ದೊಡ್ಡ ಕುಸಿತ! 1 ಲಕ್ಷದ ಫೋನ್ ಅರ್ಧ ಬೆಲೆಗೆ ಸೇಲ್; ಒಪ್ಪೋದಿಂದ ಭರ್ಜರಿ ಆಫರ್
ಒಪ್ಪೋ ಪ್ರಿಯರಿಗೆ ಭಾರೀ ಖುಷಿ ಸುದ್ದಿ! ಬರೋಬ್ಬರಿ 1 ಲಕ್ಷ ರೂಪಾಯಿ ಫೋನ್ ಅರ್ಧಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತೆ. ಹೌದು, ಚೀನಾದ ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿ ಒಪ್ಪೋ, ತನ್ನ ಫೋಲ್ಡಬಲ್ ಫೋನ್ ಒಪ್ಪೋ ಫೈಂಡ್ N3 ಫ್ಲಿಪ್ (Oppo Find N3 Flip) ಅನ್ನು 2023 ರಲ್ಲಿ ಬಿಡುಗಡೆ ಮಾಡಿತ್ತು. ಈ ಫೋನ್ ಸುಮಾರು 1 ಲಕ್ಷ ರೂಪಾಯಿ ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಆದರೆ, ಪ್ರಸ್ತುತ ಈಗ ಮೊಬೈಲ್ ಅನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ಒಪ್ಪೋ ಫೋನ್‌ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಾರೆ. ಇನ್ನು ಆಫರ್ ಇದೆ ಅಂದ್ರೆ, ಬಿಡ್ತಾರಾ? ಅದರಲ್ಲೂ ಹೊಸ ಫೋನ್ ಖರೀದಿಸುವವರಿಗೆ ಇದು ಸೂಕ್ತ ಸಮಯ. ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಈ ಭಾರೀ ಡಿಸ್ಕೌಂಟ್ ಲಭ್ಯವಿದೆ. ಅಷ್ಟೇ ಅಲ್ಲ, ಬ್ಯಾಂಕ್ ಆಫರ್ ಮತ್ತು ಎಕ್ಸ್‌ಚೇಂಜ್ ಆಯ್ಕೆಯೂ ಲಭ್ಯವಾಗಲಿದೆ. ಒಪ್ಪೋ ಫೈಂಡ್ N3 ಫ್ಲಿಪ್ (Oppo Find N3 Flip) ಫೋನಿನ ಹೊಸ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.

ಒಪ್ಪೋ ಫೈಂಡ್ N3 ಫ್ಲಿಪ್ ಬೆಲೆ ಮತ್ತು ಡಿಸ್ಕೌಂಟ್
- ಒಪ್ಪೋ ಫೈಂಡ್ N3 ಫ್ಲಿಪ್ ಬಿಡುಗಡೆ ಬೆಲೆ - 94,999 ರೂ.
- ಒಪ್ಪೋ ಫೈಂಡ್ N3 ಫ್ಲಿಪ್ ಡಿಸ್ಕೌಂಟ್ ಬೆಲೆ - 49,999 ರೂ.
ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಒಪ್ಪೋನ ಈ ಫೋಲ್ಡಬಲ್ ಸ್ಮಾರ್ಟ್‌ಫೋನನ್ನು ಶೇ.50 ರಷ್ಟು ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ಈ ಮೊಬೈಲ್ ಬೆಲೆ ಪ್ರಸ್ತುತ 49,999 ರೂ. ಇದೆ. ಬಿಡುಗಡೆಯ ಸಮಯದಲ್ಲಿ ಸುಮಾರು 1 ಲಕ್ಷ ರೂ. ಇತ್ತು. ಈ ಫ್ಲಿಪ್ ಮೊಬೈಲ್ ಖರೀದಿ ಮೇಲಿನ ಶೇ.50 ರಷ್ಟು ರಿಯಾಯಿತಿ ಸೀಮಿತ ಅವಧಿಗೆ ಮಾತ್ರ ಲಭ್ಯವಿರಲಿದೆ.
