ಧಮಾಕಾ ಆಫರ್: 10,000 ರಿಯಾಯಿತಿ.. 7000 ಎಕ್ಸ್‌ಚೇಂಜ್ ಬೋನಸ್.. ಈ OnePlus ಫೋನ್‌ಗಳಿಗೆ ಬಿಗ್ ಡಿಸ್ಕೌಂಟ್!
ಒನ್‌ಪ್ಲಸ್ ಮೊಬೈಲ್ ಪ್ರಿಯರಿಗೆ ಹಬ್ಬವೇ ಸರಿ! 'ರೆಡ್ ರಶ್ ಡೇಸ್' ಬಂದಿದೆ, ಸಾಲು ಸಾಲು ಆಫರ್ ಹೊತ್ತು ತಂದಿದೆ. ಹೌದು, ಬಹುನಿರೀಕ್ಷಿತ ಒನ್‌ಪ್ಲಸ್ 'ರೆಡ್ ರಶ್ ಡೇಸ್' ಮಾರಾಟ (OnePlus Red Rush Days Sale) ಶುರುವಾಗಿದೆ. ಹೊಸ ಒನ್‌ಪ್ಲಸ್ 13 ಮತ್ತು ಒನ್‌ಪ್ಲಸ್ 13R ಸೇರಿದಂತೆ ತನ್ನ ಫ್ಲ್ಯಾಗ್‌ಶಿಪ್ ಮತ್ತು ಮಧ್ಯಮ ಶ್ರೇಣಿಯ ಮೊಬೈಲ್‌ಗಳು, ಉತ್ಪನ್ನಗಳ ಮೇಲೆ ಬೊಂಬಾಟ್ ರಿಯಾಯಿತಿ ನೀಡಲಾಗುತ್ತಿದೆ. ಈ ಸೇಲ್ ಇಂದಿನಿಂದ (ಮಾರ್ಚ್ 4) ಪ್ರಾರಂಭವಾಗಿದ್ದು, ಇದೇ ಮಾರ್ಚ್ 9 ರವರೆಗೆ ನಡೆಯಲಿದೆ. ಡಿಸ್ಕೌಂಟ್ ಹೊರತಾಗಿ, ಬ್ಯಾಂಕ್ ಆಫರ್ ಮತ್ತು ಇಎಂಐ ಸೌಲಭ್ಯ ಸಹ ಪಡೆಯಬಹುದು. ಈ ಲೇಖನದಲ್ಲಿ ಯಾವೆಲ್ಲಾ ಫೋನ್‌ಗಳಿಗೆ ಎಷ್ಟು ಆಫರ್ ಲಭ್ಯವಿದೆ ಎನ್ನುವುದನ್ನು ತಿಳಿಸಲಾಗಿದೆ.
ಒನ್‌ಪ್ಲಸ್ 'ರೆಡ್ ರಶ್ ಡೇಸ್' ಸೇಲ್ ಡೀಲ್‌ಗಳು
ಒನ್‌ಪ್ಲಸ್ 13 : 69,999 ರೂ.
ಒನ್‌ಪ್ಲಸ್ 13 ಫೋನಿನ ಖರೀದಿ ಮೇಲೆ 5,000 ರೂ.ಗಳ ತಕ್ಷಣದ ಬ್ಯಾಂಕ್ ರಿಯಾಯಿತಿ, 24 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಮತ್ತು 7,000 ರೂ.ಗಳ ವರೆಗೆ ಎಕ್ಸ್‌ಚೇಂಜ್ ಬೋನಸ್ ಲಭ್ಯವಿದೆ.

ಒನ್‌ಪ್ಲಸ್ 13R : 42,999 ರೂ.
ಒನ್‌ಪ್ಲಸ್ 13R ಫೋನಿನ ಖರೀದಿ ಮೇಲೆ 3,000 ರೂ.ಗಳ ತ್ವರಿತ ಬ್ಯಾಂಕ್ ರಿಯಾಯಿತಿ, 16GB + 512GB ಮೇಲೆ 2,000 ರೂ.ಗಳ ಆಫರ್, 24 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಮತ್ತು 4,000 ರೂ.ಗಳ ವರೆಗೆ ಎಕ್ಸ್‌ಚೇಂಜ್ ಬೋನಸ್ ನೀಡಲಾಗುತ್ತಿದೆ.
ಒನ್‌ಪ್ಲಸ್ 12: 64,999 ರೂ.
