಸ್ಕ್ಯಾನರ್ ದೃಢೀಕರಣ ಆಯ್ಕೆಯನ್ನು ಸಹ ಒಳಗೊಂಡಿದೆ.

Best Mobiles in India

English summary
OnePlus Open gets Rs 40,000 Massive discount on amazon great indian festival sale 2024: check offer price, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+