ಡಿಸ್ಕೌಂಟ್ ಜೊತೆಗೆ, HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್, EMI ವಹಿವಾಟುಗಳಲ್ಲಿ ಶೇ.10 ರಷ್ಟು ರಿಯಾಯಿತಿ ಲಭ್ಯವಿರುತ್ತದೆ. ನೀವು Flipkart Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, ಈ ಫೋನ್‌ನೊಂದಿಗೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಹಳೆಯ ಫೋನನ್ನು ಮಾರಾಟ ಮಾಡುವ ಅವಕಾಶವೂ ಇದೆ. ಇದರ ಸಹಾಯದಿಂದ ನೀವು 36,300 ರೂ. ವರೆಗೆ ಸಂಪೂರ್ಣ ಪ್ರಯೋಜನಗಳನ್ನು ಪಡೆಯಬಹುದು.
ಒಪ್ಪೋ ಫೈಂಡ್ N3 ಫ್ಲಿಪ್ ಖರೀದಿಸಬಹುದೇ?
ಒಪ್ಪೋ ಫೈಂಡ್ N3 ಫ್ಲಿಪ್ ಅನ್ನು 2023ರಲ್ಲಿ ಬಿಡುಗಡೆ ಮಾಡಲಾಯಿತು. ಇದು 6.80 ಇಂಚಿನ ಪ್ರಾಥಮಿಕ ಮತ್ತು 3.36 ಇಂಚಿನ AMOLED ಕವರ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಡೈಮೆನ್ಶನ್ 9200 ಚಿಪ್, 12GB RAM + 256GB ಸ್ಟೋರೇಜ್, 50 ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಸೆಟಪ್, 32MP ಫ್ರಂಟ್ ಕ್ಯಾಮೆರಾ ಮತ್ತು 4,300mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ನಿಮಗೆ ಫ್ಲಿಪ್ ಫೋನ್‌ಗಳನ್ನು ಖರೀದಿಸುವ ಮನಸ್ಸು ಇದ್ದರೆ, ಇದು ಉತ್ತಮ ಆಯ್ಕೆಯಾಗಿದೆ.
ಒಪ್ಪೋ ಫೈಂಡ್ N3 ಫ್ಲಿಪ್ ಫೋನಿನ ಫೀಚರ್ಸ್
ಡಿಸ್ಪ್ಲೇ: ಒಪ್ಪೋ ಫೈಂಡ್ N3 ಫ್ಲಿಪ್ 6.80 ಇಂಚಿನ FullHD+ ಪ್ರಾಥಮಿಕ AMOLED ಡಿಸ್ಪ್ಲೇ ಹೊಂದಿದೆ. ಇದರಲ್ಲಿ 120Hz ರಿಫ್ರೆಶ್ ರೇಟ್ ಬೆಂಬಲ ಲಭ್ಯವಿದೆ. ಜೊತೆಗೆ, 3.36 ಇಂಚಿನ AMOLED ಕವರ್ ಡಿಸ್ಪ್ಲೇ ಹೊಂದಿದೆ.
ಪ್ರೊಸೆಸರ್: ಒಪ್ಪೋ ಫೈಂಡ್ N3 ಫ್ಲಿಪ್ ಫೋನ್ MediaTek ಡೈಮೆನ್ಶನ್ 9200 ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಇದರೊಂದಿಗೆ, ಗ್ರಾಫಿಕ್ಸ್‌ಗಾಗಿ Mali-G715 GPU ಇದೆ.
ಕ್ಯಾಮೆರಾ: ಈ ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ IMX890 ಸಂವೇದಕ, 32 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಲಭ್ಯವಿದೆ. ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.
ಬ್ಯಾಟರಿ: ಒಪ್ಪೋ ಫೈಂಡ್ N3 ಫ್ಲಿಪ್ ಸ್ಮಾರ್ಟ್‌ಫೋನ್ 4,300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು, 44W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.


Click it and Unblock the Notifications








