Home
Deal of the day

ಬೊಂಬಾಟ್‌ ಆಫರ್‌! 5000 ಉಳಿತಾಯ.. 64MP ಕ್ಯಾಮೆರಾ.. ಈ OPPO ಫೋನಿನ ಬೆಲೆ ಭಾರೀ ಇಳಿಕೆ

ಒಪ್ಪೋ ಮೊಬೈಲ್‌ಗಳಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ ಇದೆ. ಗ್ರಾಹಕರು ಸಹ ಒಪ್ಪೋ ಫೋನ್‌ಗಳನ್ನು ಮುಗಿಬಿದ್ದು ಖರೀದಿಸುತ್ತಾರೆ. ಅದರಂತೆ, ಒಪ್ಪೋ ತನ್ನ ಅಭಿಮಾನಿಗಳಿಗೆ ಆಗಾಗ್ಗೆ ಸಿಹಿಸುದ್ದಿ ನಿಡುತ್ತಲೇ ಬಂದಿದೆ. ಇದೀಗ, ಹೊಸ ವರ್ಷದ ಪ್ರಯುಕ್ತ ಬೊಂಬಾಟ್ ಆಫರ್‌ ಘೋಷಿಸಿದೆ. ಹೌದು, ಒಪ್ಪೋ F27 ಪ್ರೊ+ (OPPO F27 Pro+) ಫೋನಿನ ಖರೀದಿ ಮೇಲೆ ಶೇ.15 ರಷ್ಟು ಡಿಸ್ಕೌಂಟ್ ನೀಡುತ್ತಿದೆ. ಈ ಫೋನ್ ಖರೀದಿಸಿದರೆ, ನೀವು 5000 ರೂ. ಉಳಿತಾಯ ಮಾಡಬಹುದು. ಬನ್ನಿ, ಈ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ಒಪ್ಪೋ F27 ಪ್ರೊ+ ಮೊಬೈಲ್ 64 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 6.7 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಹಾಗೆಯೇ 256GB ಸ್ಟೋರೇಜ್ ಮತ್ತು 5000mAh ಬ್ಯಾಟರಿಯನ್ನು ಹೊಂದಿದೆ. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನಿನ ಖರೀದಿಗೆ ಮೇಲೆ 5000 ರೂ. ರಿಯಾಯಿತಿ ಲಭ್ಯವಿದೆ. ಇದು ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ನೀವು, ಡಸ್ಕ್ ಪಿಂಕ್ ಮತ್ತು ಮಿಡ್‌ನೈಟ್ ನೇವಿ ಬಣ್ಣಗಳಲ್ಲಿ ಖರೀದಿಸಬಹುದು.

ಬೊಂಬಾಟ್‌ ಆಫರ್‌! 5000 ಉಳಿತಾಯ.. 15% ಡಿಸ್ಕೌಂಟ್‌.. ಈ OPPO ಫೋನಿನ ಬೆಲೆ ಇಳಿಕೆ

ಒಪ್ಪೋ F27 ಪ್ರೊ+ ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಒಪ್ಪೋ F27 ಪ್ರೊ+ ಸ್ಮಾರ್ಟ್‌ಫೋನ್ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 3D ಕರ್ವ್ ಅಮೋಲೆಡ್ ಡಿಸ್ಪ್ಲೇ ಆಗಿದೆ.ಈ ಡಿಸ್ಪ್ಲೇಯು 2412 × 1080 ಪಿಕ್ಸೆಲ್‌ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಹಾಗೆಯೇ 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 950 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಸಹ ಹೊಂದಿದೆ.

ಪ್ರೊಸೆಸರ್ ಯಾವುದು?

ಒಪ್ಪೋ F27 ಪ್ರೊ ಪ್ಲಸ್ ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 7050 ಆಕ್ಟಾಕೋರ್ ಪ್ರೊಸೆಸರ್‌ ಹೊಂದಿದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಇದು ಗ್ರಾಫಿಕ್ಸ್‌ಗಾಗಿ, ಮಾಲಿ G68 ಜಿಪಿಯು ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 14 ಆಧಾರಿತ ಯುಐ ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ.

