Home
Deal of the day

OnePlus 13 ಬೆಲೆ ಭಾರೀ ಇಳಿಕೆ! 8000 ರಿಯಾಯಿತಿ.. 7000 ಎಕ್ಸ್‌ಚೇಂಜ್ ಆಫರ್.. ಇಲ್ಲಿದೆ ಹೊಸ ದರ

ನಿಮ್ಮ ಫೋನನ್ನು ಅಪ್‌ಗ್ರೇಡ್ ಮಾಡಲು ಬಯಸಿದ್ದೀರಾ? ಅದರಲ್ಲೂ ಹೊಸ ಒನ್‌ಪ್ಲಸ್ ಮೊಬೈಲ್ ಹುಡುಕುತ್ತಿದ್ದರೆ ಈ ಸುದ್ದಿ ನಿಮಗಾಗಿ! ಹೌದು, ಒನ್‌ಪ್ಲಸ್ ಸಮ್ಮರ್ ಸೇಲ್ 2025 (OnePlus Summer Sale 2025) ಪ್ರಾರಂಭವಾಗಿದೆ. ಈ ವಿಶೇಷ ಮಾರಾಟವು ಇಂದಿನಿಂದ ಪ್ರಾರಂಭವಾಗಿದೆ. ಹಲವು ಒನ್‌ಪ್ಲಸ್ ಫೋನ್‌ಗಳ ಖರೀದಿ ಮೇಲೆ ಬಂಪರ್ ಆಫರ್‌ ಘೋಷಿಸಲಾಗಿದೆ. ಈ ಪೈಕಿ ಒನ್‌ಪ್ಲಸ್‌ 13 (OnePlus 13) ಸ್ಮಾರ್ಟ್‌ಫೋನ್‌ ಭಾರೀ ರಿಯಾಯಿತಿಯನ್ನು ಪಡೆದಿದೆ. ಜೊತೆಗೆ ಬ್ಯಾಂಕ್ ಆಫರ್ ಮತ್ತು ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ. ಈ ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಒನ್‌ಪ್ಲಸ್‌ 13 ಮೊಬೈಲ್ ಒನ್‌ಪ್ಲಸ್ ಸಮ್ಮರ್ ಸೇಲ್ 2025 ನಲ್ಲಿ ಬಿಡುಗಡೆ ಬೆಲೆಗಿಂತ ಕಡಿಮೆಗೆ ಲಭ್ಯವಿದೆ. ಈ ಫೋನಿನ ವಿಶೇಷತೆಗಳೆಂದರೆ, ಈ ಮೊಬೈಲ್ 6.82 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಸ್ನಾಪ್‌ಡ್ರಾಗನ್ 8 ಎಲೈಟ್‌ ಪ್ರೊಸೆಸರ್‌ ಹೊಂದಿದೆ. ಈ ಫೋನಿನಲ್ಲಿ 50MP + 50MP ಹಿಂಭಾಗದ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 12GB RAM + 256GB ಸ್ಟೋರೇಜ್‌, 6000mAh ಬ್ಯಾಟರಿ ಮತ್ತು 100W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳಿವೆ. ಈ ಫೋನಿನ ಆಫರ್ ತಿಳಿಯಲು ಮುಂದೆ ಓದಿ.

OnePlus 13 ದರ ಕಡಿತ! 8000 ರಿಯಾಯಿತಿ, 7000 ಎಕ್ಸ್‌ಚೇಂಜ್ ಆಫರ್.. ಬೆಲೆ ನೋಡಿ

ಒನ್‌ಪ್ಲಸ್‌ 13 ಹೊಸ ಬೆಲೆ

12GB RAM + 256GB ಸ್ಟೋರೇಜ್‌ = 69,999 ರೂ.
16GB RAM + 512GB ಸ್ಟೋರೇಜ್‌ = 76,999 ರೂ.
24GB RAM + 1TB ಸ್ಟೋರೇಜ್‌ = 89,999 ರೂ.

ಒನ್‌ಪ್ಲಸ್‌ 13 ಫೋನಿನ ಮೂಲ ಬೆಲೆ 69,999 ರೂ. ಆಗಿದೆ. ಪ್ರಸ್ತುತ ಒನ್‌ಪ್ಲಸ್ ಸಮ್ಮರ್ ಸೇಲ್‌ನಲ್ಲಿ 3,000 ರೂ.ಗಳ ರಿಯಾಯಿತಿಯೊಂದಿಗೆ ಲಭ್ಯವಿದೆ. ಇದರಿಂದಾಗಿ ಬೆಲೆ 66,999 ರೂ.ಗೆ ಇಳಿಕೆಯಾಗಲಿದೆ. ನೀವು ಐಸಿಐಸಿಐ, ಎಸ್‌ಬಿಐ ಅಥವಾ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಇಎಂಐ ಮಾಡಿದರೆ, ಹೆಚ್ಚುವರಿಯಾಗಿ 5,000 ರೂ. ಡಿಸ್ಕೌಂಟ್ ಸಿಗುತ್ತದೆ. ಒಟ್ಟಾರೆಯಾಗಿ ಇದರ ಬೆಲೆ 61,999 ರೂ.ಗೆ ಕಡಿತವಾಗಲಿದೆ.