ಒನ್‌ಪ್ಲಸ್ 12 ಫೋನಿನ ಖರೀದಿ ಮೇಲೆ 4,000 ರೂ.ಗಳ (ಆಯ್ದ ಬ್ಯಾಂಕ್ ಕಾರ್ಡ್) ತ್ವರಿತ ಬ್ಯಾಂಕ್ ರಿಯಾಯಿತಿ, 8,000 ರೂ.ಗಳ ವರೆಗೆ ಬೆಲೆ ಇಳಿಕೆ ಮತ್ತು 9 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಆಯ್ಕೆ ನೀಡಲಾಗುವುದು.
ಒನ್‌ಪ್ಲಸ್ 12R: 39,999 ರೂ.
ಒನ್‌ಪ್ಲಸ್ 12R ಫೋನಿನ ಖರೀದಿ ಮೇಲೆ 3,000 ರೂ.ಗಳ ವರೆಗೆ ತ್ವರಿತ ಬ್ಯಾಂಕ್ ರಿಯಾಯಿತಿ, 10,000 ರೂ.ಗಳ ಬೆಲೆ ಇಳಿಕೆ ಮತ್ತು 9 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಸೌಲಭ್ಯಗಳ ಲಾಭ ಪಡೆಯಬಹುದು.
ಒನ್‌ಪ್ಲಸ್ ನಾರ್ಡ್ 4: 29,999 ರೂ.
ಒನ್‌ಪ್ಲಸ್ ನಾರ್ಡ್ 4 ಬೆಲೆ 1,000 ರೂ. ಇಳಿಕೆ ಮಾಡಲಾಗಿದೆ. ಜೊತೆಗೆ 4,000 ರೂ.ಗಳ ತ್ವರಿತ ಬ್ಯಾಂಕ್ ರಿಯಾಯಿತಿ ಮತ್ತು 9 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ.
ಒನ್‌ಪ್ಲಸ್ ನಾರ್ಡ್ CE 4: 24,999 ರೂ.
ಒನ್‌ಪ್ಲಸ್ ನಾರ್ಡ್ CE 4 ಫೋನಿನ ಬೆಲೆ ಸಹ 1,000 ರೂ. ಕಡಿತ ಮಾಡಲಾಗಿದೆ. ಇದರೊಂದಿಗೆ 2,000 ರೂ. ತ್ವರಿತ ಬ್ಯಾಂಕ್ ಡಿಸ್ಕೌಂಟ್ ಮತ್ತು 6 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಆಯ್ಕೆಯ ಪ್ರಯೋಜನ ಪಡೆಯಬಹುದು.
ಒನ್‌ಪ್ಲಸ್ ನಾರ್ಡ್ CE 4 ಲೈಟ್: 19,999 ರೂ.
ಒನ್‌ಪ್ಲಸ್ ನಾರ್ಡ್ CE 4 ಲೈಟ್ ಮೊಬೈಲ್ ಖರೀದಿ ಮೇಲೆ 1,000 ರೂ.ಗಳ ತ್ವರಿತ ಬ್ಯಾಂಕ್ ರಿಯಾಯಿತಿ ಲಭ್ಯವಿದೆ. ನೀವು 3 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ ಈ ಮೊಬೈಲ್ ಕೊಳ್ಳಬಹುದು.
ಒನ್‌ಪ್ಲಸ್ ರೆಡ್ ರಶ್ ಡೇಸ್ ಸೇಲ್ ಡೀಲ್‌ಗಳು ಆನ್‌ಲೈನ್ ಶಾಪಿಂಗ್ ಸೈಟ್‌ಗಳಾದ ಅಮೆಜಾನ್, ಒನ್‌ಪ್ಲಸ್ ವೆಬ್‌ಸೈಟ್, ಒನ್‌ಪ್ಲಸ್ ಸ್ಟೋರ್ ಅಪ್ಲಿಕೇಶನ್ ಮತ್ತು ಒನ್‌ಪ್ಲಸ್ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್, ಕ್ರೋಮಾ, ವಿಜಯ್ ಸೇಲ್ಸ್, ಬಜಾಜ್ ಎಲೆಕ್ಟ್ರಾನಿಕ್ಸ್ ಮತ್ತು ಇತರೆ ಆಫ್‌ಲೈನ್ ಸ್ಟೋರ್‌ಗಳ ಮೂಲಕ ಲಭ್ಯವಿರುತ್ತವೆ.


Click it and Unblock the Notifications