ಸ್ಟೋರೇಜ್ ಆಯ್ಕೆ

ಒಪ್ಪೋ F27 ಪ್ರೊ+ ಫೋನ್ 8GB RAM ಹೊಂದಿದೆ. ಜೊತೆಗೆ 8GB ಡೈನಾಮಿಕ್ RAM ಬೆಂಬಲ ಸಹ ಲಭ್ಯವಿದೆ. ಈ ಫೋನ್ 128GB ಮತ್ತು 256GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್

ಒಪ್ಪೋ F27 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 8 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ ಹೊಂದಿದೆ. ಇದರಲ್ಲಿ ಎಐ ಅಲ್ಟ್ರಾ ಕ್ಲಿಯರ್ ಇಮೇಜಿಂಗ್, ಎಐ ಎರೇಸರ್, ಎಐ ಮ್ಯಾಟಿಂಗ್‌ ವೈಶಿಷ್ಟ್ಯಗಳು ಸಹ ಲಭ್ಯವಿದೆ.

ಬೊಂಬಾಟ್‌ ಆಫರ್‌! 5000 ಉಳಿತಾಯ.. 15% ಡಿಸ್ಕೌಂಟ್‌.. ಈ OPPO ಫೋನಿನ ಬೆಲೆ ಇಳಿಕೆ

5000mAh ಸಾಮರ್ಥ್ಯದ ಬ್ಯಾಟರಿ

ಒಪ್ಪೋ F27 ಪ್ರೊ+ ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 67W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಒಪ್ಪೋ F27 ಪ್ರೊ ಪ್ಲಸ್ ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP69, IP68 ಮತ್ತು IP66 ರೇಟಿಂಗ್ ಪಡೆದಿದೆ. ಹಾಗೆಯೇ ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸೆನ್ಸರ್‌ ಸಹ ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ವೈ-ಫೈ, ಬ್ಲೂಟೂತ್, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

ಒಪ್ಪೋ F27 ಪ್ರೊ+ ಬೆಲೆ ಮತ್ತು ಆಫರ್‌ಗಳು

ಒಪ್ಪೋ F27 ಪ್ರೊ+ ಫೋನಿನ 8GB + 128GB ಸ್ಟೋರೇಜ್ ರೂಪಾಂತರವನ್ನು 27,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. 8GB + 256GB ಸ್ಟೋರೇಜ್ ವೇರಿಯೆಂಟ್ ಬೆಲೆ 29,999 ರೂ. ಇದೆ. ಪ್ರಸ್ತುತ, ನೀವು 5000 ರೂ. ವಿಶೇಷ ರಿಯಾಯಿತಿಯೊಂದಿಗೆ 22,999 ರೂ. ಮತ್ತು 24,999 ರೂ.ಗೆ ಖರೀದಿಸಬಹುದು.

ನೀವು ಫ್ಲಿಪ್‌ಕಾರ್ಟ್‌ ಆಕ್ಸಿಸ್ ಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ ಬಳಸಿ ಈ ಮೊಬೈಲ್ ಖರೀದಿಸಿದರೆ, ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಸಿಗುತ್ತದೆ. ಹೆಚ್‌ಡಿಎಫ್‌ಸಿ ಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ಇಎಂಐ ಪಾವತಿ ಮೇಲೆ ಶೇ.10 ರಷ್ಟು ಬ್ಯಾಂಕ್ ಆಫರ್‌ ಲಭ್ಯವಿದೆ. ಜೊತೆಗೆ 6 ತಿಂಗಳ ನೊ ಕಾಸ್ಟ್ ಇಎಂಐ ಮತ್ತು ಎಕ್ಸ್‌ಚೇಂಜ್ ಆಫರ್ ಸಹ ನೀಡಲಾಗುತ್ತಿದೆ.

Best Mobiles in India

English summary
OPPO F27 Pro+ Available With 15 percent discount on flipkart sale: Check offer Price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+