ಇನ್ನು ಮುಖ್ಯ ಅಂಗಡಿಗಳಲ್ಲಿ 7,000 ಎಕ್ಸ್‌ಚೇಂಜ್ ಬೋನಸ್ (ಮೇ 11 ಮತ್ತು 31 ರೊಳಗೆ) ಸಹ ಪಡೆಯಬಹುದು. ಈ ಫೋನ್ ಬ್ಲ್ಯಾಕ್ ಎಕ್ಲಿಪ್ಸ್, ಆರ್ಕ್ಟಿಕ್ ಡಾನ್ ಮತ್ತು ಮಿಡ್‌ನೈಟ್ ಓಷನ್ ಬಣ್ಣಗಳಲ್ಲಿ ಬರುತ್ತದೆ. ಈ ಸೇಲ್ ಇಂದಿನಿಂದ (ಮೇ 1) OnePlus.in, OnePlus ಸ್ಟೋರ್ ಅಪ್ಲಿಕೇಶನ್, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಕ್ರೋಮಾ, ರಿಲಯನ್ಸ್ ಡಿಜಿಟಲ್ ಮತ್ತು ವಿಜಯ್ ಸೇಲ್ಸ್‌ ಸೇರಿದಂತೆ ಪ್ರಮುಖ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಆಗಿದೆ. ರಿಯಾಯಿತಿಯೊಂದಿಗೆ OnePlus 13 ಖರೀದಿಸಲು ಈ ಲಿಂಕ್ ಕ್ಲಿಕ್ ಮಾಡಿ.

OnePlus 13 ದರ ಕಡಿತ! 8000 ರಿಯಾಯಿತಿ, 7000 ಎಕ್ಸ್‌ಚೇಂಜ್ ಆಫರ್.. ಬೆಲೆ ನೋಡಿ

ಒನ್‌ಪ್ಲಸ್‌ 13 ಫೀಚರ್ಸ್

ಒನ್‌ಪ್ಲಸ್‌ 13 ಡಿಸ್ಪ್ಲೇ

ಒನ್‌ಪ್ಲಸ್‌ 13 ಫೋನಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದು 6.82 ಇಂಚಿನ ಅಮೋಲೆಟ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು 3168 × 1440 ಪಿಕ್ಸೆಲ್‌ಗಳ ರೆಸಲ್ಯೂಶನ್‌, 120Hz ರಿಫ್ರೆಶ್ ದರ ಮತ್ತು 4,500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಈ ಫೋನ್ ಅಲ್ಟ್ರಾಸಾನಿಕ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ.

ಒನ್‌ಪ್ಲಸ್‌ 13 ಪ್ರೊಸೆಸರ್‌

ಈ ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್‌ ಪ್ರೊಸೆಸರ್‌ ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್‌ 15 ಆಧಾರಿತ ಆಕ್ಸಿಜನ್ ಓಎಸ್‌ 15 ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನ್‌ 12GB, 16GB ಮತ್ತು 24GB RAM ಹೊಂದಿದೆ. ಇದಕ್ಕೆ ಪೂರಕವಾಗಿ 256GB ಮತ್ತು 512GB ಸ್ಟೋರೇಜ್ ಆಯ್ಕೆ ಒದಗಿಸಲಾಗಿದೆ.

ಒನ್‌ಪ್ಲಸ್‌ 13 ಕ್ಯಾಮೆರಾ

ಒನ್‌ಪ್ಲಸ್‌ 13 ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಬರುತ್ತದೆ. ಜೊತೆಗೆ ದ್ವಿತೀಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಲೆನ್ಸ್ ಮತ್ತು ತೃತೀಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ ಲೆನ್ಸ್ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 32 ಮೆಗಾಪಿಕ್ಸೆಲ್ ಲೆನ್ಸ್ ಅಳವಡಿಸಲಾಗಿದೆ.

ಒನ್‌ಪ್ಲಸ್‌ 13 ಬ್ಯಾಟರಿ

ಒನ್‌ಪ್ಲಸ್‌ 13 ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 100W ವೇಗದ ಚಾರ್ಜಿಂಗ್ ತಂತ್ರಜ್ಞಾನ ಒದಗಿಸಲಾಗಿದೆ. ಇದರೊಂದಿಗೆ 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸಹ ಲಭ್ಯವಿದೆ.

Best Mobiles in India

English summary
OnePlus Summer Sale 2025: OnePlus 13 5G available with 8,000 discount: check new price, Offers, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+